ಭೀಕರ ಪ್ರಕೃತಿ ವಿಕೋಪ, ಪುಟಿನ್‌ ಮೇಲೆ ಹತ್ಯೆ ಯತ್ನ, ಭಯೋತ್ಪಾದಕರ ಅಟ್ಟಹಾಸ | 2024ರ ಭವಿಷ್ಯವಾಣಿ ನುಡಿದ ಬಾಬಾ ವಂಗಾ…! |

November 5, 2023
9:07 PM

ಭವಿಷ್ಯದಲ್ಲಿ ಏನಾಗುತ್ತೆ ಅನ್ನೋದು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೆಲವೊಂದು ಕಾಲಜ್ಞಾನಿಗಳು ಇಂತಹ ಘಟನೆಗಳು ನಡೆಯುತ್ತವೆ ಎಂದು ಭವಿಷ್ಯ ನುಡಿಯುತ್ತಾರೆ. ಅದರಲ್ಲಿ ಕೆಲವೊಂದು ಘಟನೆಗಳು ಆಗಿವೆ ಕೂಡ. ಇದೀಗ 2024 ಕ್ಕೆ ಭಯಾನಕ ಹವಾಮಾನ ಘಟನೆಗಳು(extreme weather) ಹಾಗೂ ಭಯೋತ್ಪಾದಕ ದಾಳಿಗಳಲ್ಲಿ ಏರಿಕೆಯಾಗಲಿದೆ ಎಂದು ಬಾಬಾ ವಂಗಾ (Baba Vanga) ಅವರು ಭವಿಷ್ಯ ನುಡಿದಿದ್ದಾರೆ.

Advertisement
Advertisement

ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್(Nostradamus) ಎಂದೂ ಕರೆಯಲ್ಪಡುವ ಬಾಬಾ ವಂಗಾ ಅವರು, 9/11 ಭಯೋತ್ಪಾದಕ ದಾಳಿಗಳು, ರಾಜಕುಮಾರಿ ಡಯಾನಾ ಸಾವು, ಚೆರ್ನೋಬಿಲ್ ದುರಂತ ಮತ್ತು ಬ್ರೆಕ್ಸಿಟ್‌ನಂತಹ ಪ್ರಮುಖ ವಿಶ್ವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. 2024 ರಲ್ಲಿ ಅವರು ಏಳು ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಮುಂದಿನ ವರ್ಷ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮೇಲೆ ಸಹ ದೇಶವಾಸಿಯಿಂದ ಹತ್ಯೆಯ ಪ್ರಯತ್ನ ನಡೆಯಬಹುದು. ಯುರೋಪ್‌ನಲ್ಲಿ ಹೆಚ್ಚಿದ ಭಯೋತ್ಪಾದಕ ದಾಳಿಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮುಂದಿನ ವರ್ಷ “ದೊಡ್ಡ ದೇಶ” ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಅಥವಾ ದಾಳಿಗಳನ್ನು ನಡೆಸುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

ಮುಂದಿನ ವರ್ಷ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ. ಹೆಚ್ಚುತ್ತಿರುವ ಸಾಲದ ಮಟ್ಟಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳು ಇದಕ್ಕೆ ಕಾರಣಗಳಾಗಿವೆ ಎಂದು ಬಾಬಾ ವಂಗಾ ಎಚ್ಚರಿಸಿದ್ದಾರೆ. ಮುಂದಿನ ವರ್ಷ ಭಯಾನಕ ಹವಾಮಾನ ಘಟನೆಗಳು ಮತ್ತು ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ. ಸೈಬರ್ ದಾಳಿಗಳು ಹೆಚ್ಚಾಗುತ್ತವೆ. ಸುಧಾರಿತ ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳಂತಹ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತಾರೆ. ಇದು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದಿದ್ದಾರೆ.

2024 ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳು ಬರಲಿವೆ. ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಪ್ರಮುಖ ಪ್ರಗತಿಯಾಗಲಿದೆ ಎಂದು ಭವಿಷ್ಯವಾಣಿಯಲ್ಲಿ ತಿಳಿಸಿದ್ದಾರೆ. 1911 ರಲ್ಲಿ ಜನಿಸಿದ್ದ ಉತ್ತರ ಮ್ಯಾಸಿಡೋನಿಯಾದಲ್ಲಿ ಜನಿಸಿದ್ದರು. ಅವರು 1996 ರಲ್ಲಿ ನಿಧನರಾಗಿದ್ದಾರೆ. ಕುರುಡರಾಗಿದ್ದ ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಅವರ ಮರಣದ ನಂತರ ಬಹಳ ಕಾಲ ನಿಜವಾಯಿತು ಎಂದು ಹೇಳಲಾಗುತ್ತದೆ.

  • ಅಂತರ್ಜಾಲ ಮಾಹಿತಿ

Baba Vanga has predicted that 2024 will see an increase in extreme weather events and terrorist attacks. Baba Vanga, also known as the Nostradamus of the Balkans, predicted major world events such as the 9/11 terrorist attacks, the death of Princess Diana, the Chernobyl disaster and Brexit. In 2024 he has made seven predictions.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ಬದಲಾವಣೆ | ತಾಪಮಾನವು ಬೆಳೆಗಳ ಉತ್ಪಾದಕತೆಯ ಮೇಲೆ ಪರಿಣಾಮ ಸಾಧ್ಯತೆ | ಅಡಿಕೆ ಬೆಳೆಗಾರರೂ ಗಮನಿಸಬೇಕಾದ ಅಂಶ ಇದು |
July 30, 2025
7:35 AM
by: ದ ರೂರಲ್ ಮಿರರ್.ಕಾಂ
ದೈವ ಶಾಪ ದೋಷ | ಗತ ಜನ್ಮದ ಕರ್ಮದ ಪ್ರಭಾವವನ್ನು ಜಯಿಸುವ ಮಾರ್ಗ
July 30, 2025
7:19 AM
by: ದ ರೂರಲ್ ಮಿರರ್.ಕಾಂ
ರಾಜ್ಯದ ವಿವಿಧೆಡೆ ಮಳೆ –  ಬಹುತೇಕ ಜಲಾಶಯಗಳು ಭರ್ತಿ
July 29, 2025
8:46 PM
by: The Rural Mirror ಸುದ್ದಿಜಾಲ
ನಿರಂತರ 170 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ | ವಿಶ್ವ ದಾಖಲೆ ಸಾಧನೆ ಮಾಡಿದ ಮಂಗಳೂರಿನ ರೆಮೋನಾ ಪಿರೇರಾ
July 29, 2025
8:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group