ಈಗ ಎಲ್ಲೆಡೆಯೂ ಧರ್ಮಗಳ ನಡುವೆ ಸಂಘರ್ಷ. ಈಗಂತೂ ಹಿಜಬ್ ವಿವಾದ. ಈ ನಡುವೆಯೂ ಸಾಮರಸ್ಯ ತಲೆ ಎತ್ತಿ ನಿಲ್ಲುತ್ತದೆ. ಈಚೆಗೆ ಉಪ್ಪಿನಂಗಡಿಯ ವಿಡಿಯೋ ವೈರಲ್ ಆಗಿರುವ ಬೆನ್ನಿಗೇ ಇದೊಂದು ಸಂಗತಿ ಗಮನ ಸೆಳೆದಿದೆ. ಮುಸ್ಲಿಂ ಉದ್ಯಮಿಯೊಬ್ಬರು ಕೃಷ್ಣನ ದೇಗುಲ ನಿರ್ಮಿಸುವ ಮೂಲಕ ಭಾವೈಕ್ಯ ಸಂದೇಶ ಸಾರಿದ್ದಾರೆ.
ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ನೌಷಾದ್ ಶೇಕ್ ಅವರು ಮಹೇಶ್ ಬಥಾನಿ ಗ್ರಾಮದಲ್ಲಿ ಸುಮಾರು 42 ಲಕ್ಷ ರೂ ವೆಚ್ಚದಲ್ಲಿ ಕೃಷ್ಣನ ದೇವಸ್ಥಾನ ನಿರ್ಮಿಸಿದ್ದಾರೆ.
ಧರ್ಮ ಧರ್ಮದ ಮಧ್ಯೆ ಪೈಪೋಟಿ ನಡೆಯುತ್ತಿರುವ ಈ ಹೊತ್ತಿನಲ್ಲಿ ಜಾರ್ಖಂಡ್ ನಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು ಎಲ್ಲ ಧರ್ಮ ಒಂದೇ ಎಂಬ ಸಂದೇಶ ಸಾರಿದ್ದಾರೆ. ಸಹೋದರರ ಹಾಗೆ ಬಾಳಿ ಬದುಕಬೇಕಾದ ಬಗ್ಗೆ ಹಿತವಚನ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಮಾಯಾಪುರ್‌ಗೆ ಭೇಟಿ ನೀಡಿದ ನಂತರ ಕನಸಿನಲ್ಲಿ ಕೃಷ್ಣ ಕಾಣಿಸಿಕೊಂಡಿದ್ದರಿಂದ ದೇಗುಲ ನಿರ್ಮಿಸಿರುವುದಾಗಿ ಉದ್ಯಮಿ ಹೇಳಿಕೊಂಡಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel