ಅದು ವಿಶೇಷ ದಿನ. ಯಾವಾಗಲೂ ಮಕ್ಕಳಿಗಾಗಿ ಶಿಕ್ಷಕರು ಸ್ಪರ್ಧೆಗಳನ್ನು, ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೆ ಇಂದು ಅಲ್ಲಿ ಮಕ್ಕಳು ವೀಕ್ಷಕರ ಸಾಲಿನಲ್ಲಿ ಕುಳಿತಿದ್ದರು. ಶಿಕ್ಷಕರು ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದರು.
ಅವರಿಗಾಗಿ ನೃತ್ಯ, ಸಂಗೀತ, ನಾಟಕ, ಆಶುಭಾಷಣ , ಅಭಿನಯ ಮೊದಲಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಕ್ರಿಕೆಟ್ ಪಂದ್ಯವನ್ನೂ ನಡೆಸಲಾಗಿತ್ತು. ಇದರಲ್ಲಿ ಹತ್ತನೇಯ ತರಗತಿಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳ ನಡುವೆ ಪಂದ್ಯವಿತ್ತು. ಮಕ್ಕಳೋ ನಿತ್ಯ ಕ್ರಿಕೇಟ್ ಆಡುವವರು. ಒಂದುಕಾಲದಲ್ಲಿ ನಿತ್ಯ ಆಡುತ್ತಿದ್ದ ಶಿಕ್ಷಕರೇ , ಆದರೆ ಇತ್ತೀಚೆಗೆ ಕೆಲಸದ ಒತ್ತಡ ಹಾಗೂ ಇತರ ತಾಪತ್ರಯಗಳಿಂದಾಗಿ ಆಟದಿಂದ ವಿಮುಖರಾದವರು. ಆದರೆ ಶಿಕ್ಷಕರ ದಿನಾಚರಣೆಯ ನೆಪವಾಗಿ ಅವರೆಲ್ಲರೂ ಉತ್ಸಾಹದಿಂದ ಕ್ರೀಡಾಂಗಣದಲ್ಲಿ ಸೇರಿದ್ದರು. ಮಕ್ಕಳ ಪ್ರೋತ್ಸಾಹದ ದನಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಪಂದ್ಯದ ರಂಗು ಹೆಚ್ಚಿಸಿತು. ಪರಸ್ಪರ ಸೌಹಾರ್ದ ಹೆಚ್ಚಿಸುವಲ್ಲಿ ಈ ಪಂದ್ಯ ನೆರವಾಯಿತು. ಈ ಸಂತೋಷದ ಸಂದರ್ಭಗಳನ್ನು ಕೋವಿಡ್ ಕಾರಣದಿಂದ ಮಕ್ಕಳು, ಅಧ್ಯಾಪಕರು ಕಳೆದುಕೊಳ್ಳುತ್ತಿದ್ದಾರಲ್ಲಾ ಎಂಬುದು ದುಃಖದ ಸಂಗತಿ.
ಗುರು ಶಿಷ್ಯರ ಸಂಬಂದವೇ ವಿಶೇಷವಾದುದು. ಅಲ್ಲಿ ಏಕಕಾಲಕ್ಕೆ ಗುರುಗಳ ಮಕ್ಕಳ ಮೇಲೆ ಪ್ರೀತಿಯನ್ನೂ ಹರಿಸಬೇಕು. ದಂಡಿಸಲೂ ಸಿದ್ಧರಿರ ಬೇಕು. ಎಲ್ಲಿ ತಪ್ಪಿದೆಯೋ ಅಲ್ಲಿಗೆ ತಕ್ಕ ಸಮಯಕ್ಕೆ ಚುರುಕು ಮುಟ್ಟಿದಲು ಸಾಧ್ಯವಾಗುವುದೆಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳ ಓರೆಕ್ಕೋರೆ ಬುದ್ಧಿಗಳನ್ನು ಗುರುತಿಸುವುದು ಕೂಡ ಶಿಕ್ಷಕರೇ ಎಂಬುದು ಸಾರ್ವಕಾಲಿಕ ಸತ್ಯ.
ಶಾಲಾ ವಿದ್ಯಾಭ್ಯಾಸದ ದಿನಗಳು ಪ್ರತಿಯೊಬ್ಬರ ಬಾಳಿನಲ್ಲೂ ಮಹತ್ವದ ಸಮಯ. ಅಲ್ಲಿ ಸರಿಯಾದ ಶಿಕ್ಷಕರ ಮಾರ್ಗದರ್ಶನ ಸಿಕ್ಕಿದಾಗ ಒಂದು ಒಳ್ಳೆಯ ಗುರಿಯತ್ತ ಮುನ್ನಡೆಯಲು ಸಾಧ್ಯ. ಹಿಂದಿನ ಕಾಲದಲ್ಲಿ ಗುರುಗಳು ಸರ್ವ ಸ್ವತಂತ್ರರು. ಅವರೇನೇ ಹೇಳಿದರೂ ಮಕ್ಕಳು ತಮ್ಮ ಒಳಿತಿಗೆ ಎಂದು ತಿಳಿಯುತ್ತಿದ್ದರು. ( ಈಗ ಬಿಡಿ ಕೊರೋನಾ ಸಮಯದಲ್ಲಿ ಮನೆಯೇ ಪಾಠಶಾಲೆಯಾಗಿದೆ)
ಪ್ರತಿಯೊಬ್ಬರಿಗೂ ಅವರದೇ ಆದ ಇತಿಮಿತಿಗಳಿವೆ, ಅರಿತು ಮುಂದುವರಿವುದು ಒಳ್ಳೆಯದು. ಭವಿಷ್ಯದ ದೃೃಷ್ಟಿಯಿಂದ ಯೋಚಿಸ ಬೇಕು. ಹಿಂದೆ ಮುಂದೆ ನೋಡದೆ ಮುಂದಡಿ ಇಡಬಾರದು. ಓದುವ ಸಮಯದಲ್ಲಿ ಓದಬೇಕು. ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಹೀಗೆ ಹಲವು ನೀತಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಸರಿ ಮಾಡುವ ಅವಕಾಶ ಅಂದು ಗುರುಗಳಿಗಿತ್ತು. ತಪ್ಪು ಮಾಡಿದಾಗ ಪೆಟ್ಟು ಕೊಟ್ಟು ಬುದ್ಧಿ ಹೇಳಿ ಸರಿ ಮಾಡುತ್ತಿದ್ದರು. ಶಾಲೆಯಲ್ಲಿ ಹೊಡೆದರೆ, ಯಾಕೆ ಎತ್ತ ಎಂದು ಮನೆಯವರು ಕೇಳಿಕೊಂಡು ಬರುತ್ತಿರಲಿಲ್ಲ. ಇನ್ನೂ ಎರಡು ಕೊಡ ಬೇಕಿತ್ತು ಅನ್ನುವವರೇ ಹೆಚ್ಚಿನವರು.
ಮಕ್ಕಳು ಅಡ್ಡ ದಾರಿ ಹಿಡಿಯದಂತೆ ಶಾಲೆ, ಮನೆಗಳಲ್ಲೇ ಎಚ್ಚರಿಕೆ ವಹಿಸಲಾಗುತ್ತಿತ್ತು. ಹಾಗಿದ್ದು ತಪ್ಪು ಹಾದಿ ಹಿಡಿದರೆ ಪೋಲಿಸರು ವಿಚಾರಿಸುತ್ತಿದ್ದರು. ಆದರೆ ಈಗ ಮಕ್ಕಳ ಮೇಲಿನ ಕುರುಡು ನಂಬಿಕೆ ಗುರುಗಳತ್ತಲೇ ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ. ಈಗ ಪಾಠ , ಪ್ರಾಜೆಕ್ಟ್, ಟಾರ್ಗೆಟ್, ಪರೀಕ್ಷೆ, ಎಂದು ಯಾವಾಗಲೂ ಓಡುತ್ತಾ ಸಾಗುವ ಟೀಚರ್ ಗಳಿಗೂ , ಮಕ್ಕಳಿಗೂ ಪುರುಸೊತ್ತೇ ಇಲ್ಲ,. ಬುದ್ಧಿ ಹೇಳುವ ತಾಳ್ಮೆ ಅಧ್ಯಾಪಕರಿಗೂ, ಕೇಳುವ ಮನಸ್ಸು ಮಕ್ಕಳಿಗೂ ಇದ್ದಾಗ ಮಾತ್ರ ಪ್ರಯೋಜನ.
ಸೆಪ್ಟೆಂಬರ್ 5 ಒಂದು ವಿಶೇಷ ದಿನವಾಗಿದೆ. ಆ ದಿನವನ್ನು ಭಾರತದೆಲ್ಲೆಡೆ ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ನಮ್ಮ ದ್ವಿತೀಯ ರಾಷ್ಟ್ರಪತಿ ಗಳಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನುಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತದೆ. ಅವರು ಮಹಾನ್ ಚೇತನವಾಗಿದ್ದರು. ಅಪಾರ ಜ್ಞಾನವಂತ, ಮಹಾ ಮೇಧಾವಿ. ಅವರು ಹಲವು ಉಪಯುಕ್ತ ಕೃತಿಗಳ ರಚನೆಯನ್ನು ಮಾಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಅವರ ಗಣನೀಯ ಕೊಡುಗೆಯನ್ನು ಅವರ ಜನುಮ ದಿನದ ನೆಪದಲ್ಲಿ ನೆನಪಿಸುವ ಕಾರ್ಯಕ್ರಮ ಎಲ್ಲೆಡೆ ಶಿಕ್ಷಕರ ದಿನಾಚರಣೆಯ ಮೂಲಕ ಆಚರಿಸಲಾಗುತ್ತದೆ. ಆದಷ್ಟು ಬೇಗ ಮಕ್ಕಳು ಶಾಲೆಯಲ್ಲಿ ಕುಳಿತು ಪಾಠ ಕೇಳುವಂತಾಗಲಿ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…