ಫ್ರೆಂಚ್ ತಹೀಟಿ ಕರಾವಳಿಯಲ್ಲಿ ಅಪರೂಪದ ಪ್ರಾಚೀನ ಹವಳಗಳು ಪತ್ತೆಯಾಗಿದೆ. ಇದು ಸಮುದ್ರದ ಆಳದಲ್ಲಿ ಕಂಡುಬರುವ ಹವಳಗಳು. ಪ್ರಪಂಚದಾದ್ಯಂತ ಸಾಗರಗಳಲ್ಲಿ ಬೆಳೆಯುವ ಮತ್ತು ಬಂಡೆಗಳನ್ನು ರೂಪಿಸುವ ಸಣ್ಣ ಪ್ರಾಣಿಗಳಿವೆ. ಆಳವಾದ ದಕ್ಷಿಣ ಪೆಸಿಫಿಕ್‌ನಲ್ಲಿ ಕಂಡುಬರುವ ಹವಳಗಳು ಗುಲಾಬಿಗಳ ಆಕಾರವನ್ನು ಹೊಂದಿದೆ. ಹವಾಮಾನ ಬದಲಾವಣೆ ಮತ್ತು ಮಾನವನ ಚಟುವಟಿಕೆಗಳ ಪರಿಣಾಮದಿಂದ ಇದು ದೂರವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಫ್ರೆಂಚ್ ಪಾಲಿನೇಷ್ಯಾದ ಮೂರಿಯಾದಲ್ಲಿರುವ ಫ್ರೆಂಚ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ ನ ಸಂಶೋಧಕ ಲ್ಯಾಟಿಟಿಯಾ ಹೆಡೊಯಿನ್ ಅವರು ಹವಳದ ಬಂಡೆಯನ್ನು ಗುರುತಿಸಿದ್ದಾರೆ. 3೦ ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿರುವ ಈ ಹವಳದ ಬಂಡೆಯು ಬೆಳೆಯಲು ಸುಮಾರು 25 ವರ್ಷಗಳನ್ನು ತೆಗೆದುಕೊಂಡಿರಬಹುದು. ಮಾತ್ರವಲ್ಲ ಗುಲಾಬಿ ಆಕಾರದ ಹವಳಗಳು 2 ಮೀಟರ್‌ಗಿಂತಲೂ ಹೆಚ್ಚು ವ್ಯಾಸವನ್ನು ಹೊಂದಿದೆ. ಇದು ಒಂದು ಕಲಾಕೃತಿಯಂತಿದೆ ಎಂದು ಲ್ಯಾಟಿಟಿಯಾ ಹೆಡೊಯಿನ್ ಹೇಳಿದ್ದಾರೆ.
ಹವಳದ ಬಂಡೆಗಳು ಹವಮಾನ ಬದಲಾವಣೆಗೆ ಹೇಗೆ ಹೆಚ್ಚು ಉಳಿದಿಕೊಂಡಿದೆ ಎಂದು ಈಗ ಅಧ್ಯಯನದ ವಿಷಯವಾಗಿದೆ. ಇದಕ್ಕಾಗಿ ಸಮುದ್ರದ ಜೀವವೈವಿಧ್ಯತೆಯನ್ನು ರಕ್ಷಿಸಲು ಹೆಚ್ಚಿನ ಸಾಗರ ತಳವನ್ನು ಮ್ಯಾಪ್ ಮಾಡಬೇಕೆಂದು ಯುನೆಸ್ಕೋದ ಸಾಗರ ನೀತಿಯ ಮುಖ್ಯಸ್ಥ ಜೂಲಿಯನ್ ಬಾರ್ಬಿಯರ್ ಹೇಳಿದ್ದಾರೆ.
ಒಂದು ಔಷಧವು ಮಾರುಕಟ್ಟೆಗಿಳಿಯಲು ಹಲವು ಪರೀಕ್ಷೆಗೆ ಒಡ್ಡಿಕೊಂಡು, ಸರಕಾರದಿಂದ ಮಾನ್ಯತೆ ಪಡೆದಾಗ ಮಾತ್ರ…
ನಿಮ್ಮ ಮನೆಯು ಕೇವಲ ಒಂದು ಇಟ್ಟಿಗೆಯ ಗೋಡೆಗಳ ಸಮೂಹವಲ್ಲ; ಇದು ನಿಮ್ಮ ಜೀವನದ…
ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾದಿಂದ ಸ್ಪೇನ್, ಫ್ರಾನ್ಸ್ ಮತ್ತು ಸೈಬೀರಿಯಾದವರೆಗೆ ಭೀಕರ ಮಳೆ,…
ದೇಶದ ಕೃಷಿ ಹಾಗೂ ಪೂರಕ ವಲಯಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸಚಿವ ಸಂಪುಟ…
ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿದ್ದ ಸುಮಾರು 43 ಸಾವಿರ ಕೋಟಿ ರೂಪಾಯಿ ವೆಚ್ಚದ ರೈಲ್ವೆ…
ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಮಳೆಯ…