Advertisement
ಅನುಕ್ರಮ

ಹೊಸರುಚಿ – ಎಳೆಯ ಹಲಸಿನ ಕಾಯಿ ಬಾಲ್ : ಕರಕರಾ, ರುಚಿಕರ ಮತ್ತು ಆರೋಗ್ಯಕರ ಸ್ನ್ಯಾಕ್

Share

ಎಳೆಯ ಹಲಸಿನ ಕಾಯಿ ಬಳಸಿ ತಯಾರಿಸುವ ಈ ಬಾಲ್ಸ್ ತುಂಬಾ ರುಚಿಕರವಾಗಿದೆ. ಮನೆಯಲ್ಲಿ ಸುಲಭವಾಗಿ ಸಿಗುವ ಎಳೆಯ ಹಲಸಿನ ಕಾಯಿ ಬಳಸಿ ತಯಾರಿಸಬಹುದಾದ ಈ ಬಾಲ್ಸ್ ರುಚಿಯಲ್ಲೂ ಆರೋಗ್ಯದಲ್ಲೂ ಉತ್ತಮ ಆಯ್ಕೆಯಾಗಿವೆ. ಕರಕರಾ ತಳಹದಿ ಮತ್ತು ಸುವಾಸನೆಯ ಮಸಾಲೆ ಸಂಯೋಜನೆಯಿಂದ ಈ ತಿಂಡಿ ಎಲ್ಲರಿಗೂ ಇಷ್ಟವಾಗುವಂತಹದ್ದು. ವಿಶೇಷವಾಗಿ ಸಂಜೆ ಸಮಯದಲ್ಲಿ ಚಹಾ ಜೊತೆ ಸೇವಿಸಲು ಇದು ಅತ್ಯುತ್ತಮ ಸ್ನ್ಯಾಕ್.

ಬೇಕಾಗುವ ಸಾಮಗ್ರಿಗಳು:

  • ಎಳೆಯ ಹಲಸಿನ ಕಾಯಿ – 1 ಕಪ್ (ಬೇಯಿಸಿ ನುಣ್ಣಗೆ ಪುಡಿ ಮಾಡಿದದ್ದು)
  • ಕಡಲೆ ಹಿಟ್ಟು – 1/2 ಕಪ್
  • ಅರಿಶಿನ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಷ್ಟು

 ಮಸಾಲೆಗಾಗಿ:

  • ಕೊತ್ತಂಬರಿ ಬೀಜ – 1 ಚಮಚ
  • ಜೀರಿಗೆ – 1/2 ಚಮಚ
  • ಕೊತ್ತಂಬರಿ ಸೊಪ್ಪು – 1/2 ಕಪ್
  • ಶುಂಠಿ – ಸ್ವಲ್ಪ
  • ಹಸಿಮೆಣಸು – 2-3

ಮಾಡುವ ವಿಧಾನ : ಮೊದಲು ಎಳೆಯ ಹಲಸಿನ ಕಾಯಿಯನ್ನು ಚೆನ್ನಾಗಿ ಬೇಯಿಸಿ, ನೀರು ಕಳಸಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಒಂದು ಪ್ಯಾನ್‌ನಲ್ಲಿ ಕೊತ್ತಂಬರಿ ಬೀಜ, ಜೀರಿಗೆ, ಶುಂಠಿ, ಹಸಿಮೆಣಸು ಹಾಕಿ ಸ್ವಲ್ಪ ಫ್ರೈ ಮಾಡಿ.  ನಂತರ ಇದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ, ಮಿಕ್ಸಿ ಜಾರಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಈಗ ಬೇಯಿಸಿದ ಹಲಸಿನ ಕಾಯಿಗೆ ಈ ಮಿಶ್ರಣ, ಕಡಲೆ ಹಿಟ್ಟು, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ. ಕಾದ ಎಣ್ಣೆಯಲ್ಲಿ ಈ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಕರಿದು ತೆಗೆದುಕೊಳ್ಳಿ. ಬಿಸಿ ಬಿಸಿ ಹಲಸಿನ ಕಾಯಿ ಬಾಲ್ಸ್ ಅನ್ನು  ಟೊಮೇಟೋ ಸಾಸ್ ಜೊತೆ  ತೆಂಗಿನ ಚಟ್ನಿ ಜೊತೆ ಸರ್ವ್ ಮಾಡಿದರೆ ರುಚಿ ಡಬಲ್ ಆಗುತ್ತದೆ!

ಆರೋಗ್ಯ ಸಲಹೆ

  • ಎಳೆಯ ಹಲಸಿನ ಕಾಯಿ ಫೈಬರ್ ಸಮೃದ್ಧವಾಗಿದೆ
  • ವೆಜಿಟೇರಿಯನ್ ಪ್ರೋಟೀನ್ ಸ್ನ್ಯಾಕ್ ಆಗಿ ಸೂಕ್ತ
  • ಡೀಪ್ ಫ್ರೈ ಬದಲು ಏರ್ ಫ್ರೈ ಮಾಡಿದರೂ ಚೆನ್ನಾಗಿರುತ್ತದೆ

ಚಿಕ್ಕ ಟಿಪ್ :  ಮಿಶ್ರಣ ಹೆಚ್ಚು ಸಡಿಲವಾಗಿದ್ದರೆ ಸ್ವಲ್ಪ ರವೆ ಅಥವಾ ಬ್ರೆಡ್ ಕ್ರಂಬ್ಸ್ ಸೇರಿಸಿದರೆ ಬಾಲ್ಸ್ ಕರುಕುರುತ್ತವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Tender jackfruit balls are a crispy and tasty snack made using boiled jackfruit, gram flour, and spices. Deep-fried to golden perfection, they make a perfect evening snack when served with chutney or sauce.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

Published by
ದಿವ್ಯ ಮಹೇಶ್

Recent Posts

ಅಡಿಕೆ ಮಾರುಕಟ್ಟೆಯ ಸ್ಥಿತಿಗತಿ ಮತ್ತು ಬೆಳೆಗಾರರ ಅಭಿಪ್ರಾಯ : ಸಮೀಕ್ಷಾ ವರದಿ

ಅಡಿಕೆ ಮಾರುಕಟ್ಟೆಯಲ್ಲಿ ವರ್ತಕರ ಸಿಂಡಿಕೇಟ್ ಮತ್ತು ವಿದೇಶಿ ಆಮದು ಬೆಲೆ ಅಸ್ಥಿರತೆಗೆ ಕಾರಣವಾಗಿವೆ.…

1 hour ago

ಭಾರತದಲ್ಲಿ ವಿದ್ಯುತ್ ಉತ್ಪಾದನೆಗೆ ಐತಿಹಾಸಿಕ ಏರಿಕೆ : 55 ಗಿಗಾವ್ಯಾಟ್ ಹೆಚ್ಚಳ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಲ್ಲಿ ಐತಿಹಾಸಿಕವಾಗಿ 55 ಗಿಗಾವ್ಯಾಟ್ ಹೆಚ್ಚಳವಾಗಿದೆ. ನವೀಕರಿಸಬಹುದಾದ ಇಂಧನ…

2 hours ago

ದೇಶದಲ್ಲಿ LPG ವಿತರಣೆ ಸಾಮಾನ್ಯ ಹಂತಕ್ಕೆ : ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಣೆ

ದೇಶದಲ್ಲಿ LPG ವಿತರಣೆ ಸಾಮಾನ್ಯವಾಗಿದ್ದು, ಒಂದೇ ದಿನ 51.5 ಲಕ್ಷ ಸಿಲಿಂಡರ್ ವಿತರಿಸಲಾಗಿದೆ.…

2 hours ago

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ಭರವಸೆ

ರೈತರ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆ ವಿದ್ಯುತ್ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.…

2 hours ago

2026 ಜೂನ್‌ನಲ್ಲಿ ಭಾರತದಲ್ಲಿ ಸಾಮಾನ್ಯ ಮುಂಗಾರು ಮುನ್ಸೂಚನೆ | ಪಶ್ಚಿಮ ಘಟ್ಟ-ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ

2026ರ ಮುಂಗಾರು ಸಾಮಾನ್ಯವಾಗಿ ಆರಂಭವಾದರೂ ನಂತರ ಮಳೆಯ ಕೊರತೆ ಸಂಭವಿಸಬಹುದು. ಎಲ್‌ನಿನೋ ಪರಿಣಾಮದಿಂದ…

18 hours ago

ಹವಾಮಾನ ವರದಿ | 12-04-2026 | ಬಿಸಿಲಿನ ತಾಪ ಹೆಚ್ಚಳದ ನಡುವೆ ಮಳೆಯ ನಿರೀಕ್ಷೆ| ಎಪ್ರಿಲ್ 15 ನಂತರ ಗುಡುಗು ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಇನ್ನೂ ಕೆಲ ದಿನಗಳು ಬಿಸಿಲು ತಾಪಮಾನ ಹೆಚ್ಚಾಗಿದ್ದು, ತುಂತುರು ಮಳೆ ಮಾತ್ರ…

18 hours ago