ಮಣ್ಣಿನ ರಚನೆಯಲ್ಲಿ ಗೆದ್ದಲು Cheif Engineer ಆದರೆ,ಎರೆಹುಳು Assistant Engineer ಇದ್ದಂತೆ.Termites are better freinds than Earthworm. ಗೆದ್ದಲು( Termites) ಮನೆಯೊಳಗೆ ಅಪಾಯಕಾರಿ, ಜಮೀನಿನ ಒಳಗೆ ಅತ್ಯಂತ ಪ್ರಯೋಜನಕಾರಿ.
ಗೆದ್ದಲು ಯಾವುದೇ ಕಾರಣಕ್ಕೂ ಹಸಿ ಪದಾರ್ಥ, ಜೀವಂತ ಗಿಡಮರಗಳನ್ನು ತಿನ್ನುವುದಿಲ್ಲ,ಒಣಗಿದ ಪದಾರ್ಥಗಳನ್ನು ಮಾತ್ರ ತಿಂದು ಭೂಮಿಗೆ ಸೇರಿಸುತ್ತದೆ. ಮರಗಿಡಗಳಿಂದ ಉದುರುವ ಎಲೆ,ರಂಬೆ, ಕೊಂಬೆ ಇವುಗಳನ್ನು ಗೆದ್ದಲು ತಿಂದು ಭೂಮಿಗೆ ಸೇರಿಸದೇ ಹೋಗಿದ್ರೆ ಭೂಮಿಯ ಮೇಲೆ ತ್ಯಾಜ್ಯದ ರಾಶಿಗಳ ಬೆಟ್ಟ ಸೃಷ್ಟಿಯಾಗಿರುತ್ತಿತ್ತು. ಜಮೀನಿನಲ್ಲಿ ಗೆದ್ದಲು ಹುಳು,ಹುತ್ತಗಳು ಹೆಚ್ಚಿದಷ್ಟು ಭೂಮಿಯ ಫಲವತ್ತತೆ ಹೆಚ್ಚುತ್ತದೆ,ಅಂತರ್ಜಲ ವೃದ್ಧಿಯಾಗುತ್ತದೆ.
ಗೆದ್ದಲುಗಳು ಹಾವುಗಳನ್ನು ಕಚ್ಚಿ ಸಾಯಿಸುವಷ್ಟು ಶಕ್ತಿಶಾಲಿಯಾಗಿರುತ್ತದೆ. ಹಿಂದೆ ರೈತರು ಜಮೀನು ಖರೀದಿ ಮಾಡುವ ಮುನ್ನ, ಆ ಜಮೀನಿನಲ್ಲಿ ಹಳೆಯ ಬಟ್ಟೆ ಎಸೆದು ಬರುತ್ತಿದ್ದರು,2-3 ದಿನಗಳಲ್ಲಿ ಆ ಬಟ್ಟೆಗೆ ಗೆದ್ದಲು ಮುತ್ತುವ ಪ್ರಮಾಣ ನೋಡಿ ಆ ಜಮೀನಿನ ತಾಕತ್ತು ನಿರ್ಧಾರ ಮಾಡಿಕೊಳ್ಳುತ್ತಿದ್ದರು.
–ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು, ಮೊಬೈಲ್:9342434530
Termites for any reason do not eat raw material, living plants, only dry material and add it to the soil. If the leaves, twigs and branches falling from the trees were not eaten by the termites and added to the earth, there would have been a heap of waste piles on the earth. As the number of termites and termites increases in the farm, the fertility of the land increases and the groundwater level increases.