ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್

March 21, 2026
5:00 PM
ಎಳೆಯ ಹಲಸಿನ ಕಾಯಿಯಿಂದ ರುಚಿಕರ ಕ್ರಿಸ್ಪಿ ರೋಲ್ ತಯಾರಿಸಬಹುದು. ಟೀ ಟೈಮ್‌ಗೆ ಇದು ಸುಲಭ ಮತ್ತು ಆರೋಗ್ಯಕರ ಸ್ನ್ಯಾಕ್ ಆಗಿದೆ.

ಎಳೆಯ ಹಲಸಿನ ಕಾಯಿ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜೊತೆಗೆ ವಿವಿಧ ರುಚಿಕರ ಸ್ನ್ಯಾಕ್‌ಗಳನ್ನು ತಯಾರಿಸಲು ಸಹ ಸೂಕ್ತವಾಗಿದೆ. ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಎಳೆಯ ಹಲಸಿನ ಕಾಯಿ ರೋಲ್ ಸಾಯಂಕಾಲದ ಟೀ ಟೈಮ್‌ಗೆ ಅಥವಾ ಮಕ್ಕಳಿಗೆ ವಿಶೇಷ ಸ್ನ್ಯಾಕ್ ಆಗಿ ಸಿದ್ಧಪಡಿಸಬಹುದು.

ಬೇಕಾಗುವ ಸಾಮಗ್ರಿಗಳು

  • ಎಳೆಯ ಹಲಸಿನ ಕಾಯಿ – ಕಟ್ ಮಾಡಿದದ್ದು
  • ಕಾರ್ನ್ – 1/4 ಕಪ್
  • ಬಟಾಣಿ – 4 ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ನೀರು – ಬೇಯಿಸಲು

ಒಗ್ಗರಣೆಗೆ:

  • ಎಣ್ಣೆ – 2 ಚಮಚ
  • ಸಾಸಿವೆ – 1/4 ಚಮಚ
  • ಜೀರಿಗೆ – 1 ಚಮಚ
  • ಓಂ ಕಾಳು – ಸ್ವಲ್ಪ
  • ಕರಿಬೇವಿನ ಸೊಪ್ಪು – ಸ್ವಲ್ಪ

ಮಸಾಲೆ:

  • ಈರುಳ್ಳಿ – ಚಿಕ್ಕದಾಗಿ ಕಟ್ ಮಾಡಿದದ್ದು
  • ಗರಂ ಮಸಾಲ – 1 ಚಮಚ
  • ಜೀರಿಗೆ ಪುಡಿ – 1 ಚಮಚ
  • ಕೊತ್ತಂಬರಿ ಪುಡಿ – 1/2 ಚಮಚ
  • ಸಮೋಸ ಪೌಡರ್ – 1/2 ಚಮಚ
  • ಉಪ್ಪು – ಸ್ವಲ್ಪ

ಇನ್ನಷ್ಟು:

  • ಸಮೋಸ ಹಾಳೆ – ಅಗತ್ಯದಷ್ಟು
  • ಕರಿಯಲು ಎಣ್ಣೆ

ಮಾಡುವ ವಿಧಾನ : ಮೊದಲು ಎಳೆಯ ಹಲಸಿನ ಕಾಯಿ, ಕಾರ್ನ್, ಬಟಾಣಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ. ಬಳಿಕ ಅದನ್ನು ಸ್ವಲ್ಪ ಮ್ಯಾಶ್ ಮಾಡಿ ಇಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಜೀರಿಗೆ, ಓಂ ಕಾಳು ಹಾಗೂ ಕರಿಬೇವಿನ ಸೊಪ್ಪು ಹಾಕಿ ಚಟಪಟಾಯಿಸಿ. ನಂತರ ಈರುಳ್ಳಿ ಹಾಕಿ ಸ್ವಲ್ಪ ಬ್ರೌನ್ ಆಗುವವರೆಗೆ ಫ್ರೈ ಮಾಡಿ.  ಈಗ ಗರಂ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಸಮೋಸ ಪೌಡರ್ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಮ್ಯಾಶ್ ಮಾಡಿದ ಹಲಸಿನ ಕಾಯಿ ಮಿಶ್ರಣವನ್ನು ಸೇರಿಸಿ 2 ನಿಮಿಷ ಫ್ರೈ ಮಾಡಿ. ಬೇಯಿಸಿದ ನಂತರ ಸಮೋಸ ಹಾಳೆಯ ಮೇಲೆ ಹಾಕಿ ರೋಲ್ ಮಾಡಿ. ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆದರೆ ಬಿಸಿ ಬಿಸಿ ಎಳೆಯ ಹಲಸಿನ ಕಾಯಿ ರೋಲ್ ಸಿದ್ಧ!

Tender jackfruit rolls are a crispy and tasty evening snack made by stuffing mashed jackfruit with spices and frying it in samosa sheets. This simple homemade recipe is nutritious and perfect for tea-time serving.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಭಾರತದ ಕೃಷಿ ರಫ್ತಿನಲ್ಲಿ ದೊಡ್ಡ ಬದಲಾವಣೆ – ಎಮ್ಮೆ ಮಾಂಸ ರಫ್ತು 5 ಬಿಲಿಯನ್ ಡಾಲರ್ ಗುರಿಯತ್ತ..!
August 20, 2026
9:46 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಭವಿಷ್ಯ ಈ ತೀರ್ಪಿನಲ್ಲಿದೆಯೇ..? ಗುಟ್ಕಾ ಬೇರೆ, ಅಡಿಕೆ ಬೇರೆ ? ಸುಪ್ರೀಂ ಕೋರ್ಟ್ ಮುಂದೆ ಇರುವ ದೊಡ್ಡ ಪ್ರಶ್ನೆಗಳು..
August 20, 2026
3:57 PM
by: ದ ರೂರಲ್ ಮಿರರ್.ಕಾಂ
ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ
August 20, 2026
3:06 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ
August 20, 2026
1:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror