ಕಳಪೆ ಬೀಜ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ : ರಸಗೊಬ್ಬರ ಸಮರ್ಪಕವಾಗಿ ವಿತರಣೆ ಮಾಡಿ : ಜಿಲ್ಲಾಧಿಕಾರಿಗಳಿಗೆ ಸಿಎಂ ಖಡಕ್‌ ಸೂಚನೆ

July 10, 2024
1:14 PM

ರಾಜ್ಯದಲ್ಲಿ ಮುಂಗಾರು ಮಳೆ(Monsoon Rain) ಚೆನ್ನಾಗಿ ಆಗುತ್ತಿದೆ. ಹಾಗಾಗಿ ರೈತರು(Farmers) ಬಿತ್ತನೆ ಕಾರ್ಯದಲ್ಲಿ(Sowing work)ನಿರತರಾಗಿದ್ದಾರೆ. ಈ ವೇಳೆ ರೈತರಿಗೆ  ಕಳಪೆ ಬೀಜ(Poor seed)ಸಿಗದಂತೆ ತಡೆಗಟ್ಟಬೇಕು ಹಾಗೂ ರಸಗೊಬ್ಬರ(Fertilizer)ಸಮರ್ಪಕವಾಗಿ ವಿತರಣೆ ಮಾಡಲು  ಕ್ರಮ ಕೈಗೊಳ್ಳಬೇಕು. ಮತ್ತು ರೈತರಿಗೆ ಬೆಳೆ ವಿಮೆ(Crop insurance) ಸರಿಯಾಗಿ ದೊರೆಯುವುದನ್ನು ಖಾತ್ರಿಪಡಿಸಲು ಬೆಳೆ ಕಟಾವು ಪ್ರಯೋಗವನ್ನು ಹೆಚ್ಚಿಸಲು ಜಿಲ್ಲಾಧಿಕಾರಿಗಳು(DC) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 82.48 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಇದುವರೆಗೆ 50.91 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿದೆ. ಇನ್ನೂ 32 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಬೇಕಾಗಿದ್ದು ಈ ಬಾರಿ ಎಲ್ಲಾ ಕಡೆ ಉತ್ತಮ ಮಳೆಯಾಗಿರುವ ಕಾರಣ ಬಿತ್ತನೆ ಗುರಿ ಸಾಧಿಸುವ ಭರವಸೆ ಹೊಂದಲಾಗಿದೆ. ಬಿತ್ತನೆ ಬಳಿಕ ಮಳೆಯಾಗದೇ ಮೊಳಕೆಯಲ್ಲೇ ಹಾಳಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

ಪ್ರಸ್ತುತ ಸಾಲಿನಲ್ಲಿ 291940 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು, ಬೀಜ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿದೆ. ಬೀಜ ಮೊಳಕೆ ಬಾರದ ಬಗ್ಗೆ ಯಾವುದೇ ದೂರುಗಳು ಇದುವರೆಗೆ ಬಂದಿಲ್ಲ. ಕಳಪೆ ಬೀಜ ತಡೆಗಟ್ಟಲು ಎಲ್ಲಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಇದೇ ಅವಧಿಯಲ್ಲಿ 1162498 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟ ಮಾಡಲಾಗಿದ್ದು, ಇನ್ನೂ 1516007 ರಸಗೊಬ್ಬರ ದಾಸ್ತಾನು ಇದೆ. ರಸಗೊಬ್ಬರ ಸಮರ್ಪಕವಾಗಿ ವಿತರಣೆ ಮಾಡಲು ಎಲ್ಲಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರೈತರಿಗೆ ಬೆಳೆ ವಿಮೆ ಸರಿಯಾಗಿ ದೊರೆಯುವುದನ್ನು ಖಾತ್ರಿಪಡಿಸಲು ಬೆಳೆ ಕಟಾವು ಪ್ರಯೋಗವನ್ನು ಹೆಚ್ಚಿಸಬೇಕು. ಈ ಸಂದರ್ಭದಲ್ಲಿ ರೈತ ಪ್ರತಿನಿಧಿ ಸಹ ಸ್ಥಳದಲ್ಲಿ ಹಾಜರಿರಬೇಕು.

ಕಳೆದ ಸಾಲಿನಲ್ಲಿ ಬೆಳೆವಿಮೆ ಯೋಜನೆಯಡಿ 24,52,393 ರೈತರು ನೋಂದಣಿ ಮಾಡಿದ್ದು, ಪ್ರಸ್ತುತ ಮುಂಗಾರಿನಲ್ಲಿ ಇದುವರೆಗೆ 508550 ರೈತರು ನೋಂದಣಿ ಮಾಡಿದ್ದಾರೆ. ಇನ್ನೂ 19,43,843 ರೈತರು ನೋಂದಣಿ ಮಾಡಬೇಕಾಗಿದೆ. ಬೆಳೆ ವಿಮೆ ಲಾಭ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ದೊರೆಯುವುದನ್ನು ಖಾತ್ರಿ ಪಡಿಸಬೇಕು ಎಂದರು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ಕೆಲವು ರಾಜ್ಯಗಳು ಹೊರ ಬಂದಿವೆ. ಬೆಳೆ ವಿಮೆ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಪರಿಶೀಲನೆ ನಡೆಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಹಿರಿಯ ಸಚಿವರ ಸಭೆಯನ್ನು ನಡೆಸಲಾಗುವುದು. ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಹಾಗೆ ಬೆಳೆ ಸಮೀಕ್ಷೆ ಶೇ.100ರಷ್ಟು ಕೈಗೊಳ್ಳಬೇಕು. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕು. ಈ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.

  • ಅಂತರ್ಜಾಲ ಮಾಹಿತಿ

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ
March 12, 2025
10:13 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |
March 12, 2025
10:03 PM
by: ದ ರೂರಲ್ ಮಿರರ್.ಕಾಂ
ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್
March 12, 2025
7:19 AM
by: The Rural Mirror ಸುದ್ದಿಜಾಲ
 ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ
March 12, 2025
7:13 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror