24 ಗಂಟೆಗಳಲ್ಲಿ 80 ಭೂಕಂಪ | ಭೂಕಂಪದ ತೀವ್ರತೆಯಲ್ಲಿ ತೈವಾನ್‌ |

April 23, 2024
2:39 PM
ತೈವಾನ್‌ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 80 ಕ್ಕೂ ಹೆಚ್ಚು ಭೂಕಂಪಗಳು, ಅದರಲ್ಲಿ 6.3 ತೀವ್ರತೆ ಕಂಡುಬಂದಿದೆ.

80 ಕ್ಕೂ ಹೆಚ್ಚು ಭೂಕಂಪಗಳು, ಅದರಲ್ಲಿ 6.3 ತೀವ್ರತೆ.  ಇದು ತೈವಾನ್‌ ಸ್ಥಿತಿ. ತೈವಾನ್‌ನ ಪೂರ್ವ ಕರಾವಳಿಗೆ  ಅಪ್ಪಳಿಸಿದ ಭೂಕಂಪ, ರಾಜಧಾನಿ ತೈಪೆಯಲ್ಲಿ ಕಟ್ಟಡಗಳನ್ನು ನೆಲಸಮ ಮಾಡಿದೆ ಎಂದು ತೈವಾನ್‌  ಆಡಳಿತ ತಿಳಿಸಿದೆ.  ಏಪ್ರಿಲ್ 3 ರಂದು 7.2 ತೀವ್ರತೆಯ ಭೂಕಂಪದ ನಂತರ ಕನಿಷ್ಠ 14 ಜನರು ಸಾವನ್ನಪ್ಪಿದರು. ಇದು ತೈವಾನ್‌ನಲ್ಲಿ ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಪ್ರಬಲ ಭೂಕಂಪವಾಗಿದೆ.

Advertisement
Advertisement

ಮಂಗಳವಾರದ 6.1 ತೀವ್ರತೆಯ ಭೂಕಂಪವು  ಹುವಾಲಿಯನ್ ನಗರದ ದಕ್ಷಿಣಕ್ಕೆ  ಕೇಂದ್ರೀಕೃತವಾಗಿತ್ತು.  ತೈವಾನ್ ಗೆ ಪ್ರಬಲ ಭೂಕಂಪಗಳಿಗೆ ಹೊಸದೇನಲ್ಲ, ದ್ವೀಪದ 23 ಮಿಲಿಯನ್ ನಿವಾಸಿಗಳ ಭೂಕಂಪದ ಎದುರಿಸಲು ಅಗತ್ಯವಾದ ಮುನ್ಸೂಚನೆಯನ್ನು ಕಟ್ಟಡ ಕಟ್ಟುವಾಗಲೇ ಸಿದ್ಧ ಮಾಡುತ್ತಾರೆ ಹಾಗೂ   ಭೂಕಂಪಗಳ ಬಗ್ಗೆ ವ್ಯಾಪಕವಾದ ಸಾರ್ವಜನಿಕ  ಅಭಿಯಾನಗಳನ್ನು ಮಾಡುತ್ತದೆ. ಹೀಗಾಗಿ ಸತತ 80 ಭೂಕಂಪನಗಳು ಸಂಭವಿಸಿದರೂ ಅಪಾದ ಸಂಖ್ಯೆ ಕಡಿಮೆಯಾಗುತ್ತದೆ.

Advertisement

ಏಪ್ರಿಲ್ 3 ರಂದು,  7.2 ತೀವ್ರತೆಯ ಭೂಕಂಪ ಸಂಭವಿಸಿತ್ತು, ಇದರಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದರು ಮತ್ತು ಅಂದಿನಿಂದ 1,000 ಕ್ಕೂ ಹೆಚ್ಚು ಭೂಕಂಪಗಳು ತೈವಾನ್‌ನಲ್ಲಿ ಸಂಭವಿಸಿವೆ. ರಾಜಧಾನಿ ತೈಪೆ ಸೇರಿದಂತೆ ಉತ್ತರ, ಪೂರ್ವ ಮತ್ತು ಪಶ್ಚಿಮ ತೈವಾನ್‌ನ ದೊಡ್ಡ ಭಾಗಗಳಲ್ಲಿ ಕಟ್ಟಡಗಳು ಕಳೆದ 24 ಗಂಟೆಗಳಲ್ಲಿ ಹತ್ತಾರು ಬಾರಿ ಅಲುಗಾಡಿದ್ದು, ಪ್ರಬಲವಾದ ಭೂಕಂಪವು 6.3 ರಷ್ಟಿದೆ. 2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ
ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror