ದ.ಕ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸ್ ಕ್ಯಾಬ್ ಅಸೋಸಿಯೇಷನ್ ಮಂಗಳೂರು ಕುಕ್ಕೆ ಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘ ಸುಬ್ರಹ್ಮಣ್ಯ ವಾರ್ಷಿಕ ಮಹಾಸಭೆ ಮತ್ತು ಪದಗ್ರಹಣ ಸಮಾರಂಭ ಕುಕ್ಕೇಶ್ರೀ ಸುಬ್ರಹ್ಮಣ್ಯದ ಕುಮಾರಧಾರ ಸಭಾಂಗಣದಲ್ಲಿ ನಡೆಯಿತು.
ಪದಗ್ರಹಣದ ನಂತರ ಅಧ್ಯಕ್ಷತೆಯನ್ನು ಮೋಹನ್ ದಾಸ್ ರೈ ವಹಿಸಿಕೊಂಡರು.ಸಲಹೆಗಾರರಾಗಿ ಉಮೇಶ್. ಕೆ ಎನ್, ರಾಜೇಶ್ ಎನ್. ಎಸ್, ಹರೀಶ್ ಇಂಜಾಡಿ, ವೆಂಕಟೇಶ್ ಹೆಚ್. ಎಲ್. ಉಪಸ್ಥಿತರಿದ್ದು ಶುಭಕೋರಿದರು. ಈ ಸಂದರ್ಭದಲ್ಲಿ ಪಿಯುಸಿ ಯಲ್ಲಿ ಉತ್ತಮ ಅಂಕ ತೆಗೆದ ಕಾರ್ತಿಕ್ ನೆಕ್ರಾಜೆ ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕ ತೆಗೆದ ಶ್ರವಣ್ ಮತ್ತು ಶ್ರಾವ್ಯ ಇವರಿಗೆ ಸಮ್ಮಾನ ಮಾಡಿ ಗೌರವಿಸಲಾಯಿತು.
ಹೇಮಕರ ನೆಕ್ರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದ್ದರು , ಕಾರ್ಯಕ್ರಮವನ್ನು ನವೀನ್ ಶೆಟ್ಟಿ ನಿರೂಪಣೆ, ಅಶೋಕ್ ಏನೆಕಲ್ಲು ಸ್ವಾಗತ, ಎನಿತ್ ಪಡ್ರೆ ಧನ್ಯವಾದ ಮಾಡಿ ಕಾರ್ಯಕ್ರಮಕ್ಕೆ ಅಂತ್ಯ ನೀಡಿದರು.
ವರದಿ :
ಅನನ್ಯ ಎಚ್ ಸುಬ್ರಹ್ಮಣ್ಯ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel