ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್ ಮಾಡಿ ಕುಕ್ಕರ್ ಗೆ ಹಾಕಿ ಇದಕ್ಕೆ ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ ಹಾಕಿ ನೀರು ಸೇರಿಸಿ ಬೇಯಿಸಿ. ನಂತರ ಈರುಳ್ಳಿ 1 ಚಿಕ್ಕ ದಾಗಿ ಕಟ್ ಮಾಡಿ. ಕೊತ್ತಂಬರಿ ಸೊಪ್ಪು, ಗರಂ ಮಸಾಲ, ಡ್ರೈ ಮ್ಯಾಂಗೋ ಪೌಡರ್ , ಈರುಳ್ಳಿ ಪುಡಿ, ಕಿಚನ್ ಕಿಂಗ್ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿಪುಡಿ(ಬ್ರೇಡ್ ಪುಡಿ), ನಿಂಬೆ ರಸ 1 ಚಮಚ, ಹಸಿಮೆಣಸಿನ ಕಾಯಿ ಚಿಕ್ಕದಾಗಿ ಕಟ್ ಮಾಡಿ.
ಮಾಡುವ ವಿಧಾನ: ಒಂದು ಪಾತ್ರೆಗೆ ಈರುಳ್ಳಿ, ಗುಜ್ಜೆ ಪುಡಿ ಮಾಡಿ ಹಾಕಿ ಇದಕ್ಕೆ 1 ಬ್ರೇಡ್ ಕಟ್ ಮಾಡಿ ಹಾಕಿ ನಿಂಬೆ ರಸ , ಗರಂ ಮಸಾಲ 1/2 ಚಮಚ, ಡ್ರೈ ಮ್ಯಾಂಗೋ ಪೌಡರ್ 1/4 ಚಮಚ , ಈರುಳ್ಳಿ ಪುಡಿ 1/2 ಚಮಚ , ಜೀರಿಗೆ ಪುಡಿ 1/4 ಚಮಚ, ಕೊತ್ತಂಬರಿ ಪುಡಿ 1/4 ಚಮಚ, ಕಿಚನ್ ಕಿಂಗ್ ಮಸಾಲ 1 ಚಮಚ ,ಹಸಿಮೆಣಸಿನ ಕಾಯಿ 1 ಚಮಚ ಕೊತ್ತಂಬರಿ ಸೊಪ್ಪು ಚಿಕ್ಕ ದಾಗಿ ಕಟ್ ಮಾಡಿ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ . ನಂತರ ಸ್ವಲ್ಪ ರೋಲ್ ಮಾಡಿ ಬ್ರೇಡ್ ಪುಡಿ ಯಲ್ಲಿ ಹೊರಳಿಸಿ ಇಡಿ. ತವಾ ಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಇದನ್ನು ಸ್ವಲ್ಪ ಕೆಂಪು ಆಗುವ ತನಕ ಫ್ರೈ ಮಾಡಿ ತೆಗೆಯಿರಿ ಈವಾಗ ಬಿಸಿ ಬಿಸಿಯಾದ ಗುಜ್ಜೆ ರೋಲ್ ರೆಡಿ ಜೋರ್ ಮಳೆ ಬರುವಾಗ ಬಿಸಿ ಬಿಸಿ ಕಾಫಿ ಟೀ ಜೊತೆಗೆ ಸೂಪರ್ ರುಚಿ.