ಯಾವಾಗಲೂ ಬಿಸಿ ಬಿಸಿ ಬಜ್ಜಿ ತಿನ್ನೋದು ಒಂದು ವಿಶೇಷ ಅನುಭವ. ಅದರಲ್ಲಿ ಎಳೆಯ ಹಲಸಿನ ಕಾಯಿ ಬಳಸಿ ಮಾಡುವ ಬಜ್ಜಿ ಒಂದು ವಿಶಿಷ್ಟ ರುಚಿ ನೀಡುತ್ತದೆ. ಇದು ಆರೋಗ್ಯಕರವೂ ಆಗಿದ್ದು, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
- ಎಳೆಯ ಹಲಸಿನ ಕಾಯಿ (ಕಟ್ ಮಾಡಿ ಕ್ಲೀನ್ ಮಾಡಿದದ್ದು)
- ಕಡಲೆ ಹಿಟ್ಟು – 1 ಕಪ್
- ಅಕ್ಕಿ ಹಿಟ್ಟು – 3 ಚಮಚ
- ಶೇಂಗಾ – 2 ಚಮಚ
- ಕೊತ್ತಂಬರಿ ಬೀಜ – 1 ಚಮಚ
- ಜೀರಿಗೆ – ಸ್ವಲ್ಪ
- ಮೆಣಸಿನ ಪುಡಿ – 1 ಚಮಚ
- ಅರಿಶಿನ ಪುಡಿ – ¼ ಚಮಚ
- ಹಿಂಗು – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು
ಮಾಡುವ ವಿಧಾನ
ಹಲಸಿನ ಕಾಯಿ ತಯಾರಿ
- ಎಳೆಯ ಹಲಸಿನ ಕಾಯಿಯನ್ನು ಕಟ್ ಮಾಡಿ ಚೆನ್ನಾಗಿ ಕ್ಲೀನ್ ಮಾಡಿ.
- ನಂತರ ಬಿಸಿ ನೀರಿಗೆ ಹಾಕಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿ ತೆಗೆದುಕೊಳ್ಳಿ.
ಮಸಾಲಾ ತಯಾರಿ
- ಶೇಂಗಾವನ್ನು ಫ್ರೈ ಮಾಡಿ ತರಿತರಿಯಾಗಿ ರುಬ್ಬಿಕೊಳ್ಳಿ.
- ಕೊತ್ತಂಬರಿ ಬೀಜ ಮತ್ತು ಜೀರಿಗೆ ಫ್ರೈ ಮಾಡಿ ರುಬ್ಬಿಕೊಳ್ಳಿ.
ಹಿಟ್ಟು ಕಲೆಸುವುದು
- ಒಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ರುಬ್ಬಿದ ಮಿಶ್ರಣ ಹಾಕಿ.
- ಇದಕ್ಕೆ ಉಪ್ಪು, ಮೆಣಸಿನ ಪುಡಿ, ಅರಿಶಿನ ಪುಡಿ, ಹಿಂಗು ಸೇರಿಸಿ.
- ನೀರು ಹಾಕಿ ಮೃದುವಾದ ಹಿಟ್ಟು ತಯಾರಿಸಿಕೊಳ್ಳಿ (ತುಂಬಾ ತೆಳ್ಳಗೆ ಮಾಡಬೇಡಿ).
ಬಜ್ಜಿ ತಯಾರಿ
- ಹಲಸಿನ ಕಾಯಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ.
- ಕಾದ ಎಣ್ಣೆಯಲ್ಲಿ ಹಾಕಿ ಕೆಂಪಾಗುವವರೆಗೆ ಕರಿಯಿರಿ.
ಸರ್ವಿಂಗ್ ಸಲಹೆ : ಬಿಸಿ ಬಿಸಿ ಬಜ್ಜಿಯನ್ನು ಈರುಳ್ಳಿ ಮತ್ತು ಸಾಸ್ ಜೊತೆ ಸವಿದರೆ ಇನ್ನೂ ರುಚಿ ಹೆಚ್ಚುತ್ತದೆ! ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Tender jackfruit bajji is a crispy and delicious snack made by coating tender jackfruit pieces in a spiced gram flour batter and deep frying them. It is a perfect evening snack, especially during rainy weather.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

