ಗುಜ್ಜೆ ಶೇಂಗಾ ಪಲ್ಯಕ್ಕೆ ಬೇಕಾಗುವ ಸಾಮಗ್ರಿಗಳು : ಗುಜ್ಜೆ 1/2 ಕಪ್, ಶೇಂಗಾ 1/2 (ಕಪ್ ತೊಳೆದು ನೆನೆ ಹಾಕಿ)( 3 ಗಂಟೆ ಕಾಲ ನೆನೆ ಹಾಕಿ), ಮೆಣಸಿನ ಪುಡಿ 1 ಚಮಚ , ಅರಿಸಿನ ಪುಡಿ ಸ್ವಲ್ಪ, ಚಿಕ್ಕ ತುಂಡು ಬೆಲ್ಲ, ಸಾರಿನ ಪುಡಿ 3/4 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕಾಯಿತುರಿ.
ಮಾಡುವ ವಿಧಾನ: ಗುಜ್ಜೆ ಕಟ್ ಮಾಡಿ ಚಿಕ್ಕ ದಾಗಿ ಕಟ್ ಮಾಡಿ ಕುಕ್ಕರ್ ಗೆ ಹಾಕಿ. ನೆನೆ ಹಾಕಿದ ಶೇಂಗಾ ತೊಳೆದು ಕುಕ್ಕರ್ ಗೆ ಹಾಕಿ ಇದಕ್ಕೆ ಉಪ್ಪು ರುಚಿಗೆ ತಕ್ಕಷ್ಟು ಬೆಲ್ಲ, ನೀರು ಸೇರಿಸಿ 3 ಸೀಟಿ ಕೂಗಿಸಿ. ಬಾಣಲೆಗೆ ಎಣ್ಣೆ 6 ಚಮಚ, ಸಾಸಿವೆ ಸ್ವಲ್ಪ, ಉದ್ದಿನ ಬೇಳೆ ಕೆಂಪು ಮೆಣಸು, ಜೀರಿಗೆ, ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಚಟಪಟಾಯಿಸಿ ಇದಕ್ಕೆ ಬೇಯಿಸಿದ ಗುಜ್ಜೆ, ಶೇಂಗಾ ಹಾಕಿ ಮಿಕ್ಸ್ ಮಾಡಿ ನಂತರ, ಮೆಣಸಿನ ಪುಡಿ, ಅರಿಸಿನ ಪುಡಿ, ಸಾರಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ . ಕಾಯಿತುರಿ ಹಾಕಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ. ಬಿಸಿ ಬಿಸಿಯಾದ ಅನ್ನದ ಜೊತೆ ತುಪ್ಪ ಹಾಕಿ ತಿನ್ನಲು ಬಲು ರುಚಿ….
ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…
ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…
ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…
ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …
ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…