ಹೊಸರುಚಿ| ಗುಜ್ಜೆ ರೋಲ್

April 16, 2025
8:00 AM

ಗುಜ್ಜೆ ರೋಲ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಮೊದಲಿಗೆ ಗುಜ್ಜೆ ಕಟ್ ಮಾಡಿ ಕುಕ್ಕರ್ ಗೆ ಹಾಕಿ ಇದಕ್ಕೆ ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಸ್ವಲ್ಪ ಹಾಕಿ ನೀರು ಸೇರಿಸಿ ಬೇಯಿಸಿ. ನಂತರ ಈರುಳ್ಳಿ 1 ಚಿಕ್ಕ ದಾಗಿ ಕಟ್ ಮಾಡಿ. ಕೊತ್ತಂಬರಿ ಸೊಪ್ಪು, ಗರಂ ಮಸಾಲ, ಡ್ರೈ ಮ್ಯಾಂಗೋ ಪೌಡರ್ , ಈರುಳ್ಳಿ ಪುಡಿ, ಕಿಚನ್ ಕಿಂಗ್ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿಪುಡಿ(ಬ್ರೇಡ್ ಪುಡಿ), ನಿಂಬೆ ರಸ 1 ಚಮಚ, ಹಸಿಮೆಣಸಿನ ಕಾಯಿ ಚಿಕ್ಕದಾಗಿ ಕಟ್ ಮಾಡಿ.

ಮಾಡುವ ವಿಧಾನ: ಒಂದು ಪಾತ್ರೆಗೆ ಈರುಳ್ಳಿ, ಗುಜ್ಜೆ ಪುಡಿ ಮಾಡಿ ಹಾಕಿ ಇದಕ್ಕೆ 1 ಬ್ರೇಡ್ ಕಟ್ ಮಾಡಿ ಹಾಕಿ ನಿಂಬೆ ರಸ , ಗರಂ ಮಸಾಲ 1/2 ಚಮಚ, ಡ್ರೈ ಮ್ಯಾಂಗೋ ಪೌಡರ್ 1/4 ಚಮಚ , ಈರುಳ್ಳಿ ಪುಡಿ 1/2 ಚಮಚ , ಜೀರಿಗೆ ಪುಡಿ 1/4 ಚಮಚ, ಕೊತ್ತಂಬರಿ ಪುಡಿ 1/4 ಚಮಚ, ಕಿಚನ್ ಕಿಂಗ್ ಮಸಾಲ 1 ಚಮಚ ,ಹಸಿಮೆಣಸಿನ ಕಾಯಿ 1 ಚಮಚ ಕೊತ್ತಂಬರಿ ಸೊಪ್ಪು ಚಿಕ್ಕ ದಾಗಿ ಕಟ್ ಮಾಡಿ ಹಾಕಿ. ನಂತರ ಚೆನ್ನಾಗಿ ಮಿಕ್ಸ್ ಮಾಡಿ . ನಂತರ ಸ್ವಲ್ಪ ರೋಲ್ ಮಾಡಿ ಬ್ರೇಡ್ ಪುಡಿ ಯಲ್ಲಿ ಹೊರಳಿಸಿ ಇಡಿ. ತವಾ ಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಇದನ್ನು ಸ್ವಲ್ಪ ಕೆಂಪು ಆಗುವ ತನಕ ಫ್ರೈ ಮಾಡಿ ತೆಗೆಯಿರಿ ಈವಾಗ ಬಿಸಿ ಬಿಸಿಯಾದ ಗುಜ್ಜೆ ರೋಲ್ ರೆಡಿ ಜೋರ್ ಮಳೆ ಬರುವಾಗ ಬಿಸಿ ಬಿಸಿ ಕಾಫಿ ಟೀ ಜೊತೆಗೆ ಸೂಪರ್ ರುಚಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror