ಕೈಗೆ ಕೆಂಪು ದಾರ(red thread) ಕಟ್ಟಿಕೊಳ್ಳುವುದು ನಾವು ನೀವೆಲ್ಲರೂ ನೋಡಿರುತ್ತೇವೆ. ಯಾವುದೇ ದೇವಸ್ಥಾನ(Temple) ಅಥವಾ ಜ್ಯೋತಿಷಿಗಳು ಕೊಟ್ರೆ ಅದನ್ನು ಕೈಗೆ ಕಟ್ಟಿಕೊಳ್ಳುತ್ತೇವೆ. ಇದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಅನ್ನುವ ನಂಬಿಕೆ. ಹಾಗೂ ದೇವರ ಶ್ರೀ ರಕ್ಷೆ ಸಿಗುತ್ತೆ ಅನ್ನೋ ನಂಬಿಕೆನೂ ಇದೆ. ಆದರೆ ಕೆಲವು ದೈವ ವೃಕ್ಷಗಳಿಗೆ(Tree) ಇದೇ ರೀತಿ ಕೆಂಪು ದಾರ ಕಟ್ಟುತ್ತಾರೆ. ಈ ರೀತಿ ಕಟ್ಟಿದ್ದಲ್ಲಿ ಜೀವನದಲ್ಲಿ ವಿಪರೀತವಾದ ಬದಲಾವಣೆಯನ್ನು ಕಾಣುವಿರಿ ಯಾವ, ಯಾವ ವೃಕ್ಷಕ್ಕೆ ಕೆಂಪು ದಾರ ಅಥವಾ ಹಳದಿಮಿಶ್ರಿತ ಕೆಂಪು ದಾರ ವನ್ನು ಕಟ್ಟಲಾಗುತ್ತದೆ. ಅದರಿಂದ ನಮಗೇನು ಲಾಭ..? ಈ ರೀತಿ ಮಾಡಿ,
– ತುಳಸಿ ಗಿಡಕ್ಕೆ ಕಟ್ಟಿದಾಗ ನಮಗೆ ಅನಾವಶ್ಯಕ ವಿಪತ್ತು ಬರುವುದಿಲ್ಲ,
– ಅರಳಿ ಮರಕ್ಕೆ ಕಟ್ಟಿದ್ದಲ್ಲಿ ನಮ್ಮ ಜೀವನದಲ್ಲಿ ಸುಖ ಸಂತೃಪ್ತಿ ತುಂಬಿರುತ್ತದೆ,
– ಆಲದ ಮರಕ್ಕೆ ಕಟ್ಟಿದ್ದಲ್ಲಿ ಆಯುವಿನ ರಕ್ಷಣೆ ಆಗುವುದು ಹಾಗೂ ಸ್ತ್ರೀಯರ ಸೌಭಾಗ್ಯದ ರಕ್ಷಣೆ ಸಹ ಆಗುವುದು,
– ಶಮೀರುಕ್ಷಕ್ಕೆ ಕಟ್ಟಿದಾಗ ರಾಹು ಕೇತುವಿನ ಕ್ರೂರ ದೃಷ್ಟಿ ನಿವಾರಣೆಯಾಗುವುದು ಹಾಗೂ ನಮ್ಮ ಜೀವನದಲ್ಲಿ ನಕರಾತ್ಮಕ ಶಕ್ತಿ ದೂರ ಆಗುವುದು,
– ಬಾಳೆ ಗಿಡಕ್ಕೆ ಕಟ್ಟಿದಾಗ ವಿಷ್ಣು ವಾಸವಿರುವನು ಎಂದು ಹೇಳುತ್ತಾರೆ ವಿಷ್ಣು ಭಗವಂತನ ಅಪಾರ, ಕೃಪೆತೋರುವರು ಹಾಗೂ ಬೃಹಸ್ಪತಿಯ { ಗುರು ಗ್ರಹದ }ಸಂಕಷ್ಟ ಎದುರಾಗಿದ್ದರೆ ಅದು ಸಹ ನಿವಾರಣೆ
ಯಾಗುವುದು.
( ಎಲ್ಲದಕ್ಕೂ ನಂಬಿಕೆ ಭಕ್ತಿ ಶ್ರದ್ಧೆ ಮುಖ್ಯ)