ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

April 28, 2024
9:26 PM

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ ಹದಿನೈದೋ ವರ್ಷದ ನಂತರ ಹಾಕಿದ ಬಂಡವಾಳಕ್ಕೆ ಲಕ್ಷ ಲಕ್ಷ ಹಣ ವಾಪಸು ಕೊಡುವ ಬರವಸೆ ನೀಡಿತ್ತು‌. ಆದರೆ ಹತ್ತು ಹದಿನೈದು ವರ್ಷಗಳಿಗೆ ಅದೆಂಥದೇ ಸ್ವರ್ಗ ಸದೃಶ ಭೂಮಿಯಲ್ಲಿ ಅದೆಷ್ಟೇ ಗೊಬ್ಬರ ನೀರು ಆರೈಕೆ ಮಾಡಿದರೂ ನೆಟ್ಟ ಸಾಗವಾನಿ ಮೂರಿಂಚಿಗಿಂತ ಹೆಚ್ಚಿನ ವ್ಯಾಸ ಕ್ಕೆ ಬೆಳೆಯೋಲ್ಲ.

Advertisement

ಮಹಾಗನಿ, ಶ್ರೀಗಂಧ ಮುಂತಾದ ಮರ ಆಗುವ ಜಾತಿಯ ಸಸ್ಯಗಳು ತಮ್ಮ ಒಳಗಿನ ಕೆಂಪು ತೆರಳು ಬೆಳೆಯದೇ ಗಟ್ಟಿ ಯಾಗಿ ಸುಗಂಧ ಭರಿತವೋ, ನಾಟದ ಉಪಯೋಗಕ್ಕೋ ಬರದು. ಕೆಲವೊಮ್ಮೆ ಹೊರಗಿನಿಂದ ಮರ ಬೆಳೆದರೂ ಒಳಗಿನ ತಿರಳು ಬೆಳೆದಿರದು. ಸುಗಂಧ ಉಪಯೋಗಕ್ಕೆ ಬಳಸುವ ಶ್ರೀಗಂಧ, ಚಂದನ, ನಾಟದ ಉಪಯೋಗಕ್ಕೆ ಬಳಸುವ ತೇಗ ಮಹಾಗನಿ ಹೆಬ್ಬೇವು ಕನಿಷ್ಠ ನಲವತ್ತು ಐವತ್ತು ವರ್ಷಗಳ ಕಾಲ ನೈಸರ್ಗಿಕವಾಗಿ ಬೆಳೆಯಲೇ ಬೇಕು.ಸಸಿ ಮರ ನೈಸರ್ಗಿಕವಾಗಿ ಹಂತ ಹಂತವಾಗಿ ಬೆಳೆಯಲೇ ಬೇಕು…. ದಿಡೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣವಾಗುತ್ತವೆ.

ಮಲೆನಾಡಿನಲ್ಲಿ ಕೃಷಿಕರೊಬ್ಬರು ಅತ್ಯಂತ ವ್ಯವಸ್ಥಿತವಾಗಿ ಬೆಳೆದ ಸಾಗುವಾನಿ‌ ತೋಟದ ದೃಶ್ಯಾವಳಿಯಿದೆ. ಎಷ್ಟೇ ಆರೈಕೆ ಮಾಡಿದರೆ ನಮ್ಮ ‌ಮಲೆನಾಡಿನಲ್ಲಿ “ಹತ್ತು ” ವರ್ಷಗಳಿಗೆ ಇಷ್ಟೇ ಬೆಳೆಯಲು ಸಾಧ್ಯ. ಕೆಲವರು ಎರಡು ಮೂರು ವರ್ಷಗಳಿಗೇ ಅಡಿಕೆ ಸಸಿ ಫಸಲು ಬಿಡುತ್ತದೆ ಎನ್ನುತ್ತಾರೆ. ಹೀಗೆ ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ.

ನಮ್ಮ ಮಲೆನಾಡಿನಲ್ಲಿ ಅಡಿಕೆ ನಿಜ ಫಸಲು ಪಡೆಯಲು ಕನಿಷ್ಠ ಹನ್ನೆರಡು ವರ್ಷ ಬೇಕೇ ಬೇಕು. ತಡವಾಗಿ ಮಲೆನಾಡಿನಲ್ಲಿ ಅಡಿಕೆ ಫಸಲು ನೀಡು ವುದರಿಂದ ಮಲೆನಾಡಿನಲ್ಲಿ ಅಡಿಕೆ ಮರದ ಜೀವಿತಾವಧಿ ಹೆಚ್ಚು.ನಮ್ಮ ಹಿರಿಯರ ಪ್ರಕಾರ ಮಲೆನಾಡಿನಲ್ಲಿ ಒಂದು ಅಡಿಕೆ ಮರ ಕನಿಷ್ಠ ಅರವತ್ತು ವರ್ಷ ಫಸಲು ನೀಡುತ್ತದೆ. ‌ಬಯಲು ಸೀಮೆಯಲ್ಲಿ ಬೇಗ ಫಸಲು ನೀಡಿ ಬೇಗ ಫಸಲು ಕುಂಠಿತವಾಗುತ್ತದೆ.

ಬರಹ :
ಪ್ರಬಂಧ ಅಂಬುತೀರ್ಥ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಬೆಳಗಾವಿಯಲ್ಲಿ 3 ದಿನಗಳ ಮಾವು, ಜೇನು ಮೇಳ | ರೈತರಿಂದ ಪ್ರದರ್ಶನ, ಗ್ರಾಹಕರಿಗೆ ನೇರ ಮಾರಾಟ
April 26, 2025
9:54 PM
by: The Rural Mirror ಸುದ್ದಿಜಾಲ
ದೇಶಾದ್ಯಂತ 47 ಸ್ಥಳಗಳಲ್ಲಿ ಉದ್ಯೋಗ ಮೇಳ | 51000 ನವ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಣೆ
April 26, 2025
9:12 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 26-04-2025 | ಸಂಜೆ ಗುಡುಗು ಸಹಿತ ಮಳೆ ಸಾಧ್ಯತೆ |
April 26, 2025
1:58 PM
by: ಸಾಯಿಶೇಖರ್ ಕರಿಕಳ
ಚಿಕ್ಕಬಳ್ಳಾಪುರ ಜಿಲ್ಲೆ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 2863 ಎಕರೆ ಭೂಮಿ
April 26, 2025
9:21 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group