ಒಂದೇ ಜಾಗದಲ್ಲಿ ಬೃಹತ್​ 10 ಹೆಬ್ಬಾವುಗಳು ಪತ್ತೆ!

March 9, 2022
7:41 PM

ತೆಲಂಗಾಣ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡುವ ಉದ್ದೇಶದಿಂದ ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಒಂದೇ ಜಾಗದಲ್ಲಿ ಬೃಹತ್ ಗಾತ್ರದ 10 ಹೆಬ್ಬಾವುಗಳು ಮಂಚೇರಿಯಲ್ ಜಿಲ್ಲೆಯ ಲಕ್ಷೆಟ್ಟಿಪೇಟ ಮಂಡಲದ ವೆಂಕಟರಾಮ್ ಪೇಟೆ ಗ್ರಾಮದ ಹೊರಪ್ರದೇಶದ ಗುಡ್ಡದ ಬಂಡೆಯ ಕೆಳಗೆ  ಪತ್ತೆಯಾಗಿವೆ.

ಗ್ರಾಮದ ಹೊರಗೆ ದೇವಸ್ಥಾನ ನಿರ್ಮಿಸಲು ಸ್ಥಳ ಪರಿಶೀಲನೆಗೆ ತೆರಳಿದ್ದ ವೇಳೆ ಬಂಡೆಯ ಕೆಳಗೆ ಇಷ್ಟೊಂದು ಹೆಬ್ಬಾವು ಕಾಣಿಸಿಕೊಂಡಿದ್ದು, ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಎರಡು ಹೆಬ್ಬಾವು 10 ಅಡಿಗೂ ಹೆಚ್ಚು ಉದ್ದವಿದ್ದು, ಉಳಿದ ಎಂಟು ಹೆಬ್ಬಾವು 6-8 ಅಡಿ ಉದ್ದವಿದ್ದವು.

ಹಾವು ಹಿಡಿಯುವ ಅಬುಶೇಕ್ ಅವರ ಸಹಾಯದಿಂದ ಅರಣ್ಯ ಇಲಾಖೆ ಉಪ ಕ್ಷೇತ್ರಾಧಿಕಾರಿ ಅಬ್ದುಲ್ ಅಜರ್ ಸ್ಥಳಕ್ಕಾಗಮಿಸಿ, ಅವುಗಳನ್ನ ಹೊರಗೆ ತೆಗೆದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ
October 7, 2026
11:22 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror