Advertisement
Categories: Uncategorized

ಯುಪಿ ಮಾದರಿ ಬಗ್ಗೆ ಕರ್ನಾಟಕದಲ್ಲಿ ಪ್ರಸ್ತಾಪಿಸುವುದೇ ಹಾಸ್ಯಾಸ್ಪದ: ಆದಿತ್ಯನಾಥ್ ಹೇಳಿಕೆಗೆ ಸಿದ್ದರಾಮಯ್ಯ ಲೇವಡಿ

Share

”ಕೇಂದ್ರ ಸರ್ಕಾರದ ದಾಖಲೆಗಳ ಪ್ರಕಾರ ಉತ್ತರಪ್ರದೇಶದಲ್ಲಿ ಆರು ವರ್ಷದ ಒಳಗಿನ ಮಕ್ಕಳ ಅನಿಮಿಯಾ ಪ್ರಮಾಣ 2016ರಲ್ಲಿ ಶೇ 63.2 ರಷ್ಟಿತ್ತು, ಅದನ್ನು ಶೇ 66.4 ಕ್ಕೆ ಹೆಚ್ಚಿಸಿ ಮಕ್ಕಳನ್ನು ರೋಗಗ್ರಸ್ತ ಮಾಡಿದ್ದು ಯೋಗಿ ಸಾಧನೆ. ಎಲ್ಲ ರಾಜ್ಯಗಳಲ್ಲಿ ಜನರ ಜೀವಿತಾವಧಿ ಹೆಚ್ಚುತ್ತಿದ್ದರೆ ಉತ್ತರಪ್ರದೇಶದಲ್ಲಿ ಕುಸಿಯುತ್ತಿರುವುದು ಅವರದ್ದೇ ಮಾದರಿಯಲ್ಲವೇ?” ಎಂದು ಟೀಕಿಸಿದ್ದಾರೆ.

Advertisement
Advertisement
Advertisement

ಅದಿತ್ಯನಾಥ್ ಅವರು ಅಲ್ಲಿ ಮುಖ್ಯಮಂತ್ರಿಯಾದ ಬಳಿಕ ಉತ್ತರ ಪ್ರದೇಶದಲ್ಲಿ ಅಂತಹ ಗಮನಾರ್ಹವಾದ ಬದಲಾವಣೆಗಳೇನು ಆಗಿಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅವರು, ಉತ್ತರ ಪ್ರದೇಶದಲ್ಲಿನ ಬಡತನ, ನಿರುದ್ಯೋಗ, ಹಿಂಸಾಚಾರದಲ್ಲಿ ದೇಶದಲ್ಲೇ ಯಾಕೆ ಕುಖ್ಯಾತಿಯನ್ನು ಪಡೆದಿದೆ?” ಎಂದು ಪ್ರಶ್ನಿಸಿದ್ದಾರೆ.

Advertisement

ದಾಖಲೆಗಳೊಂದಿಗೆ ಉ.ಪ್ರದೇಶದ ಪರಿಸ್ಥಿತಿ ವಿವರಿಸಿದ ಸಿದ್ದರಾಮಯ್ಯ 

1. ಕೇಂದ್ರ ಸರಕಾರದ ದಾಖಲೆಗಳ ಪ್ರಕಾರ ಉತ್ತರಪ್ರದೇಶದಲ್ಲಿ 6 ವರ್ಷದ ಒಳಗಿನ ಮಕ್ಕಳ ಅನಿಮಿಯಾ ಪ್ರಮಾಣ ಶೇ. 66.4 ರಷ್ಟಿದೆ. ಇದು 2016 ರಲ್ಲಿ ಶೇ.63.2 ರಷ್ಟಿತ್ತು. ಶೇ.3.2ರಷ್ಟು ಅಪೌಷ್ಟಿಕತೆಯನ್ನು ಹೆಚ್ಚಿಸಿ ಮಕ್ಕಳನ್ನು ರೋಗಗ್ರಸ್ತ ಮಾಡಿದ್ದು ಯೋಗಿ ಆದಿತ್ಯ ನಾಥ್ ಅವರ ಸಾಧನೆ.

Advertisement

2. 2016ರಲ್ಲಿ ಉತ್ತರ ಪ್ರದೇಶದ ಮಹಿಳೆಯರ ಸರಾಸರಿ ಜೀವಿತಾ ವಧಿ 68.5 ರಷ್ಟಿತ್ತು. 2019ರಲ್ಲಿ ಅದು ಶೇ.66.2ಕ್ಕೆ ಕುಸಿದಿದೆ. ಎಲ್ಲ ರಾಜ್ಯಗಳ ಜನರ ಜೀವಿತಾವಧಿ ಹೆಚ್ಚುತ್ತಿದ್ದರೆ ಉತ್ತರ ಪ್ರದೇಶ ದಲ್ಲಿ ಕುಸಿಯುತ್ತಿದೆ. ಇದೇ ಅಲ್ಲವೆ ಆದಿತ್ಯನಾಥ್ ಮಾದರಿ.

3. ತಲಾ ವಾರು ವಿದ್ಯುತ್‌ ಲಭ್ಯತೆಯು ಕರ್ನಾಟಕದಲ್ಲಿ 1,184 ಕಿಲೋವ್ಯಾಟ್‌ಗಳಷ್ಟಿದ್ದರೆ, ಉತ್ತರ ಪ್ರದೇಶದಲ್ಲಿ ಕೇವಲ 642 ಕಿಲೋವ್ಯಾಟ್‌ಗಳಷ್ಟಿದೆ. ಆದಿತ್ಯನಾಥರು ಮುಖ್ಯಮಂತ್ರಿಯಾದ ಮೇಲೆ ಗಮನಾರ್ಹ ಬದಲಾವಣೆಯೇನೂ ಸಂಭವಿಸಿಲ್ಲ. ಅಭಿವೃದ್ಧಿಗೂ ವಿದ್ಯುತ್‌ ಬಳಕೆಗೂ ಸಂಬಂಧವಿದೆ.

Advertisement

4. 2021ರ ದಾಖಲೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ 3,012 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದರೆ, ಕೆಲಸ ಮಾಡುತ್ತಿರುವವರು ಕೇವಲ 872 ಜನ ಮಾತ್ರ. 2,030 ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಬೇಕಾದ ವೈದ್ಯರ 1,355 ಹುದ್ದೆಗಳು ಖಾಲಿ ಇವೆ. ಜನರ ಆರೋಗ್ಯ ಸುಧಾರಿಸದೆ ರಾಜ್ಯವನ್ನು ಅಭಿವೃದ್ಧಿ ಮಾಡುವುದು ಹೇಗೆ?

5, ಉತ್ತರ ಪ್ರದೇಶದಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ ಮತ್ತು ರೈತರು ಮುಂತಾದ ದಮನಿತ ವರ್ಗಗಳು ಬದುಕಲಾಗದಷ್ಟು ಪರಿಸ್ಥಿತಿ ಹಾಳಾಗಿದೆಯೆಂಬ ಮಾಹಿತಿ ಇದೆ. ಶತಮಾನಗಳಿಂದ ದಮನಿಸಲ್ಪಟ್ಟ ಜನರನ್ನು ಬಾಬಾಸಾಹೇಬರ ಆಶಯಗಳು, ಮಚ್ಚೇಂದ್ರನಾಥ್, ಗೋರಖ್‌ ನಾಥರ, ಕಬೀರರ ಆಶಯಗಳಿಗೆ ವಿರುದ್ಧವಾಗಿ ದಮನಿಸಿ ನಾಶ ಮಾಡುವುದೇ ಉತ್ತರ ಪ್ರದೇಶ ಮಾದರಿಯೆಂಬುದನ್ನು ಆದಿತ್ಯನಾಥರು ಸಾಬೀತು ಮಾಡಿದ್ದಾರೆ. ಇದನ್ನು ಉತ್ತರ ಪ್ರದೇಶದ ಮಾದರಿ ಎನ್ನುವುದಕ್ಕಿಂತ ಆದಿತ್ಯನಾಥ್ ಮಾದರಿ ಎನ್ನಬೇಕಾಗುತ್ತದೆ. ಇಂಥ ಮಾದರಿಯನ್ನು ಕರ್ನಾಟಕದಲ್ಲಿ ಬಿತ್ತಲು ರಾಜ್ಯದ ಜನರು ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಇಲ್ಲಿ ಬಸವಣ್ಣನವರು, ಕನಕದಾಸರು,  ನಾರಾಯಣ ಗುರುಗಳು, ಮಹಾಕವಿ ಕುವೆಂಪು ಅವರು, ಬಾಬಾಸಾಹೇಬರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮತ್ತು ದೇವರಾಜ ಅರಸು ಅವರಂಥ ಧೀಮಂತರ ಮಹಾನ್ ಮಾದರಿಗಳು ಕರ್ನಾಟಕದಲ್ಲಿದೆ. ಅವುಗಳನ್ನು ಬೇಕಿದ್ದರೆ ಆದಿತ್ಯನಾಥರು ಕಲಿತುಕೊಂಡು ಹೋಗಿ ಅಲ್ಲಿ ಅಳವಡಿಸಿಕೊಳ್ಳಲಿ. ಆಗಲಾದರೂ ಅಲ್ಲಿನ ದಮನಿತರಾದ ನನ್ನ ಸೋದರ ಜಾತಿ-ಜನಾಂಗಗಳ ಜನರು ತುಸು ನೆಮ್ಮದಿಯಾಗಿ ಊಟ ಮಾಡಿ, ದುಡಿಮೆ ಮಾಡಿ ಜೀವಿಸಲಿ

Advertisement

6. ಯೋಗಿ ಆದಿತ್ಯನಾಥರ ನೀವು ಯಾವ ಮುಖ ಹೊತ್ತು ರಾಜ್ಯದಲ್ಲಿ ಮತ ಕೇಳುತ್ತೀರಿ ಹಳಿ ನಿಮ್ಮ ಅಂದಾದುಂದಿ ಆಡಳಿತ ನಡೆಸುವುದಕ್ಕಾಗಿ ದಕ್ಷಿಣದ ರಾಜ್ಯಗಳ ಜನರ ಜೀವ ಹಿಂಡಿ ಮೋದಿ ಸರಕಾರ ನಿಮಗೆ ಅನುದಾನಗಳನ್ನು ಕೊಡುತ್ತಿದೆ ನಿಮ್ಮ ರಾಜ್ಯದ ಬಜೆಟ್‌ನ ಶೇ.50ರಷ್ಟು ಅನುದಾನವನ್ನು ಮೋದಿ ಸರಕಾರ ಕೊಡುತ್ತಿದೆ. ಆದರೆ ಕರ್ನಾಟಕಕ್ಕೆ ಕೇವಲ ಶೇ.16.15 ರಷ್ಟನ್ನು ಮಾತ್ರ ಕೊಡುತ್ತಿದೆ.

7. ಉತ್ತರ ಪ್ರದೇಶದ 2023-24ರ ಬಜೆಟ್ ಗಾತ್ರ 6.9 ಲಕ್ಷ ಕೋಟಿ ರೂ. ಅದರಲ್ಲಿ ತೆರಿಗೆ ಪಾಲು 18,3238 ಕೋಟಿ ರೂಪಾಯಿ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ 11,42,15 ಕೋಟಿ ರೂಪಾಯಿಗಳು ಎರಡೂ ಸವಿ 20,74,51 ಕೋಟಿ ರೂಪಾಯಿಗಳನ್ನು ಉತ್ತರ ಪ್ರದೇಶವು ಕೇಂದ್ರದಿಂದ ಪಡೆಯುತ್ತಿದೆ. ಇದರಲ್ಲಿ ಹಣಕಾಸು ಆಯೋಗದ ನೇರ ಅನುದಾನಗಳು ಸೇರಿಲ್ಲ. ಸೇರಿದರೆ ಶೇ.50 ಅನ್ನ ಮೀರುತ್ತದೆ.ಉತ್ತರ ಪ್ರದೇಶದಲ್ಲಿ ಈ ವರ್ಷ ಜಿಎಸ್‌ ಟಿ ಮತ್ತು ಆದಾಯ ತೆರಿಗೆಗಳಿಂದ ಸಂಗ್ರಹವಾಗುವ ಅಂದಾಜು ಮೊತ್ತ 1.34 ಲಕ್ಷ ಕೋಟಿ ರೂಪಾಯಿಗಳು.

Advertisement

8.. ಕರ್ನಾಟಕದ ಜನರಿಂದ ಮೋದಿ ಸರಕಾರ ಜಿಎಸ್‌ ಟಿ ಮತ್ತು ನೇರ ತೆರಿಗೆಗಳಿಂದ ಈ ವರ್ಷ 3.72 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯ ಸಂಗ್ರಹಿಸುತ್ತದೆ. ಆದರೆ ನಮ್ಮ ರಾಜ್ಯಕ್ಕೆ ಸಿಗುವ ತೆರಿಗೆ ಪಾಲು 37 ಸಾವಿರ ಕೋಟಿ ರೂ.ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಿಗುವ ಪಾಲು 13 ಸಾವಿರ ಕೋಟಿ ರೂ. ಎರಡೂ ಸೇರಿದರೆ 50 ಸಾವಿರ ಕೋಟಿ ಆಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಣವೂ ಪೂರ್ಣ ಪ್ರಮಾಣದಲ್ಲಿ ಬರುವುದು ಅನುಮಾನ. 1.34 ಲಕ್ಷ ಕೋಟಿ ರೂ.ತೆರಿಗೆ ಸಂಗ್ರಹಿಸಿ 3 ಲಕ್ಷ ಕೋಟಿ ರೂ.ಗೂ ಹೆಚ್ಚು ಅನುದಾನ ಪಡೆಯುವ ಉತ್ತರ ಪ್ರದೇಶವೆಲ್ಲಿ? 3.72 ಲಕ್ಷ ಕೋಟಿ ರೂ.ತೆರಿಗೆ ಪಾವತಿಸಿ 50 ಸಾವಿರ ಕೋಟಿ ರೂ. ಹಾಲಾ ಪಡೆಯುವ ಕರ್ನಾಟಕವೆಲ್ಲಿ?

9. ಕೇಂದ್ರದಿಂದ ಇನ್ನೂ ಹೆಚ್ಚು ಅನುದಾನ ತೆಗೆದುಕೊಳ್ಳಿ ಅಡ್ಡಿ ಯಿಲ್ಲ. ತೆಗೆದುಕೊಂಡು ದಮನಿತ ಜಾತಿ ಸಮುದಾಯಗಳನ್ನು ಅಭಿವೃದ್ಧಿ ಮಾಡಿ ನಾನು ಸಂತೋಷ ಪಡುತ್ತೇನೆ, ಆದರೆ ಕೇಂದ್ರ ಉಳಿಸಿಕೊಳ್ಳುವ ಯಥೇಚ್ಛ ಸಂಪನ್ಮೂಲಗಳಲ್ಲಿ ನಮಗೆ ವಿಶೇಷ ಅನುದಾನಗಳನ್ನು ಕೊಡಿ, ಕರ್ನಾಟಕ ಮುಂತಾದ ದಕ್ಷಿಣದ ರಾಜ್ಯಗಳ ಕಾಮಧೇನುವಿನಂಥ ಕೆಚ್ಚಲು ಕೊಯ್ದು ನಮಗೆ ಪಾಲು ಕೊಡುವುದು ಬೇಡ ಎಂದು ನರೇಂದ್ರಮೋದಿಯವರಿಗೆ ನೀವು ಪತ್ರ ಬರೆದೊ ಇಲ್ಲ ಮನವಿ ಮಾಡಿಯೊ ಒತ್ತಾಯಿಸಿದ್ದರೆ, ನಿಮಗೆ ಕರ್ನಾಟಕಕ್ಕೆ ಬಂದು ಮತ ಕೇಳುವ ನೈತಿಕತೆ ಇರುತ್ತಿತ್ತು. ಈಗ ನಿಮ್ಮಲ್ಲಿ ಆ ನೈತಿಕತೆ ಉಳಿದಿಲ್ಲ. ಹಾಗಿದ್ದರೂ ಯಾವ ಮುಖ ಹೊತ್ತು ಮತ ಕೇಳುತ್ತೀರಿ?10. ನೀವು ರಾಜ್ಯದಲ್ಲಿ ಹಲವು ಸುಳ್ಳು ಹೇಳಿದ್ದೀರಿ. ಸುಳ್ಳು ನಿಮ್ಮ ವ್ಯಕ್ತಿ ಶೋಭೆ ತರುವುದಿಲ್ಲ. ನೀವು ಹೇಳಿದ ಸುಳ್ಳುಗಳಲ್ಲಿ ಪಿಎಫ್ ಐ ವಿಚಾರವೂ ಸೇರಿದೆ. ಕರ್ನಾಟಕದಲ್ಲಿ ಪಿಎಫ್‌ ಐ ಮತ್ತು ಎಸ್‌ ಡಿಪಿಐ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣ ವನ್ನು ಬಿಜೆಪಿ ಸರಕಾರವೆ ಹಿಂಪಡೆದಿದೆ ಎಂದು ಬೊಮ್ಮಾಯಿ ಸರಕಾರವೆ ನನಗೆ ಮಾಹಿತಿ ನೀಡಿದೆ. ಉತ್ತರ ಕರ್ನಾಟಕದ ಹೊನ್ನಾವರದಲ್ಲಿ ದಾಖಲಾಗಿದ್ದ ಸಿಸಿ.ನಂ.483/2019 ಸಂಬಂ ಧಿಸಿದ ಪ್ರಕರಣವನ್ನು ದಿನಾಂಕ 13-10-2020 ರಂದು ರಾಜ್ಯ ಬಿಜೆಪಿ ಸರಕಾರ ಹಿಂದಕ್ಕೆ ಪಡೆದಿದೆ. ಇದಕ್ಕೆ ಏನು ಹೇಳುತ್ತೀರಿ ಯೋಗಿ ಆದಿತ್ಯನಾಥ್ ಅವರೆ? ನೀವು ಸುಳ್ಳು ಹೇಳುತ್ತಾ ಹೋಗಿ, ನಾವು ಸತ್ಯವೇನೆಂದು ನಿಮ್ಮ ಮುಖದ ಮುಂದೆ ಇಡುತ್ತೇವೆ. ಯಾರು ಸರಿ ಎಂದು ಜನರೆ ತೀರ್ಮಾನಿಸಲಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ

ಸಿರಿಧಾನ್ಯಗಳ  ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕೃಷಿ ಇಲಾಖೆ  “ಸಿರಿಧಾನ್ಯ ಓಟ…

15 hours ago

ಬೆಂಗಳೂರಿನಲ್ಲಿ ತುಂತುರು ಮಳೆ | ರಾಜ್ಯಾದ್ಯಂತ ಮುಂದಿನ ಐದು ದಿನ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…

15 hours ago

ಹವಾಮಾನ ವರದಿ | 19.01.2025 | ಇಂದು ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಕೃಷಿಕರೇ ಇರಲಿ ಎಚ್ಚರ |

20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…

1 day ago

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

1 day ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

1 day ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

4 days ago