ಸ್ವಚ್ಛ ಭಾರತ ಅಭಿಯಾನ ಆರಂಭವಾಗಿ ವರ್ಷಗಳು ಹಲವು ಉರುಳಿತು. ಇಂದಿಗೂ ಕಸ ಹೆಕ್ಕುವುದರಲ್ಲೇ ಈ ಅಭಿಯಾನ ನಿಂತಿದೆ. ಅದಕ್ಕಿಂತ ಆಚೆಗೆ ನಿಂತು ಯೋಚಿಸಿದೆ ಪುಟ್ಟ ಹಳ್ಳಿ. ಕಳೆದ 3 ವಾರಗಳಿಂದ ಈ ಅಭಿಯಾನ ನಡೆಯುತ್ತಿದೆ. ಇದೀಗ ಒಂದು ಹೆಜ್ಜೆಯಷ್ಟು ಯಶಸ್ಸು ಕಂಡಿದೆ ಈ ಅಭಿಯಾನದಲ್ಲಿ.
Advertisement
Advertisement
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಗ್ರಾಮದ ಕ್ರಿಯಾಶೀಲ ತಂಡವೊಂದು ಗುತ್ತಿಗಾರು ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಸಕ್ರಿಯವಾಗಿದೆ. ಇದಕ್ಕೆ ಗುತ್ತಿಗಾರು ಎಂಬ ಪುಟ್ಟ ಹಳ್ಳಿಯ ಎಲ್ಲಾ ಸಂಘಸಂಸ್ಥೆಗಳೂ ಕೈಜೋಡಿಸಿದೆ. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಟಾಸ್ಕ್ ಫೋರ್ಸ್ ಕೂಡಾ ಸಿದ್ಧವಾಗಿದೆ. ಈಗ ಪ್ರತೀ ವಾರ ಪೇಟೆಯಲ್ಲಿ ಸಂಚರಿಸಿ ಸ್ವಚ್ಛತೆಯ ಅರಿವು ಮೂಡಿಸುತ್ತಿದೆ. ಕಳೆದ 3 ವಾರಗಳಿಂದ ಈ ಅಭಿಯಾನ ನಡೆಯುತ್ತಿದೆ. ಈ ಹೊತ್ತಿಗೆ ಗುತ್ತಿಗಾರು ಪೇಟೆಯಲ್ಲಿ ಕಸದ ಪ್ರಮಾಣ ಕಡಿಮೆಯಾಗಿದೆ.ಕೆಲವು ಅಂಗಡಿಗಳಲ್ಲಿ ಬಟ್ಟೆ ಚೀಲದ ಬೇಡಿಕೆ ಶುರುವಾಗಿದೆ.
Advertisement
ಸ್ವಚ್ಛತೆ ಎಂದರೆ ಕೇವಲ ಕಸ ಹೆಕ್ಕುವುದಲ್ಲ. ನಮ್ಮ ಊರು ಸ್ವಚ್ಛ ಊರು ಎನ್ನುವ ಅರಿವು ಎಲ್ಲರಲ್ಲಿ ಬೆಳೆಯಬೇಕು. ಇದನ್ನು ಜನರಲ್ಲಿ ಅರಿವು ಮೂಡಿಸುವ ಕೆಲಸ ಈ ಟಾಸ್ಕ್ ಫೋರ್ಸ್ ಹಾಗೂ ಗ್ರಾಮ ಪಂಚಾಯತ್ ಮಾಡುತ್ತಿದೆ. ಟಾಸ್ಕ್ ಫೋರ್ಸ್‌ನಲ್ಲಿ ಪ್ರಮುಖವಾಗಿ ಸಂಜೀವಿನಿ ಘಟಕದ ಸದಸ್ಯರು ಇರುವುದು ಗಮನಾರ್ಹವಾಗಿದೆ. ಇವರೆಲ್ಲಾ ಮಹಿಳಾ ಸದಸ್ಯರೇ ಆಗಿರುವುದು ಸ್ವಚ್ಛ ಗ್ರಾಮದ ಉದ್ದೇಶಕ್ಕೆ ಬಲ ತುಂಬಿದೆ. ಇಲ್ಲಿ ಕೇವಲ ಕಸದ ಬಗ್ಗೆ ಜಾಗೃತಿ ಮಾತ್ರವಲ್ಲ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಬಟ್ಟೆ ಚೀಲ ಉಪಯೋಗಿಸಿ ಪರಿಸರ ರಕ್ಷಣೆಯ ಉದ್ದೇಶವೂ ಇಲ್ಲಿದೆ. ಈ ಜಾಗೃತಿಯ ಮೂಲಕ ಈಗಾಗಲೇ ಹಲವಾರು ಮಂದಿಯನ್ನು ಎಚ್ಚರಿಸಿದೆ. ಸ್ವಯಂಪ್ರೇರಿತರಾಗಿ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕಡೆಗೆ ಮನಸ್ಸು ಮಾಡಿದ್ದಾರೆ.
ಒಂದು ಪುಟ್ಟ ಹಳ್ಳಿಯ ಈ ಜಾಗೃತಿ ದೊಡ್ಡ ಸಂದೇಶ ನೀಡುತ್ತಿದೆ. ಈಗ ಬೇಕಿರುವುದು ಜನರ ಸಹಕಾರ, ಸಹಭಾಗಿತ್ವ. ಇದರ ಕಡೆಗೆ ಇನ್ನಷ್ಟು ಮಂದಿ ಗಮನಹರಿಸಬೇಕಿದೆ. ಸ್ವಚ್ಛ ಗ್ರಾಮ, ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳಲು ಸ್ವಯಂ ಜಾಗೃತಿಯೇ ಮುಖ್ಯವಾಗಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement