ಕ್ರಿಕೆಟ್ ಆಟಕ್ಕಿರುವಷ್ಟು ಕ್ರೇಜ್, ಅಭಿಮಾನಿಗಳು ಬೇರಾವ ಆಟಕ್ಕೂ ಇಲ್ಲ. ದಿನಗಟ್ಟಲೇ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೋಡುವವರಿದ್ದಾರೆ. ಅದರಲ್ಲೂ ನಮ್ಮ ದೇಶದಲ್ಲಿ ಕ್ರಿಕೇಟ್ ಹಾಗೂ ಕ್ರಿಕೆಟ್ ಆಟಗಾರರ ಮೇಲೆ ವಿಶೇಷ ಒಲವು. ಅವರನ್ನು ದೇವರಂತೆ ಪೂಜಿಸುತ್ತಾರೆ ಕೂಡ. ಈ ಬಾರಿಯ ವಿಶ್ವಕಪ್ 2023(World Cup 2023)ನ ಆತಿಥ್ಯವನ್ನೂ ನಮ್ಮ ದೇಶ ವಹಿಸಿಕೊಂಡಿದೆ. ಭಾರತ ಭರ್ಜರಿಯಾಗಿ ಆಡಿ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಇದೀಗ ಮುಂದಿನ ಪಂದ್ಯ ಸೆಮಿಫೈನಲ್ ಯಾರೊಂದಿಗೆ ನಡೆಯಲಿದೆ ಅನ್ನೋದು ಎಲ್ಲಾ ಅಭಿಮಾನಿಗಳ ಕುತೂಹಲ.
ಐಸಿಸಿ ವೇಳಾಪಟ್ಟಿಯ ಪ್ರಕಾರ, ವಿಶ್ವಕಪ್ 2023(World Cup 2023)ರ ಮೊದಲ ಸೆಮಿಫೈನಲ್ ಪಂದ್ಯವು(Semi-Final) ಮುಂಬೈನ(Mumbai) ವಾಂಖೆಡೆ ಸ್ಟೇಡಿಯಂನಲ್ಲಿ(Wankhede Stadium) ನವೆಂಬರ್ 15 ರಂದು ನಡೆಯಲಿದೆ. ಹೀಗಾಗಿ ಭಾರತ(India) ಮುಂಬೈನ ವಾಂಖೇಡೆ ಮೈದಾನದಲ್ಲಿ ಸೆಮೀಸ್ ಆಡಲಿದೆ.ಟೀಂ ಇಂಡಿಯಾ 2023ರ ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 243 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿತು. ಈ ಗೆಲುವಿನ ಆಧಾರದ ಮೇಲೆ, ಟೀಂ ಇಂಡಿಯಾ 2023 ರ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯವನ್ನು ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ. ಪಾಯಿಂಟ್ ಪಟ್ಟಿಯಲ್ಲಿ ಈ ಗೆಲುವಿನೊಂದಿಗೆ ಭಾರತ 8 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ ಒಟ್ಟು 16 ಅಂಕಗಳನ್ನು ಹೊಂದಿದೆ.
ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ 8 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿದೆ. ಆಫ್ರಿಕನ್ ತಂಡ ತನ್ನ ಕೊನೆಯ ಪಂದ್ಯವನ್ನು ಗೆದ್ದರೂ, ಗರಿಷ್ಠ 14 ಅಂಕಗಳನ್ನು ಪಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿ ಉಳಿಯುವ ಮೂಲಕ ಲೀಗ್ ಹಂತದ ಅಭಿಯಾನ ಅಂತ್ಯಗೊಳಿಸುವುದು ನಿಶ್ಚಿತ. ICC ವೇಳಾಪಟ್ಟಿಯ ಪ್ರಕಾರ, ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನವೆಂಬರ್ 15 ರಂದು ನಡೆಯಲಿದೆ. ಹೀಗಾಗಿ ಭಾರತ ಮುಂಬೈನ ವಾಂಖೇಡೆ ಮೈದಾನದಲ್ಲಿ ಸೆಮೀಸ್ ಆಡಲಿದೆ. ಇನ್ನು, ದಕ್ಷಿಣ ಆಫ್ರಿಕಾ ತಂಡ ಸಹ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಆದರೆ, ಆಸ್ಟ್ರೇಲಿಯಾ ಬಿಟ್ಟರೆ ಬೇರೆ ಯಾವುದೇ ತಂಡ 12 ಅಂಕಕ್ಕೆ ತಲುಪಲು ಸಾಧ್ಯವಾಗಿಲ್ಲ. 2ನೇ ಸೆಮಿಫೈನಲ್‌ನಲ್ಲಿ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಹೀಗಾಗಿ ದಕ್ಷಿಣ ಆಪ್ರಿಕಾ ನಾಲ್ಕನೇ ಸ್ಥಾನಕ್ಕೆ ಕುಸಿಯಲು ಸಾಧ್ಯವಿಲ್ಲ. ಹೀಗಿರುವಾಗ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೆಮಿ ಫೈನಲ್‌ನಲ್ಲಿ ಸೆಣಸಾಡುವುದಿಲ್ಲ.
ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಶ್ರೇಯಾಂಕದ ತಂಡದೊಂದಿಗೆ ಆಡಬೇಕಾಗಿದೆ.ಇದೀಗ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಯಾವ ತಂಡವನ್ನು ಎದುರಿಸಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ನಾವು ಪ್ರಸ್ತುತ ಸಮೀಕರಣವನ್ನು ನೋಡಿದರೆ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದ ಯಾವುದೇ ತಂಡವು ತಮ್ಮ ಲೀಗ್ ಪಂದ್ಯಗಳನ್ನು ನಂಬರ್-4 ರಲ್ಲಿ ಮುಗಿಸಬಹುದು. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನವನ್ನು ಈ ಸ್ಥಾನಕ್ಕೆ ಪ್ರಬಲ ಸ್ಪರ್ಧಿಗಳಾಗಿದೆ. ಇಬ್ಬರೂ 8 ಪಂದ್ಯಗಳಿಂದ 4 ಗೆಲುವಿನೊಂದಿಗೆ 8 ಅಂಕಗಳನ್ನು ಹೊಂದಿದ್ದಾರೆ. ನಿವ್ವಳ ರನ್ ರೇಟ್ ಆಧಾರದ ಮೇಲೆ, ನ್ಯೂಜಿಲೆಂಡ್ 4ನೇ ಸ್ಥಾನದಲ್ಲಿದೆ. ಪಾಕ್ 5ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ಅಥವಾ ಪಾಕಿಸ್ತಾನ ತಂಡ ಸೆಮೀಸ್‌ನಲ್ಲಿ ಎದುರಾಗಲಿದೆ.
According to the ICC schedule, the first semi-final match of the World Cup 2023 will be held on November 15 at the Wankhede Stadium in Mumbai. Thus, India will play the semis at the Wankhede Stadium in Mumbai.