ಬೇರೆ ರಾಜ್ಯಗಳಂತೆ ರಾಜ್ಯದ ರೈತರ(Farmer) ಸಾಲ ಮನ್ನಾ (Loan waiver) ಮಾಡುವಂತೆ ಎಕ್ಸ್‌ನಲ್ಲಿ(ಟ್ವಿಟ್ಟರ್) ಆರ್.ಅಶೋಕ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸಿಎಂ ರೇವಂತ್ ರೆಡ್ಡಿ ಘೋಷಣೆ : ತೆಲಂಗಾಣ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದೆ. ಚುನಾವಣೆಗೂ ಮುನ್ನ ಹೇಳಿದಂತೆ ರೈತರ 2 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಸಿಎಂ ರೇವಂತ್ ರೆಡ್ಡಿ ಬಹಿರಂಗಪಡಿಸಿದ್ದಾರೆ. ಮೇಲಾಗಿ ಆರು ತಿಂಗಳ ಸಾಲ ಮನ್ನಾಕ್ಕೆ ಹಣ ಪಾವತಿಸಿರುವ ಸರ್ಕಾರ ಬ್ಯಾಂಕ್ ಗಳಿಗೆ ಒಟ್ಟು 31 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಹೇಳಿದೆ. ಡಿಸೆಂಬರ್ 9, 2023ರ ಮೊದಲು ಪಡೆದ ರೈತರ ಸಾಲವನ್ನು ಮನ್ನಾ ಮಾಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ.
ಅಧಿಕಾರಕ್ಕೆ ಬಂದ 6 ತಿಂಗಳ ನಂತ್ರ ಸಾಲಮನ್ನಾ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಾಲ ಮನ್ನಾ ಜಾರಿ ಮಾಡುವುದಾಗಿ ಘೋಷಣೆ ಮಾಡಿತ್ತು. ಡಿಸೆಂಬರ್ 9 ರಂದು ಎಲ್ಲಾ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದರು. ಇದು ನಿಜ ಎಂದು ರೈತರು ಭಾವಿಸಿದ್ದರು, ಡಿಸೆಂಬರ್ 7ರಂದು ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಆದರೆ ಸಾಲ ಮನ್ನಾ ಜಾರಿಯಾಗಿರಲಿಲ್ಲ. ಆದರೆ ಈಗ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದಿದ್ದು, ಕೊನೆಗೂ ಸಾಲ ಮನ್ನಾ ಜಾರಿ ಮಾಡುವುದಾಗಿ ಘೋಷಿಸಿದೆ. ಈಗಲೂ ಸರ್ಕಾರ ಯಾವ ದಿನಾಂಕದಂದು ಮನ್ನಾ ಮಾಡುವುದಾಗಿ ಹೇಳಿಲ್ಲ. ಇದರಿಂದ ರೈತರು ಪಡೆದ ಸಾಲದ ಮೇಲಿನ ಬಡ್ಡಿ ಹೆಚ್ಚಾಗುತ್ತಿದೆ. ಮಳೆ ಬಾರದೆ ರೈತರು ನಾನಾ ರೀತಿಯ ನಷ್ಟ ಅನುಭವಿಸುತ್ತಿದ್ದಾರೆ.
– ಅಂತರ್ಜಾಲ ಮಾಹಿತಿ