ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು ಪ್ರಮುಖವಾಗಿದ್ದರೂ, ನಾಗರಿಕರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ರೀತಿಯಲ್ಲಿ ಕೈಗೊಳ್ಳಬಾರದು ಎಂದು ಕೇರಳ ಹೈಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕರಿಗೆ ಅಪಾಯ ತಂದೊಡ್ಡುವ ಮರಗಳನ್ನು ಅಗತ್ಯದಷ್ಟೇ ತೆಗೆಯಬಹುದು. ಆದರೆ ಯಾವುದೇ ಕಾರಣವಿಲ್ಲದೆ ಮರಗಳನ್ನು ಕಡಿಯುವುದು ನಮ್ಮ ಮಾತೃಭೂಮಿಯ ಪ್ರಕೃತಿ ಮತ್ತು ಪರಿಸರದ ಹತ್ಯಾಕಾಂಡ.