ದಿನದಿಂದ ದಿನಕ್ಕೆ ಏರುತ್ತಿದೆ ರಾಜ್ಯದಲ್ಲಿ ಉಷ್ಣಾಂಶ | ಕರಾವಳಿಯಲ್ಲಿ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ |

March 3, 2024
11:51 AM
ರಾಜ್ಯದೆಲ್ಲೆಡೆ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ. ಹೀಟ್‌ವೇವ್‌ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಸುಬ್ರಹ್ಮಣ್ಯ ಸೇರಿದಂತೆ ಮಲೆನಾಡು ಭಾಗದಲ್ಲಿ ಕೂಡಾ ಕಳೆದ ಕೆಲವು ವರ್ಷಗಳಿಂದ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ.

ಈಗಿನ್ನೂ ಮಾರ್ಚ್‌ ತಿಂಗಳ ಆರಂಭ. ಈಗಲೇ  ಉರಿ ಬಿಸಿಲು(Heat) ತಡೆಯಲು ಆಗುತ್ತಿಲ್ಲ. ಇನ್ನು ಎಪ್ರಿಲ್‌, ಮೇ, ಜೂನ್‌ ತಿಂಗಳ ಕಥೆ ಏನು..? ಈ ಬಿಸಿಲ ಪ್ರಖರತೆಯನ್ನು ತಡೆದುಕೊಳ್ಳೊದು ಹೇಗೆ..? ಅನ್ನುವ ಪ್ರಶ್ನೆ ಈಗಾಗಲೇ ಎಲ್ಲರ ಮನದಲ್ಲೂ ಮೂಡಿದೆ. ಬೆಂಗಳೂರು(Bengaluru) ಸೇರಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶ(Temprature) ಹೆಚ್ಚಾಗುತ್ತಲೇ ಇದೆ. ಅಲ್ಲದೇ ಕೆಲ ಜಿಲ್ಲೆಗಳಲ್ಲಿ ಒಣಹವೆ(drought) ಮುಂದುವರೆಯಲಿದೆ. ಉಷ್ಣ ಮಾರುತ( heat wave) ಏಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ(Meteorological Department) ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಭಾಗದಲ್ಲೂ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿರುವುದು ಹವಾಮಾನ ವೈಪರೀತ್ಯದ ಸ್ಪಷ್ಟ ನಿದರ್ಶನವಾಗಿದೆ.

Advertisement
Advertisement
Advertisement

ಕರಾವಳಿಯ(coastal) ಕೆಲವು ಕಡೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್, ಮೇ ತಿಂಗಳಿನಲ್ಲಿ ವಿಪರೀತ ಸೆಕೆಯ ಜೊತೆಗೆ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಉಷ್ಣ ಮಾರುತ ಏಳುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದೆ ಹವಾಮಾನ ಇಲಾಖೆ. ಈಗಾಗಲೇ ಉಷ್ಣಾಂಶ ಏರಿಕೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನರು ಸಂಕಷ್ಟಪಡುವಂತಾಗಿದೆ. ಮಾರ್ಚ್‍ನಲ್ಲಿ ವಾಡಿಕೆಯ ಮಳೆಯೂ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.….ಮುಂದೆ ಓದಿ…..

Advertisement

ಒಂದೆಡೆ ಬಿಸಿಲಿನ ಅಬ್ಬರ ದಿನೇ ದಿನೇ ಜೋರಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ತಾಪಮಾನ ತಡೆಯಲಾಗುತ್ತಿಲ್ಲ. ಇತ್ತ ಕುಡಿಯುವ ನೀರಿಗೂ ಕೊರತೆ ಉಂಟಾಗಿ ಜನಸಾಮಾನ್ಯರು ಸಮಸ್ಯೆ ಅನುಭವಿಸುವಂತಾಗಿದೆ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಪ್ರಮುಖ ಜೀವನದಿಗಳು ಈಗಾಗಲೇ ಬತ್ತಿ ಹೋಗಿವೆ. ಈ ನಡುವೆ ಉಷ್ಣ ಮಾರುತಗಳ ಭೀತಿ ಎದುರಾಗಿದ್ದು ಜನರು ಆತಂಕಪಡುವಂತೆ ಮಾಡಿದೆ. ಈ ತಿಂಗಳಲ್ಲಾದ್ರೂ ಮಳೆಯಾಗುತ್ತಾ ಎಂದು ಜನ ಕಾಯ್ತಾ ಇದ್ದಾರೆ. ಆದ್ರೆ ಬಿಸಿಲು ಹೆಚ್ಚಾಗುತ್ತಲೇ ಇದೆ. ಇನ್ನೂ ಹೆಚ್ಚಾಗಲಿದೆ ಎಂದು ಸೂಚನೆ ಸಿಕ್ಕಿದೆ.….ಮುಂದೆ ಓದಿ…..

ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವಾತಾವರಣದ ಉಷ್ಣತೆ ಏರಿಕೆಯಾಗುತ್ತಿದೆ.ಕಳೆದ ಎರಡು ವರ್ಷಗಳಿಂದ ಈ ಮಾದರಿಯ ಹವಾಮಾನ ಸೃಷ್ಟಿಯಾಗುತ್ತಿದೆ. ಸುಮಾರು 5-10 ವರ್ಷಗಳ ಹಿಂದೆ ವಾತಾವರಣದ ಉಷ್ಣತೆ 35 ಡಿಗ್ರಿಗಿಂದ ಅಧಿಕವಾದರೆ ಮಲೆನಾಡು, ಕರಾವಳಿಯ ವಿವಿಧ ಕಡೆ ಮಳೆಯಾಗುತ್ತದೆ ಎನ್ನುವ ಸಾಮಾನ್ಯ ಮಾತು ಇತ್ತು. ಇದೀಗ ಎರಡು ವರ್ಷಗಳಿಂದ ವಾತಾವರಣದ ಉಷ್ಣತೆ 40 ಡಿಗ್ರಿಯಾದರೂ ಮಳೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ವಾತಾವರಣದ ಬಿಸಿ ಏರಿಕೆಯಾಗುತ್ತಿದೆ. ಇದಕ್ಕೆ ಕಾರಣಗಳು ಹಲವಾರು.

Advertisement
ಮಲೆನಾಡಲ್ಲಿ ತಾಪಮಾನ..
ಸದ್ಯ ಸುಬ್ರಹ್ಮಣ್ಯ ಸೇರಿದಂತೆ ಮಲೆನಾಡು ಭಾಗದಲ್ಲಿ ಮಧ್ಯಾಹ್ನದ ವೇಳೆಗೆ ವಾತಾವರಣದ ಉಷ್ಣತೆ 36.5 ಡಿಗ್ರಿಯಷ್ಟು ಇದ್ದರೆ ತೇವಾಂಶ ಶೇ.38-40 ಇರುತ್ತದೆ. ಕಳೆದ ವರ್ಷ ಅಂದರೆ 2023 ರಲ್ಲಿ ಇದೇ ಅವಧಿಯಲ್ಲಿ ವಾತಾವರಣದ ಉಷ್ಣತೆ 35.5 ಡಿಗ್ರಿಯಷ್ಟು ಇದ್ದರೆ ತೇವಾಂಶ ಶೇ.15-20 ,  2೦22 ರಲ್ಲಿ ವಾತಾವರಣದ ಉಷ್ಣತೆ 34.5 ಡಿಗ್ರಿಯಷ್ಟು ಇದ್ದರೆ ತೇವಾಂಶ ಶೇ.10-20 , 2021 ರಲ್ಲಿ ವಾತಾವರಣದ ಉಷ್ಣತೆ 34 ಡಿಗ್ರಿಯಷ್ಟು ಇದ್ದರೆ ತೇವಾಂಶ ಶೇ.20-30 ,  2020 ರಲ್ಲಿ ವಾತಾವರಣದ ಉಷ್ಣತೆ 34 ಡಿಗ್ರಿಯಷ್ಟು ದಾಖಲಾಗಿತ್ತು.

The temperature is increasing day by day in the state including Bangalore. Also, drought will continue in some districts. The Meteorological Department has predicted that there is a possibility of heat wave. The Meteorological Department has predicted that the maximum and minimum temperatures in some parts of the coast are likely to rise by 2-3 degrees Celsius above normal.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror