ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

April 28, 2024
4:55 PM

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದ್ದು(Rain), ಪ್ರವಾಹ(Flood) ಮತ್ತು ಭೂಕುಸಿತದಿಂದ(Land slide) ಜನತೆ ಕಂಗೆಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ 155 ಜನರು ಸಾವಿಗೀಡಾಗಿದ್ದು, 236 ಮಂದಿ ಗಾಯಗೊಂಡಿದ್ದಾರೆ. ಪೂರ್ವ ಆಫ್ರಿಕಾದಾದ್ಯಂತ (East Africa) ತೀವ್ರವಾದ ಮಳೆ ಮುಂದುವರಿದಿದೆ.

Advertisement

ಎಲ್ ನಿನೋ(L Nino) ಹವಾಮಾನದ ಮಾದರಿಯು ಭಾರೀ ಮಳೆಗೆ ಕಾರಣವಾಗಿದೆ. ಇದರಿಂದಾಗಿ ಪ್ರವಾಹ ಹೆಚ್ಚಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ರೈಲು ಮಾರ್ಗಗಳು ನಾಶವಾಗಿವೆ ಎಂದು ಪ್ರಧಾನಿ ಕಾಸಿಮ್ ಮಜಲಿವಾ ತಿಳಿಸಿದ್ದಾರೆ.  ಪ್ರವಾಹದಿಂದ 51,000 ಮನೆಗಳಿಗೆ ಹಾನಿಯಾಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಶಾಲೆಗಳನ್ನು ಮುಚ್ಚಲಾಗಿದೆ. ಜನರ ರಕ್ಷಣೆಗೆ ತುರ್ತು ಸೇವೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಗ್ಗು ಪ್ರದೇಶಗಳಲ್ಲಿ ವಾಸಿಸುವವರಿಗೆ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸೂಕ್ತ ನೆರವು ಒದಗಿಸುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಮಳೆಗಾಲದಲ್ಲಿ ಪೂರ್ವ ಆಫ್ರಿಕಾದ ಪ್ರದೇಶವು ವಾಡಿಕೆಗಿಂತ ಹೆಚ್ಚಿನ ಮಳೆಯಿಂದ ಜರ್ಜರಿತವಾಗಿದೆ. ನೆರೆಯ ಬುರುಂಡಿ ಮತ್ತು ಕೀನ್ಯಾದಲ್ಲಿ ಸಹ ಪ್ರವಾಹ ವರದಿಯಾಗಿದೆ.

  • ಅಂತರ್ಜಾಲ ಮಾಹಿತಿ

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾಷೆ- ಸಂಸ್ಕೃತಿಯ ಸ್ವಾಭಿಮಾನ ಮೆರೆಯೋಣ : ರಾಘವೇಶ್ವರ ಶ್ರೀ
August 12, 2025
7:45 AM
by: The Rural Mirror ಸುದ್ದಿಜಾಲ
ದ ಕ ಜಿಲ್ಲೆ ಬೆಳೆವಿಮೆ ಯೋಜನೆ | ರೈತರ ನೋಂದಣಿಗೆ ಆಗಸ್ಟ್  14 ಕೊನೆಯ ದಿನ
August 12, 2025
7:34 AM
by: The Rural Mirror ಸುದ್ದಿಜಾಲ
ಗಣೇಶ ಚತುರ್ಥಿ | ರಾಸಾಯನಿಕ ಬಣ್ಣಗಳಿಂದ ಕೂಡಿದ ವಿಗ್ರಹ ವಿಸರ್ಜನೆ ನಿಷೇಧ
August 12, 2025
7:29 AM
by: The Rural Mirror ಸುದ್ದಿಜಾಲ
ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ
August 11, 2025
9:01 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group