ಗುಜ್ಜೆ ಕಟ್ಲೇಟ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :………ಮುಂದೆ ಓದಿ……..
ಗುಜ್ಜೆ ಕಟ್ ಮಾಡಿ ಸಿಪ್ಪೆ ತೆಗೆದು ಕಟ್ ಮಾಡಿ ನೀರಿನಲ್ಲಿ ಹಾಕಿ. ನಂತರ ನೀರು ಸೋಸಿಕೊಳ್ಳಿ . ಕುಕ್ಕರ್ ಗೆ ಹಾಕಿ ಇದಕ್ಕೆ ಒಂದು ಆಲೂಗಡ್ಡೆ ಸಿಪ್ಪೆ ತೆಗೆದು ಕಟ್ ಮಾಡಿ ಹಾಕಿ. ಬಟಾಣಿ ಸ್ವಲ್ಪ ಹಾಕಿ ನೀರು ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ 3 ಸೀಟಿ ಕೂಗಿಸಿ. ನಂತರ ನೀರು ಸೋಸಿಕೊಳ್ಳಿ. ಇದನ್ನು ಸ್ಮ್ಯಾಶ್ ಮಾಡಿ .
ಮಾಡುವ ವಿಧಾನ : ಬಾಣಲೆಗೆ ಎಣ್ಣೆ,ಸಾಸಿವೆ ಜೀರಿಗೆ, ಹಾಕಿ ಚಟಪಟಾಯಿಸಿ ನಂತರ ಸ್ಮ್ಯಾಶ್ ಮಾಡಿದ ಗುಜ್ಜೆ, ಆಲೂಗೆಡ್ಡೆ ಬಟಾಣಿ ಹಾಕಿ ಮಿಕ್ಸ್ ಮಾಡಿ ಇದಕ್ಕೆ, ಕಿಚನ್ ಕಿಂಗ್ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಚಿಕ್ಕ ದಾಗಿ ಕಟ್ ಮಾಡಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಚಿಕ್ಕ ದಾಗಿ ಕಟ್ ಮಾಡಿದ ಹಸಿಮೆಣಸಿನ ಕಾಯಿ , ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಟವ್ ಆಫ್ ಮಾಡಿ.
ಒಂದು ಬೌಲ್ ಗೆ 1 ಚಮಚ ಮೈದಾ ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಒಂದು ತಟ್ಟೆಗೆ ಚಿರೋಟಿ ರವೆ ಹಾಕಿ ಇಟ್ಟುಕೊಳ್ಳಿ. ಮಿಕ್ಸ್ ಮಾಡಿ ಇಟ್ಟ ಸಾಮಗ್ರಿಗಳನ್ನು ಉಂಡೆ ಮಾಡಿ ಕೈಯಲ್ಲಿ ತಟ್ಟಿ ಮೈದಾ ದಲ್ಲಿ ಅದ್ದಿ ಚಿರೋಟಿ ರವೆ ಗೆ ಹಾಕಿ ನಂತರ ತವಾ ಬಿಸಿ ಆದ ನಂತರ ಸ್ವಲ್ಪ ಎಣ್ಣೆ ಹಾಕಿ ಎರಡು ಬದಿ ಫ್ರೈ ಮಾಡಿ ತೆಗೆಯಿರಿ. ಈವಾಗ ಬಿಸಿ ಬಿಸಿಯಾದ ಗುಜ್ಜೆ ಕಟ್ಲೇಟ್ ರೆಡಿ.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…