ಗುಜ್ಜೆ ಕಬಾಬ್ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಗುಜ್ಜೆ 2 ಕಪ್. ಸ್ವಲ್ಪ ಎಣ್ಣೆ, ನೀರು, ಉಪ್ಪು ಹಾಕಿ ಬೇಯಿಸಿ ಇಡಿ. ದೋಸೆ ಅಕ್ಕಿ 4 ಚಮಚ ನೆನೆ ಹಾಕಿ. ಕೆಂಪು ಮೆಣಸು 3.(5 ನಿಮಿಷ ನೆನೆ ಹಾಕಿ ) ಜಾರ್ ಗೆ ನೆನೆ ಹಾಕಿದ ಕೆಂಪು ಮೆಣಸು , ಜೀರಿಗೆ 1 ಚಮಚ, ಅರಸಿನ ಪುಡಿ 1/2ಚಮಚ , ದೋಸೆ ಅಕ್ಕಿ,ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಪಾತ್ರೆಗೆ ರುಬ್ಬಿದ ಮಿಶ್ರಣ, ಅಕ್ಕಿ ಹುಡಿ 6ಚಮಚ, ಕಾರ್ನ್ ಫ್ಲೋರ್ 3 ಚಮಚ, ಮೈದಾ ಹುಡಿ 1 ಚಮಚ ಉಪ್ಪು ರುಚಿಗೆ ತಕ್ಕಷ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1/2 ಚಮಚ, ಗರಂ ಮಸಾಲ 1 ಚಮಚ, ನಿಂಬೆ ರಸ 1ಚಮಚ, ಮೆಣಸಿನ ಪುಡಿ 1/2 ಚಮಚ, ಬೇಯಿಸಿದ ಗುಜ್ಜೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಬಿಸಿ ಬಿಸಿಯಾದ ಗುಜ್ಜೆ ಕಬಾಬ್ ರೆಡಿ. ಇದನ್ನು ಈರುಳ್ಳಿ ಜೊತೆ ಸವಿಯಿರಿ
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel