ತೆಂಕುತಿಟ್ಟು ಯಕ್ಷಗಾನದ ಹಿರಿಯ ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ (76) ಇಂದು ನಿಧನರಾದರು. ಇವರು ತೆಂಕುತಿಟ್ಟಿನ ಹಿರಿಯ ಪರಂಪರೆಯ ಸಾಕ್ಷಿ ಪ್ರಜ್ಞೆ. ಭಾಗವತಿಕೆಯಲ್ಲಿ ಸ್ವ-ಶೈಲಿಯ ಛಾಪು. ಬೆರಗಿನ ಶಾರೀರ. ಅನುಸರಿಸಲಾಗದ, ಅನುಕರಿಸಲಾಗದ ಬಿಗಿ. ಅನುಭವದಿಂದ ಮಾಗಿದ ಬೌದ್ಧಿಕತೆ. ನೂರಾರು ಶಿಷ್ಯರನ್ನು ರೂಪಿಸಿದ ಗುರು.
Advertisement
ಶಾಸ್ತ್ರಿಗಳಿಗೆ ಬದುಕೇ ಯಕ್ಷಗಾನವಾಗಿತ್ತು. ಯಕ್ಷಗಾನವೇ ಬದುಕು. ಹಲವು ಪ್ರಸಂಗಗಳು ಕಂಠಸ್ಥವಾಗಿದ್ದುವು. ರಂಗದ ನಿರ್ದೇಶಕ. ರಂಗಭಾಷೆಯ ಅನುಷ್ಠಾನದತ್ತ ಬಿಗು ನಿಲುವು. ಪೌರಾಣಿಕ ಪ್ರಸಂಗಗಳ ಪದ್ಯಗಳಿಗೆ ಮೋಹಕ ಧ್ವನಿಯ ಸ್ಪರ್ಶ. ವಿವಿಧ ಮೇಳಗಳಲ್ಲಿ ತಿರುಗಾಟ. ಹವ್ಯಾಸಿ ಆಟ-ಕೂಟಗಳಲ್ಲಿ ವ್ಯವಸಾಯ.
Advertisement
ತಿರುಮಲೇಶ್ವರ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನದ ಭಾಗವತಿಕೆಯ ಪರಂಪರೆಯಲ್ಲಿ ತಮ್ಮ ವಿಶಿಷ್ಟ ಅನುಭವದಿಂದ ‘ತೆಂಕಬೈಲು’ ಮಟ್ಟು ಸ್ಥಾಪಿಸಿದ ಹೆಗ್ಗಳಿಕೆ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗೆ ಇವರ ಅನುಭವದ ಕೊಡುಗೆ ಅನನ್ಯ.
ಅಪಾರ ಶಿಷ್ಯವೃಂದವನ್ನು ಹೊಂದಿದ ಶಾಸ್ತ್ರಿಗಳಿಗೆ ಎರಡು ವರುಷದ ಹಿಂದೆ ಪದ್ಯಾಣ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಸಂದರ್ಭದಲ್ಲಿ ಕಿರು ಪುಸ್ತಿಕೆಯೊಂದು ಮುದ್ರಣಗೊಂಡಿತ್ತು. ತಿರುಮಲೇಶ್ವರ ಶಾಸ್ತ್ರಿಯವರ ಪುತ್ರ ಮುರಳಿಕೃಷ್ಣ. ಇವರ ಅಧ್ಯಾಪಕರು. ತಂದೆಯ ಶೈಲಿಯನ್ನು ಮುಂದುವರಿಸುತ್ತಿರುವ ಭಾಗವತ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement