ಮಣ್ಣಿನೊಂದಿಗೆ ಮಾತುಕತೆ | ವಿಸ್ತಾರಗೊಂಡ ಮಾಹಿತಿ – ಅನುಭವ ಹಂಚಿಕೆ |

November 9, 2023
1:50 PM

ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ಭತ್ತದ ಗದ್ದೆಗಳು. ಅದರಲ್ಲಿ ರಸವಿಷದಿಂದ ತೋಯ್ದ ಗದ್ದೆಗಳೆಷ್ಟೋ? ಆದರೆ ಮಲ್ಲನಗೌಡ ಮಾಲಿ ಪಾಟೀಲ ಕೃಷಿ ವಿಭಿನ್ನ. ‘ಮಣ್ಣಿಗೆ ರಾಸಾಯನಿಕ(Chemical) ಸುರಿಯುವ ಬದಲಿಗೆ, ಎರೆಜಲ ಹಾಗೂ ಗೋಕೃಪಾಮೃತ ಬಳಸುತ್ತ, ಸಾವಯವದಲ್ಲಿ ಭತ್ತ ಬೆಳೆಯುತ್ತಿರುವೆ’ ಎಂದರು ಮಲ್ಲನ ಗೌಡ ಮಾಲಿಪಾಟೀಲ. ಭತ್ತದ ಜತೆಗೆ ಒಂದೂವರೆ ಎಕರೆ ತೋಟದಲ್ಲಿ ತರಹೇವಾರಿ ಹಣ್ಣಿನ ಗಿಡಗಳನ್ನೂ, ಸೊಪ್ಪು-ತರಕಾರಿ- ಔಷಧೀಯ ಮೂಲಿಕೆಗಳನ್ನೂ ಮಲ್ಲನಗೌಡರು ಬೆಳೆಯುತ್ತಿದ್ದಾರೆ.

ಕನಕಗಿರಿ ತಾಲ್ಲೂಕಿನ ಜೀರಾಳಕಲ್ಗುಡಿ ಗ್ರಾಮದ ಹೊರವಲಯದಲ್ಲಿನ ಮಲ್ಲನಗೌಡರ ತೋಟದಲ್ಲಿ ‘ಮಣ್ಣಿನೊಂದಿಗೆ ಮಾತುಕತೆ’ಯ 23ನೇ ಆವೃತ್ತಿ  ಕಳೆದ ಭಾನುವಾರ ನಡೆಯಿತು. ಬಾಳೆ, ದಾಳಿಂಬೆ ಹಾಗೂ ಬೀಜೋತ್ಪಾದನೆ ವಲಯದಲ್ಲಿ ಹಲವಾರು ಏರಿಳಿತ ಕಂಡಿರುವ ಮಲ್ಲನಗೌಡರು ಈಚೀಚೆಗೆ ಸಾವಯವದತ್ತ(Organic) ಹೊರಳಿದವರು. ಗುಜರಾತಿನ ಗೋಪಾಲಭಾಯಿ ಸುತಾರಿಯಾ ಅವರ ಸಲಹೆ ಮೇರೆಗೆ ವಿಷಮುಕ್ತ ಕೃಷಿ(Toxic free farming) ಮಾಡಲು ಮುಂದಾಗಿದ್ದಾರೆ.

ಮಾತುಕತೆ ವಿಷಯ: ‘ಬರ ಎದುರಿಸುವ ದಾರಿಗಳು.’ ಉತ್ತರ ಕರ್ನಾಟಕ ಕೃಷಿಯ ಜೀವಾಳವಾಗಿದ್ದ ಸಿರಿಧಾನ್ಯಗಳು, ಮೌಲ್ಯವರ್ಧನೆ, ವೈವಿಧ್ಯಮಯ ಬೆಳೆ ಹಾಗೂ ನೇರ ಮಾರುಕಟ್ಟೆ ಕುರಿತು ಚರ್ಚೆ ನಡೆಯಿತು. ಕೊಪ್ಪಳದ ಮೂಲತಳಿಯಲ್ಲಿ ಒಂದಾದ ಡುಗ್ಗ (ಕಡಿಮೆ ಮಳೆಯಲ್ಲೂ ಬೆಳೆಯುವ) ಭತ್ತದ ಬಗ್ಗೆ ರೈತ ಹಂಚಾಳಪ್ಪ ಮಾಹಿತಿ ನೀಡಿದರು. ಕುಂದಗೋಳ ಪ್ರದೇಶದಲ್ಲಿ ಈ ಸಲ ರೈತರಿಗೆ ಖಚಿತ ಆದಾಯ ಕೊಟ್ಟ ಸಿರಿಧಾನ್ಯಗಳ ಬಗ್ಗೆ ವಿವಿರಿಸಲಾಯಿತು.ತೋಟಗಾರಿಕೆ ಬಗ್ಗೆ Shripadaraj G Muradi ಅನುಭವ ಹಂಚಿಕೊಂಡರು.

ಮಧ್ಯಾಹ್ನದ ಗೋಷ್ಠಿಯಲ್ಲಿ ರೈತರ ಸೋಲು- ಗೆಲುವು ಚರ್ಚೆ ನಡೆಯಿತು. ದಾಳಿಂಬೆ ಕೃಷಿಯಲ್ಲಿ ಯಶಸ್ಸು ಗಳಿಸದೇ ಹೋಗಿದ್ದು ಯಾಕೆ ಎಂದು ಮಲ್ಲನಗೌಡ ಹಾಗೂ ದೇವೇಂದ್ರಗೌಡ ವಿಶ್ಲೇಷಿಸಿದರು. ಇದಕ್ಕೆ ವ್ಯತಿರಿಕ್ತವಾಗಿ, ವಿಷಮುಕ್ತ ದಾಳಿಂಬೆ ಬೆಳೆದು ಮಾರುಕಟ್ಟೆ ಕಂಡುಕೊಂಡ ಯಶಸ್ಸನ್ನು Shankar Raddi ತೆರೆದಿಟ್ಟರು. ಉಳಿದಂತೆ ಬಾಳೆ, ತೆಂಗು, ಗೇರು, ಹಲಸು, ಮಾವು ಬೇಸಾಯದ ಕುರಿತು ಸಹ ಮಾಹಿತಿ ಸಿಕ್ಕಿತು. ಈ ಬಾರಿಯ ‘..ಮಾತುಕತೆ’ಗೆ ಬೆಳಗಾವಿಯಿಂದ Vinod R Patil ತಮ್ಮ ತಂಡದೊಂದಿಗೆ ಬಂದಿದ್ದರು. ನರಗುಂದದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಹ ಆಗಮಿಸಿ, ಸಂಜೆಯವರೆಗೆ ಆಸಕ್ತಿಯಿಂದ ಮಾತು ಆಲಿಸಿದ್ದು ವಿಶೇಷ.

ಉಳಿದಂತೆ ಮೈಸೂರು, ಗದಗ, ಧಾರವಾಡ, ರಾಯಚೂರು, ವಿಜಯನಗರ, ಬಳ್ಳಾರಿ ಜಿಲ್ಲೆಯ ಕೃಷಿ ಆಸಕ್ತರೂ ಸೇರಿ 120 ಜನರು ಭಾಗವಹಿಸಿದ್ದರು. ಮುಂದಿನ ಆವೃತ್ತಿಯ ‘…ಮಾತುಕತೆ’ಯನ್ನು ಇರಕಲ್ಲಗಡದ ರೈತ ಹಾಗೂ ದೇಸಿ ಬೀಜ ಸಂರಕ್ಷಕ ಹಂಚಾಳಪ್ಪ ಅವರು ತಮ್ಮ ತೋಟದಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದರು. ಕಾಮನೂರಿನ ರೈತ ಮಲ್ಲಪ್ಪ ಕುಂಬಾರ ಸಾವಯವ ಉತ್ಪನ್ನ ಹಾಗೂ ಕಿರಣ್ ಶೆಡ್ಡೆ ಪುಸ್ತಕ ಮಳಿಗೆ ನಿರ್ವಹಿಸಿದರು.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ
January 10, 2026
10:35 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror