ಯಾರೇ ಆಗಲಿ ಒಂದು ದಿನ-ಎರಡು ದಿನ ಉಪವಾಸ ಮಾಡಲು ಸಾಧ್ಯ. ಆದರೆ ಊಟ ತಿಂಡಿ ಬಿಟ್ಟು ಬದುಕು ತುಂಬಾನೇ ಕಷ್ಟ. ಛತ್ತಿಸ್‌ಗಢದ ಮಹಿಳೆಯೊಬ್ಬರೂ ಸುಮಾರು 30 ವರ್ಷಗಳಿಂದ ಊಟ ತಿಂಡಿಯನ್ನು ಬಿಟ್ಟು ಕೇವಲ ಚಹ ದಿಂದಲೇ ತನ್ನ ಜೀವ ಉಳಿಸಿರುವರು…!ಆಶ್ಚರ್ಯದ ವಿಷಯವಾದರೂ ಇದು ಸತ್ಯ ಸಂಗತಿ.
ಛತ್ತಿಸ್‌ಗಢದ ಕೊರಿಯಾ ಜಿಲ್ಲೆಯ ಬರಾದಿಯಾ ಗ್ರಾಮದ ನಿವಾಸಿ ಪಿಲ್ಲಿ ದೇವಿ (44) ಕಳೆದ 30 ವರ್ಷದಿಂದ ಕೇವಲ ಟೀ ಕುಡಿದುಕೊಂಡೇ ಬದುಕುತ್ತಿದ್ದಾರೆ. ಯಾವುದೇ ಆಹಾರ ಸೇವಿಸದಿದ್ದರು ಪಿಲ್ಲಿ ದೇವಿಯವರ ಆರೋಗ್ಯ ಚೆನ್ನಾಗಿಯೇ ಇದೆ.
ಪಿಲ್ಲಿ ದೇವಿ ಅವರು ತಮ್ಮ 11 ವರ್ಷದ ವಯಸ್ಸಿನಲ್ಲಿಯೇ ಆಹಾರ ಹಾಗೂ ನೀರು ಸೇವನೆಯನ್ನು ತ್ಯಜಿಸಿದ್ದರು. ಅಂದಿನಿಂದಲೂ ಅವರು ಕೇವಲ ಟೀ ಕುಡಿದೇ ಬದುಕುತ್ತಿದ್ದಾರೆ. ಮೊದಲಿಗೆ ಟೀ ಜೊತೆ ಬಿಸ್ಕಟ್ ಮತ್ತು ಬ್ರೆಡ್ ತಿನ್ನುತ್ತಿದ್ದರು, ಆದರೆ ಕೆಲ ತಿಂಗಳ ನಂತರ ಬಿಸ್ಕಟ್ ಮತ್ತು ಬ್ರೆಡ್ ತಿನ್ನೋದನ್ನು ಬಿಟ್ಟಿದ್ದಾರೆ ಎಂದು ಮಹಿಳೆಯ ತಂದೆ ರತಿ ರಾಮ್ ಹೇಳಿದ್ದಾರೆ. ಹಾಗಾಗಿ ಇಡೀ ಗ್ರಾಮದಲ್ಲಿ ಪಿಲ್ಲಿ ದೇವಿಯನ್ನು ಚಾಯ್ ವಾಲಿ ಚಾಚಿ ಎಂದೇ ಕರೆಯುತ್ತಾರೆ.