ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

May 5, 2024
3:21 PM
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ ಅಡಿಕೆ ಬೀಳುತ್ತಿದೆ. ಅಡಿಕೆ ಫಸಲು ಶೇ.50 ನಷ್ಟವಾಗುವ ಬಗ್ಗೆ ಅಂದಾಜಿಸಲಾಗಿದೆ.

ಸತತವಾಗಿ 14 ದಿನಗಳ ಕಾಲ ತಾಪಮಾನ 40 ಡಿಗ್ರಿ ದಾಟಿದೆ. ಹೀಗಾಗಿ ಅಡಿಕೆಯ ಮೇಲೆ ಪರಿಣಾಮ ಬೀರಿದೆ. ಈಗ ಎಳೆ ಅಡಿಕೆ ಬೀಳುತ್ತಿದೆ. ಇನ್ನೀಗ ಮಳೆಯಾದ ತಕ್ಷಣವೇ ಅಂದರೆ ವಾತಾವರಣ ತಂಪಾದ ಕೂಡಲೇ ಇನ್ನೊಂದಿಷ್ಟು ಎಳೆ  ಎಡಿಕೆ ಬೀಳಲಿದೆ. ಈಗಲೇ ಮಳೆಯಾದರೆ ಸ್ವಲ್ಪ ಅಡಿಕೆ ಉಳಿದೀತು. ಹೀಗಾಗಿ ಈ ಬಾರಿಯ ತಾಪಮಾನ ಅಡಿಕೆ ಬೆಳೆಗಾರರಿಗೆ ತೀವ್ರ ಸಂಕಷ್ಟ ತಂದಿದೆ.

Advertisement

ಕರಾವಳಿ ಜಿಲ್ಲೆಯಲ್ಲಿ ಈ ಬಾರಿ ವಿಪರೀತವಾಗಿ ತಾಪಮಾನ ಏರಿಕೆ ಕಂಡಿದೆ. ಎಪ್ರಿಲ್‌ ಮೊದಲ ವಾರದಲ್ಲಿ  36-37 ಡಿಗ್ರಿಯ ತಾಪಮಾನ  ಇದ್ದರೆ ಎಪ್ರಿಲ್‌ ಎರಡನೇ ವಾರ ತಾಪಮಾನ 40 ಡಿಗ್ರಿಗೆ ತಲಪಿತ್ತು. ಅಂದಿನಿಂದ ಏರಿದ ತಾಪಮಾನ ಇಂದಿನವರೆಗೂ ಇಳಿಕೆಯಾಗಿಲ್ಲ. ಸತತವಾಗಿ 40-42 ಡಿಗ್ರಿ ತಾಪಮಾನ ಕಂಡುಬಂದಿದೆ. ಎಪ್ರಿಲ್‌ ಮೊದಲ ವಾರದಿಂದ 36 ಡಿಗ್ರಿಗಿಂತ ಕಡಿಮೆ ತಾಪಮಾನ ಬಂದಿಲ್ಲ.

ಅಡಿಕೆಗೆ ಸಾಮಾನ್ಯವಾಗಿ 35-37 ಡಿಗ್ರಿ ತಾಪಮಾನ ಇದ್ದರೆ ಮಾತ್ರವೇ ಎಳೆ ಅಡಿಕೆ ಶಕ್ತಿಯುತವಾಗಿ ಬೆಳೆಯುತ್ತದೆ. ತಾಪಮಾನಕ್ಕೆ ಬಾಡುವುದಿಲ್ಲ.‌ ಹಿಂಗಾರ ಅರಳಿ ಸರಿಯಾಗಿ ಕಾಯಿ ಕಟ್ಟುತ್ತದೆ. ಅಲ್ಲದೇ ಇದ್ದರೆ ಅಡಿಕೆ ಸರಿಯಾಗಿ ಕಾಯಿ ಕಟ್ಟುವುದಿಲ್ಲ ಅಂದರೆ ಪ್ರುಟ್‌ ಸೆಟ್‌ ಆಗುವುದಿಲ್ಲ. ಯಾವ ಔಷಧಿಗಳು ಸಿಂಪಡಣೆ ಮಾಡಿದರೂ ಅಡಿಕೆ ಕಾಯಿ ಕುಟ್ಟುವಲ್ಲಿ ಸಫಲತೆ ಕಾಣುವುದಿಲ್ಲ. ಈ ಬಾರಿ ಅಂತಹದ್ದೇ ವಾತಾವರಣ ಸೃಷ್ಟಿಯಾಗಿದೆ. ಸತತವಾಗಿ ತಾಪಮಾನ 40 ಡಿಗ್ರಿ ಇದ್ದ ಕಾರಣ ಎಳೆ ಅಡಿಕೆ ಬಾಡಿದೆ. ಈಗಾಗಲೇ ಹಲವು ಕಡೆ ಬಿದ್ದಿದೆ, ಬೀಳುತ್ತಿದೆ. ಇದೀಗ ವಾತಾವರಣದ ಉಷ್ಣತೆ 35 ಡಿಗ್ರಿಗಿಂತ ಕಡಿಮೆಯಾದ ತಕ್ಷಣವೇ ಮರದಲ್ಲಿ ತಾಪಮಾನದಿಂದ ಬಾಡಿ ಎಳೆ ಅಡಿಕೆ ಬೀಳುವುದೂ ಇದೆ. ಈಗಾಗಲೇ ಶೇ.25 ರಷ್ಟು ಎಳೆ ಅಡಿಕೆ ಬಿದ್ದರೆ, ಮುಂದೆ ಮಳೆಯಾದ ಕೂಡಲೇ ಇನ್ನೂ 25 ಶೇ ಅಡಿಕೆ ಬೀಳುವ ಸಾಧ್ಯತೆ ಇದೆ. ಇದು ಅಡಿಕೆ ಫಸಲಿನ ಮೇಲೆ ಪರಿಣಾಮ ಬೀರಲಿದೆ.

Advertisement

ಅಡಿಕೆ ತೋಟದ ಒಳಗೆ ತಂಪು ವಾತಾವರಣ ಇರುತ್ತದೆ. ಆದರೆ ಈಗ ಬಿಸಿ ವಾತಾವರಣ ಇದೆ. ಅಡಿಕೆ ಮರದ ಬುಡಕ್ಕೆ ಎಷ್ಟೇ ನೀರು ಹಾಯಿಸಿದರೂ ಬುಡ ಮಾತ್ರ ತಂಪಾಗುತ್ತಿದೆ  ಹೊರತು ಹೊರಗಿನ ವಾತಾವರಣ ತಂಪಾಗಿಲ್ಲ.  ಬಿಸಿಲಿನಿಂದ ಇಡೀ ಮರವೇ ಸುಟ್ಟಂತಾಗುತ್ತಿದೆ. ಹೆಚ್ಚಿನ ತೋಟಗಳಲ್ಲಿ ಹಿಂಗಾರ ಕರಟಿ ಹೋಗಿ ಫಸಲೇ ಶೂನ್ಯವಾಗಿದೆ.

ಸಾಮಾನ್ಯವಾಗಿ ಆರು ಕಾರಣಗಳಿಂದಾಗಿ ನಳ್ಳಿ ಉದುರುತ್ತದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ. ಉಷ್ಣ ತಾಪಮಾನ, ಮರಗಳ ಶಕ್ತಿ ಸಾಮರ್ಥ್ಯ, ಕೀಟಬಾಧೆ, ಶಿಲೀಂಧ್ರಗಳು, ರೋಗರುಜಿನ, ಪೋಷಕಾಂಶಗಳ ಕೊರತೆ. ಈ ಬಾರಿ ತಾಪಮಾನವೇ ನೇರ ಕಾರಣ. ರೋಗ ರುಜಿನಗಳಿಗೆ ಔಷಧ ಸಿಂಪಡಿಸಿ ಆದರೂ ಪರಿಹಾರ ಕಂಡುಕೊಳ್ಳಬಹುದು. ಆದರೆ ಬಿಸಿಲಿನ ಧಗೆಗೆ ಪರಿಹಾರ ಇಲ್ಲ. ಮಳೆ ಆರಂಭದಲ್ಲಿ ಕೀಟಗಳೂ ಅಡಿಕೆಗೆ ಬಾಧಿಸುತ್ತವೆ. ಹೀಗಾಗಿ ಆಗಲೂ ಎಚ್ಚರಿಕೆ ಅಗತ್ಯ ಇದೆ.

Due to continuous high temperature , the Arecanut crop is in problem. The nut is falling. It is estimated that 50% of the Arecanut crop will be lost.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ
ರಾಜ್ಯದ 10 ಜಿಲ್ಲೆಯಲ್ಲಿ ಶ್ರಮಿಕ, ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ನಿರ್ಧಾರ
July 11, 2025
7:11 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group