ಸಜೀವಿ ಮಣ್ಣು ನಿರ್ಮಾಣಕ್ಕಾಗಿ ಅನುಸರಿಸಬೇಕಾದ ಸೂತ್ರಗಳು |

January 6, 2024
3:29 PM

ಬೆಳೆಗಳನ್ನು(crops) ಉತ್ತಮವಾಗಿ ಬೆಳೆಯುವ ಜವಾಬ್ದಾರಿ ಮಣ್ಣಿನದು(Soil). ಮಣ್ಣಲ್ಲಿ ಆ ಸಾಮರ್ಥ್ಯ ಇರುವಂತೆ ಮಾಡುವ ಜವಾಬ್ದಾರಿ ನಮ್ಮದು. ಹಾಗಿದ್ದಲ್ಲಿ ಮಣ್ಣಲ್ಲಿ ಬೆಳೆ ಬೆಳೆಸುವ ಸಾಮರ್ಥ್ಯ ಬರುವಂತೆ ಮಾಡುವುದು ಹೇಗೆ ? ಮಣ್ಣಲ್ಲಿ ಸಾವಯವ ಅಂಶ – ತೇವಾಂಶ – ಜೀವಾಂಶ(Organic matter – moisture – nutrients) ಸದಾಕಾಲ ಇರುವಂತೆ ಮಾಡುವುದೇ ಮಣ್ಣನ್ನು ಬೆಳೆಸುವುದು ಎಂದರ್ಥ. ಇವೆಲ್ಲವನ್ನೂ ಮಣ್ಣು ಹೊದಿಕೆ ಮೂಲಕ ಮಾಡಬಹುದು.

Advertisement
Advertisement

ಮಣ್ಣು ಜೀವಾಣುಗಳಿಗೆ ಸೂರ್ಯನ ಪ್ರಖರ ಬಿಸಿಲು ಮೊದಲ ವೈರಿ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳೇ ಎರಡನೇ ವೈರಿ. ಹೊಲ – ಗದ್ದೆ – ತೋಟಗಳಲ್ಲಿ ಸದಾಕಾಲ ನಿಂತು ಬಿಡುವ ಕೆಸರು ನೀರೇ ಮೂರನೇ ವೈರಿ. ಗಿಡಗಳನ್ನು ಬೆಳೆಸಲು ಮಣ್ಣಲ್ಲಿ ತೇವಾಂಶ ಇರಬೇಕೇ ಹೊರತು ನೀರಲ್ಲ.

1. ಆದಷ್ಟೂ ಯಾಂತ್ರಿಕ ಉಳುಮೆ ಮಾಡುವುದನ್ನು ನಿಲ್ಲಿಸಿ. ಕೆಳಮಣ್ಣನ್ನು ಕದಲಿಸಬೇಡಿ. ಮಣ್ಣು ಜೀವಿಗಳು ಮಣ್ಣಲ್ಲಿ ಸಂಚರಿಸುತ್ತಾ ತಾವೇ ಸಹಜವಾಗಿ ಉಳುಮೆ ಮಾಡಿಬಿಡುತ್ತವೆ. ಇದನ್ನೇ ಮಣ್ಣಿನ ಜೈವಿಕ ಉಳುಮೆ ಎನ್ನುವುದು.

2. ಮಣ್ಣಲ್ಲಿ ಜೀವಮಂಡಲ ಇರುವಂತೆ ಮಾಡಲು ಕಾಂಪೋಸ್ಟ್ ಬಳಸಿ

3. ಮಣ್ಣಲ್ಲಿ ಸಾವಯವ ವಸ್ತುಗಳು ಸದಾ ಇರುವಂತೆ ಮಾಡಲು ಮಣ್ಣು ಹೊದಿಕೆ ಮಾಡಿ

Advertisement

4. ಆದಷ್ಟೂ ಬಹುಬೆಳೆಗಳನ್ನು ಬೆಳೆಸಿ – ಮಣ್ಣ ಮೇಲೆ ವೈವಿಧ್ಯಮಯ ಬೆಳೆಗಳಿದ್ದಷ್ಟೂ ಮಣ್ಣೊಳಗೆ ವೈವಿಧ್ಯಮಯ ಜೀವಜಂತುಗಳಿರುತ್ತವೆ. Growing diversified plants above the soil is building diversified soil organisms below the soil.

5. ಮಣ್ಣ ಮೇಲೆ ಸದಾಕಾಲ ಯಾವುದಾದರೂ ಗಿಡಗಳು ಇರುವಂತೆ ನೋಡಿಕೊಳ್ಳಿ. ಅವು ‘ ಕಳೆ ಗಿಡಗಳಾಗಿದ್ದರೂ ಸರಿಯೇ. ಬಿಸಿಲಿನಿಂದ ರಕ್ಷಿಸಿ.

6. ಮಣ್ಣಿನ ಸ್ಥಿತಿಯನ್ನು ಸುಧಾರಿಸಲು ಹಸಿರೆಲೆ ಗೊಬ್ಬರವನ್ನು ಬಳಸಿ

7. ಮಣ್ಣಿಗೆ ಮೈಕೋರೀಝಾ ಫಂಗೀ ಜೀವಾಣುವನ್ನು ಸೇರಿಸಿ

8. ಫಂಗೀಗಳಿಗೆ ಆಹಾರವಾಗಿ ಮರದ ಹೊಟ್ಟು – ತೊಗಟೆ ಇತ್ಯಾದಿಗಳನ್ನು ಬಳಸಿ

Advertisement

9. ಮಣ್ಣು ತನ್ನಷ್ಟಕ್ಕೇ ತಾನೇ ಫಲವತ್ತುಗೊಳ್ಳುವಂತಹ ವ್ಯವಸ್ಥೆಯನ್ನು ನಿಮ್ಮ ಹೊಲ – ತೋಟಗಳಲ್ಲಿ ನಿರ್ಮಿಸಿ.

Source : Agri media

Soil is responsible for growing crops. It is our responsibility to make that potential in the soil. Isn't it . . If so, how to make the soil capable of growing crops? Cultivating the soil means maintaining the organic matter - moisture - nutrients in the soil. All these can be done through soil cover.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ
July 29, 2025
8:46 PM
by: The Rural Mirror ಸುದ್ದಿಜಾಲ
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ
July 29, 2025
8:34 PM
by: The Rural Mirror ಸುದ್ದಿಜಾಲ
ಕಳೆದ 11 ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಅಗಾಧ ಬೆಳವಣಿಗೆ | ಲೋಕಸಭೆಯಲ್ಲಿ ಕೇಂದ್ರ ಕೃಷಿ  ಸಚಿವರ  ಹೇಳಿಕೆ
July 29, 2025
8:25 PM
by: The Rural Mirror ಸುದ್ದಿಜಾಲ
ಬಿಎಸ್ ಎನ್ ಎಲ್  ಪರಿಶೀಲನಾ ಸಭೆ | ʻಬಿಎಸ್ಎನ್ಎಲ್‌ʼ ಸೇವೆಗಳ ಸುಧಾರಣೆಗೆ ಕ್ರಮ
July 29, 2025
8:19 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group