ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ

February 28, 2026
7:00 AM

ಗ್ರಾಮೀಣ ಅಡುಗೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಎಳೆಯ ಹಲಸಿನ ಕಾಯಿ (ಹಲಸಿನ ಕಾಯಿ ಸುಕ್ಕ) ಆರೋಗ್ಯಕರವಾಗಿಯೂ, ರುಚಿಕರವಾಗಿಯೂ ಇರುವ ಸಾಂಪ್ರದಾಯಿಕ ತಿನಿಸಾಗಿದೆ. ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಮನೆಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಈ ಪದಾರ್ಥ ಅನ್ನದ ಜೊತೆ ಅತ್ಯುತ್ತಮವಾಗಿ ಹೊಂದುತ್ತದೆ. ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ರೆಸಿಪಿ ಇದೀಗ ಮನೆಮನೆಗಳಲ್ಲಿ ಮತ್ತೆ ಜನಪ್ರಿಯವಾಗುತ್ತಿದೆ. ಇಲ್ಲಿ ಮನೆಯಲ್ಲೇ ಸರಳವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ ಮಾಡುವ ವಿಧಾನ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು

  • ಎಳೆಯ ಹಲಸಿನ ಕಾಯಿ – ಚಿಕ್ಕದಾಗಿ ಕತ್ತರಿಸಿದದ್ದು

  • ಉಪ್ಪು – ಅಗತ್ಯಕ್ಕೆ ತಕ್ಕಷ್ಟು

  • ನೀರು – ಬೇಯಿಸಲು

ಮಸಾಲೆಗೆ:

  • ಶೇಂಗಾ – 3 ಚಮಚ

  • ಜೀರಿಗೆ – 1 ಚಮಚ

  • ಒಣ ಕೆಂಪು ಮೆಣಸು – 3

  • ಹಿಂಗು – ಸ್ವಲ್ಪ

  • ಕೊತ್ತಂಬರಿ ಬೀಜ – 1 ಚಮಚ

  • ಕಾಯಿತುರಿ – ಸ್ವಲ್ಪ

ಮಸಾಲೆ ತಯಾರಿಸುವ ವಿಧಾನ :  ಬಾಣಲೆಗೆ ಶೇಂಗಾ, ಜೀರಿಗೆ, ಕೆಂಪು ಮೆಣಸು, ಹಿಂಗು, ಕೊತ್ತಂಬರಿ ಬೀಜ ಹಾಗೂ ಕಾಯಿತುರಿ ಹಾಕಿ ಸಣ್ಣ ಉರಿಯಲ್ಲಿ ಫ್ರೈ ಮಾಡಬೇಕು. ನಂತರ ತಣ್ಣಗಾದ ಮೇಲೆ ತರಿ ತರಿಯಾಗಿ ರುಬ್ಬಿಕೊಳ್ಳಬೇಕು.

ಮಾಡುವ ವಿಧಾನ:

  1. ಕತ್ತರಿಸಿದ ಎಳೆಯ ಹಲಸಿನ ಕಾಯಿಗೆ ನೀರು ಮತ್ತು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ.

  2. ಬಾಣಲೆಗೆ ಎಣ್ಣೆ ಹಾಕಿ ಬಿಸಿ ಆದ ನಂತರ ಸಾಸಿವೆ, ಜೀರಿಗೆ, ಒಣ ಮೆಣಸು ಹಾಗೂ ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿಕೊಳ್ಳಿ.

  3. ಇದಕ್ಕೆ ಬೇಯಿಸಿದ ಹಲಸಿನ ಕಾಯಿ ಸೇರಿಸಿ ಚೆನ್ನಾಗಿ ಕಲಸಿ.

  4. ಸ್ವಲ್ಪ ಅರಿಶಿನ ಪುಡಿ ಸೇರಿಸಿ.

  5. ಬಳಿಕ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

  6. ಮಧ್ಯಮ ಉರಿಯಲ್ಲಿ 5–7 ನಿಮಿಷ ಹುರಿದರೆ ರುಚಿಯಾದ ಹಲಸಿನ ಕಾಯಿ ಸುಕ್ಕ ಸಿದ್ಧವಾಗುತ್ತದೆ.

ಎಳೆಯ ಹಲಸಿನ ಕಾಯಿ ನಾರಿನಾಂಶದಲ್ಲಿ ಸಮೃದ್ಧವಾಗಿದ್ದು ಜೀರ್ಣಕ್ರಿಯೆಗೆ ಸಹಕಾರಿ. ಗ್ರಾಮೀಣ ಆಹಾರ ಪದ್ಧತಿಯಲ್ಲಿ ಇದು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Tender Jackfruit Sukka is a traditional Karnataka-style rural dish made using young jackfruit, roasted spices, and coconut. This easy homemade recipe is nutritious, flavorful, and pairs perfectly with rice and sambar.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದಿವ್ಯ ಮಹೇಶ್

ದಿವ್ಯಾ ಮಹೇಶ್ ಅವರು ಗೃಹಿಣಿ. ಅಡುಗೆಯಲ್ಲಿ ಹೊಸರುಚಿ ಅವರ ಆಸಕ್ತಿಯ ಕ್ಷೇತ್ರ. ಸೋಶಿಯಲ್‌ ಮೀಡಿಯಾಗಳಲ್ಲಿ ಹೊಸರುಚಿ ಅಡುಗೆಯ ಮೂಲಕ ಗಮನ ಸೆಳೆದವರು. ಈಗಾಗಲೇ 700 ಕ್ಕೂ ಅಧಿಕ ರಿಸಿಪಿಗಳ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ನೀಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಸಂಗೀತ ಆಲಿಸುವುದು, ಭರತನಾಟ್ಯ, ಓದುವುದು ಇತ್ಯಾದಿ ಅವರ ಆಸಕ್ತಿಯ ವಿಷಯ.

ಇದನ್ನೂ ಓದಿ

ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಕಳಪೆ ಬೀಜ ಬಿಟ್ಟು ಸಂಶೋಧಿತ ಬೀಜ ಬಳಸಿ | ಮಣ್ಣಿನ ಆರೋಗ್ಯ ಕಾಪಾಡಿ | ರೈತರಿಗೆ ತೋಟಗಾರಿಕಾ ವಿವಿ ಕುಲಪತಿ ಸಲಹೆ
February 28, 2026
6:53 AM
by: ಮಿರರ್‌ ಡೆಸ್ಕ್
ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್
ಕೃಷಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಬದಲಾವಣೆ ತರುತ್ತಿದೆ
February 28, 2026
6:43 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror