ಹೊಸರುಚಿ | ಎಳೆಯ ಹಲಸಿನ ಕಾಯಿ ಬಜ್ಜಿ – ಮನೆಯಲ್ಲೇ ಸವಿಯುವ ಕ್ರಿಸ್ಪಿ ಸ್ನ್ಯಾಕ್

March 28, 2026
9:12 AM
ಎಳೆಯ ಹಲಸಿನ ಕಾಯಿ ಬಳಸಿ ಮಾಡುವ ಬಜ್ಜಿ ರುಚಿಕರವಾದ ಮತ್ತು ಕ್ರಿಸ್ಪಿ ಸ್ನ್ಯಾಕ್ ಆಗಿದೆ. ಬಿಸಿ ಬಿಸಿ ಸವಿದರೆ ಇನ್ನಷ್ಟು ರುಚಿ ಹೆಚ್ಚುತ್ತದೆ.

ಯಾವಾಗಲೂ ಬಿಸಿ ಬಿಸಿ ಬಜ್ಜಿ ತಿನ್ನೋದು ಒಂದು ವಿಶೇಷ ಅನುಭವ. ಅದರಲ್ಲಿ ಎಳೆಯ ಹಲಸಿನ ಕಾಯಿ ಬಳಸಿ ಮಾಡುವ ಬಜ್ಜಿ ಒಂದು ವಿಶಿಷ್ಟ ರುಚಿ ನೀಡುತ್ತದೆ. ಇದು ಆರೋಗ್ಯಕರವೂ ಆಗಿದ್ದು, ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

  • ಎಳೆಯ ಹಲಸಿನ ಕಾಯಿ (ಕಟ್ ಮಾಡಿ ಕ್ಲೀನ್ ಮಾಡಿದದ್ದು)
  • ಕಡಲೆ ಹಿಟ್ಟು – 1 ಕಪ್
  • ಅಕ್ಕಿ ಹಿಟ್ಟು – 3 ಚಮಚ
  • ಶೇಂಗಾ – 2 ಚಮಚ
  • ಕೊತ್ತಂಬರಿ ಬೀಜ – 1 ಚಮಚ
  • ಜೀರಿಗೆ – ಸ್ವಲ್ಪ
  • ಮೆಣಸಿನ ಪುಡಿ – 1 ಚಮಚ
  • ಅರಿಶಿನ ಪುಡಿ – ¼ ಚಮಚ
  • ಹಿಂಗು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – ಕರಿಯಲು

ಮಾಡುವ ವಿಧಾನ

ಹಲಸಿನ ಕಾಯಿ ತಯಾರಿ

  • ಎಳೆಯ ಹಲಸಿನ ಕಾಯಿಯನ್ನು ಕಟ್ ಮಾಡಿ ಚೆನ್ನಾಗಿ ಕ್ಲೀನ್ ಮಾಡಿ.
  • ನಂತರ ಬಿಸಿ ನೀರಿಗೆ ಹಾಕಿ ಸ್ವಲ್ಪ ಮೃದುವಾಗುವವರೆಗೆ ಬೇಯಿಸಿ ತೆಗೆದುಕೊಳ್ಳಿ.

ಮಸಾಲಾ ತಯಾರಿ

  • ಶೇಂಗಾವನ್ನು ಫ್ರೈ ಮಾಡಿ ತರಿತರಿಯಾಗಿ ರುಬ್ಬಿಕೊಳ್ಳಿ.
  • ಕೊತ್ತಂಬರಿ ಬೀಜ ಮತ್ತು ಜೀರಿಗೆ ಫ್ರೈ ಮಾಡಿ ರುಬ್ಬಿಕೊಳ್ಳಿ.

ಹಿಟ್ಟು ಕಲೆಸುವುದು

  • ಒಂದು ಪಾತ್ರೆಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಮತ್ತು ರುಬ್ಬಿದ ಮಿಶ್ರಣ ಹಾಕಿ.
  • ಇದಕ್ಕೆ ಉಪ್ಪು, ಮೆಣಸಿನ ಪುಡಿ, ಅರಿಶಿನ ಪುಡಿ, ಹಿಂಗು ಸೇರಿಸಿ.
  • ನೀರು ಹಾಕಿ ಮೃದುವಾದ ಹಿಟ್ಟು ತಯಾರಿಸಿಕೊಳ್ಳಿ (ತುಂಬಾ ತೆಳ್ಳಗೆ ಮಾಡಬೇಡಿ).

ಬಜ್ಜಿ ತಯಾರಿ

  • ಹಲಸಿನ ಕಾಯಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ.
  • ಕಾದ ಎಣ್ಣೆಯಲ್ಲಿ ಹಾಕಿ ಕೆಂಪಾಗುವವರೆಗೆ ಕರಿಯಿರಿ.

ಸರ್ವಿಂಗ್ ಸಲಹೆ :  ಬಿಸಿ ಬಿಸಿ ಬಜ್ಜಿಯನ್ನು ಈರುಳ್ಳಿ ಮತ್ತು ಸಾಸ್ ಜೊತೆ ಸವಿದರೆ ಇನ್ನೂ ರುಚಿ ಹೆಚ್ಚುತ್ತದೆ! ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Tender jackfruit bajji is a crispy and delicious snack made by coating tender jackfruit pieces in a spiced gram flour batter and deep frying them. It is a perfect evening snack, especially during rainy weather.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅತಿವೃಷ್ಟಿ, ಬರ, ಹೀಟ್‌ ವೇವ್‌ಗಳಿಗೆ ಯಾರು ಕಾರಣ? ಐಐಟಿ ದೆಹಲಿ ಅಧ್ಯಯನದಿಂದ ಕುತೂಹಲಕಾರಿ ಮಾಹಿತಿ!
June 18, 2026
10:15 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡಕ್ಕೆ ಕೈಗಾರಿಕಾ ಬಲ : ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ ಸಂಸದ ಬ್ರಿಜೇಶ್ ಚೌಟ
June 17, 2026
8:43 PM
by: ದ ರೂರಲ್ ಮಿರರ್.ಕಾಂ
Gen Z ಮತದಾರರತ್ತ ಬಿಜೆಪಿ ಕಣ್ಣು- 18-25 ವಯೋಮಾನದ ಯುವಕರಿಗಾಗಿ ‘ತರುಣ ಮೋರ್ಚಾ’ ರಚನೆಗೆ ಚಿಂತನೆ
June 17, 2026
8:21 PM
by: ದ ರೂರಲ್ ಮಿರರ್.ಕಾಂ
ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ಕುಸಿತ – ಚೀನಾದ ಬೇಡಿಕೆ ಇಳಿಕೆಯಿಂದ ರೈತರಿಗೆ ಸಂಕಷ್ಟ! – ಭಾರತದ ಅಡಿಕೆ ಮಾರುಕಟ್ಟೆಗೆ ಏನು ಎಚ್ಚರಿಕೆ..?
June 17, 2026
7:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror