ತಹೀಟಿಯಲ್ಲಿ ಪತ್ತೆಯಾದ ಅಪರೂಪದ, ಪ್ರಾಚೀನ ಹವಳದ ಬಂಡೆ |

January 23, 2022
11:58 AM

ಫ್ರೆಂಚ್ ತಹೀಟಿ ಕರಾವಳಿಯಲ್ಲಿ ಅಪರೂಪದ ಪ್ರಾಚೀನ ಹವಳಗಳು ಪತ್ತೆಯಾಗಿದೆ. ಇದು ಸಮುದ್ರದ ಆಳದಲ್ಲಿ ಕಂಡುಬರುವ ಹವಳಗಳು. ಪ್ರಪಂಚದಾದ್ಯಂತ ಸಾಗರಗಳಲ್ಲಿ ಬೆಳೆಯುವ ಮತ್ತು ಬಂಡೆಗಳನ್ನು ರೂಪಿಸುವ ಸಣ್ಣ ಪ್ರಾಣಿಗಳಿವೆ.  ಆಳವಾದ ದಕ್ಷಿಣ ಪೆಸಿಫಿಕ್‌ನಲ್ಲಿ ಕಂಡುಬರುವ ಹವಳಗಳು ಗುಲಾಬಿಗಳ ಆಕಾರವನ್ನು ಹೊಂದಿದೆ. ಹವಾಮಾನ ಬದಲಾವಣೆ ಮತ್ತು ಮಾನವನ ಚಟುವಟಿಕೆಗಳ ಪರಿಣಾಮದಿಂದ ಇದು ದೂರವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಫ್ರೆಂಚ್ ಪಾಲಿನೇಷ್ಯಾದ ಮೂರಿಯಾದಲ್ಲಿರುವ ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ನ ಸಂಶೋಧಕ ಲ್ಯಾಟಿಟಿಯಾ ಹೆಡೊಯಿನ್ ಅವರು ಹವಳದ ಬಂಡೆಯನ್ನು  ಗುರುತಿಸಿದ್ದಾರೆ. 3೦ ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿರುವ ಈ ಹವಳದ ಬಂಡೆಯು ಬೆಳೆಯಲು ಸುಮಾರು 25 ವರ್ಷಗಳನ್ನು ತೆಗೆದುಕೊಂಡಿರಬಹುದು. ಮಾತ್ರವಲ್ಲ ಗುಲಾಬಿ ಆಕಾರದ ಹವಳಗಳು 2 ಮೀಟರ್‌ಗಿಂತಲೂ ಹೆಚ್ಚು ವ್ಯಾಸವನ್ನು ಹೊಂದಿದೆ. ಇದು ಒಂದು ಕಲಾಕೃತಿಯಂತಿದೆ ಎಂದು ಲ್ಯಾಟಿಟಿಯಾ ಹೆಡೊಯಿನ್ ಹೇಳಿದ್ದಾರೆ.

ಹವಳದ ಬಂಡೆಗಳು ಹವಮಾನ ಬದಲಾವಣೆಗೆ ಹೇಗೆ ಹೆಚ್ಚು ಉಳಿದಿಕೊಂಡಿದೆ ಎಂದು ಈಗ ಅಧ್ಯಯನದ ವಿಷಯವಾಗಿದೆ. ಇದಕ್ಕಾಗಿ ಸಮುದ್ರದ ಜೀವವೈವಿಧ್ಯತೆಯನ್ನು ರಕ್ಷಿಸಲು ಹೆಚ್ಚಿನ ಸಾಗರ ತಳವನ್ನು ಮ್ಯಾಪ್‌ ಮಾಡಬೇಕೆಂದು ಯುನೆಸ್ಕೋದ ಸಾಗರ ನೀತಿಯ ಮುಖ್ಯಸ್ಥ ಜೂಲಿಯನ್ ಬಾರ್ಬಿಯರ್ ಹೇಳಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 30-03-2026 | ಇವತ್ತಿನ ಮಳೆ ಎಲ್ಲಿ…? ಎಷ್ಟು ದಿನ ಇದೆ ಮಳೆ…?
March 30, 2026
12:06 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಹಲವೆಡೆ ಮಳೆ ; ಬೆಂಗಳೂರಿನಲ್ಲಿ ಹಗುರ ಮಳೆ ಸಾಧ್ಯತೆ
March 30, 2026
7:52 AM
by: ದ ರೂರಲ್ ಮಿರರ್.ಕಾಂ
ಮಂಗಳವಾರದಿಂದ ರಾಜ್ಯದಲ್ಲಿ ಹೋಟೆಲ್‌ಗಳಿಗೆ ಹೆಚ್ಚಿನ ವಾಣಿಜ್ಯ ಅಡುಗೆ ಸಿಲಿಂಡರ್‌ಗಳ ಸರಬರಾಜು
March 30, 2026
7:44 AM
by: ದ ರೂರಲ್ ಮಿರರ್.ಕಾಂ
ದೇಶದಲ್ಲಿ ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ..! ವದಂತಿಗಳಿಗೆ ಬಲಿಯಾಗಬೇಡಿ – ಕೇಂದ್ರದ ಸ್ಪಷ್ಟನೆ
March 30, 2026
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror