ಹೊಸರುಚಿ | ಗುಜ್ಜೆ ಕಟ್ಲೇಟ್

March 6, 2025
11:27 AM
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್‌ ಅವರು ಇಲ್ಲಿ ವಿವರ ನೀಡಿದ್ದಾರೆ..

ಗುಜ್ಜೆ ಕಟ್ಲೇಟ್ ಗೆ  ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :………ಮುಂದೆ ಓದಿ……..

Advertisement
Advertisement
Advertisement
Advertisement
Advertisement

ಗುಜ್ಜೆ ಕಟ್ ಮಾಡಿ ಸಿಪ್ಪೆ ತೆಗೆದು ಕಟ್ ಮಾಡಿ ನೀರಿನಲ್ಲಿ ಹಾಕಿ. ನಂತರ ನೀರು ಸೋಸಿಕೊಳ್ಳಿ . ಕುಕ್ಕರ್ ಗೆ ಹಾಕಿ ಇದಕ್ಕೆ ಒಂದು ಆಲೂಗಡ್ಡೆ ಸಿಪ್ಪೆ ತೆಗೆದು ಕಟ್ ಮಾಡಿ ಹಾಕಿ. ಬಟಾಣಿ ಸ್ವಲ್ಪ ಹಾಕಿ ನೀರು ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ 3 ಸೀಟಿ ಕೂಗಿಸಿ. ನಂತರ ನೀರು ಸೋಸಿಕೊಳ್ಳಿ. ಇದನ್ನು ಸ್ಮ್ಯಾಶ್ ಮಾಡಿ .

Advertisement

ಮಾಡುವ ವಿಧಾನ : ಬಾಣಲೆಗೆ ಎಣ್ಣೆ,ಸಾಸಿವೆ ಜೀರಿಗೆ, ಹಾಕಿ ಚಟಪಟಾಯಿಸಿ ನಂತರ ಸ್ಮ್ಯಾಶ್ ಮಾಡಿದ ಗುಜ್ಜೆ, ಆಲೂಗೆಡ್ಡೆ ಬಟಾಣಿ ಹಾಕಿ ಮಿಕ್ಸ್ ಮಾಡಿ ಇದಕ್ಕೆ, ಕಿಚನ್ ಕಿಂಗ್ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಚಿಕ್ಕ ದಾಗಿ ಕಟ್ ಮಾಡಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಚಿಕ್ಕ ದಾಗಿ ಕಟ್ ಮಾಡಿದ ಹಸಿಮೆಣಸಿನ ಕಾಯಿ , ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ.

ಒಂದು ಬೌಲ್ ಗೆ 1 ಚಮಚ ಮೈದಾ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಒಂದು ತಟ್ಟೆಗೆ ಚಿರೋಟಿ ರವೆ ಹಾಕಿ ಇಟ್ಟುಕೊಳ್ಳಿ.  ಮಿಕ್ಸ್ ಮಾಡಿ ಇಟ್ಟ ಸಾಮಗ್ರಿಗಳನ್ನು ಉಂಡೆ ಮಾಡಿ ಕೈಯಲ್ಲಿ ತಟ್ಟಿ ಮೈದಾ ದಲ್ಲಿ ಅದ್ದಿ ಚಿರೋಟಿ ರವೆ ಗೆ ಹಾಕಿ ನಂತರ ತವಾ ಬಿಸಿ ಆದ ನಂತರ ಸ್ವಲ್ಪ ಎಣ್ಣೆ ಹಾಕಿ ಎರಡು ಬದಿ ಫ್ರೈ ಮಾಡಿ ತೆಗೆಯಿರಿ. ಈವಾಗ ಬಿಸಿ ಬಿಸಿಯಾದ ಗುಜ್ಜೆ ಕಟ್ಲೇಟ್ ರೆಡಿ.

ಬರಹ :
ದಿವ್ಯಾ ಮಹೇಶ್
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |
March 6, 2025
12:27 PM
by: The Rural Mirror ಸುದ್ದಿಜಾಲ
ಕುಂಭಮೇಳ | ಪ್ರಯಾಗ ತಲಪುವಾಗ ಸಂತಸವೇ ಸಂತಸ…
March 6, 2025
10:52 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮನೆಯಲ್ಲಿ ಮಕ್ಕಳಿಗೆ ಸ್ಟ್ರಾಂಗ್ ಫಾದರ್ ಮತ್ತು ಕಲ್ಚರ್ಡ್ ಮದರ್ ಇರಬೇಕು
March 6, 2025
10:23 AM
by: ಡಾ.ಚಂದ್ರಶೇಖರ ದಾಮ್ಲೆ
ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ
March 4, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror