ವಯನಾಡು ದುರಂತದ ಬೆನ್ನಿಗೇ 6 ರಾಜ್ಯಗಳ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ

August 3, 2024
12:23 PM

ಹಲವು ವರ್ಷಗಳಿಂದ ಪಶ್ಚಿಮ ಘಟ್ಟವನ್ನು  ಆಧುನಿಕರಣದಿಂದ ಅಥವಾ ಮಾನವ ಹಸ್ತಕ್ಷೇಪದಿಂದ ಉಳಿಸಿ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಬಂದ ಯಾವುದೇ ಸರ್ಕಾರಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಇದೀಗ ಮೇಲಿಂದ ಮೇಲೆ ರಣ ಭೀಕರ ದುರಂತಗಳು ನಡೆದ ಮೇಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.

Advertisement
Advertisement

ಕೇರಳ (Kerala), ಕರ್ನಾಟಕ (Karnataka) ಸೇರಿ ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳನ್ನ  ಸೂಕ್ಷ್ಮ ಪ್ರದೇಶ (Eco Zone) ಅಂತ ಘೋಷಿಸಿದ್ದು ಕರಡು ಅಧಿಸೂಚನೆಯನ್ನೂ ಹೊರಡಿಸಿದೆ. ಕರ್ನಾಟಕದ ಘಟ್ಟಪ್ರದೇಶಗಳಲ್ಲಿರೋ ಅಕ್ರಮ ಹೋಂ ಸ್ಟೇ, ರೆಸಾರ್ಟ್‌ಗಳ ತೆರವಿಗೂ ಸರ್ಕಾರ ಮುಂದಾಗಿದೆ. ಈ ಮಧ್ಯೆ ಉತ್ತರಭಾರತದಲ್ಲೂ ಪರ್ವತಶ್ರೇಣಿಗಳು ಬಾಯ್ಬಿಡೋಕೆ ಶುರು ಮಾಡಿವೆ.

ಪಶ್ಚಿಮಘಟ್ಟ ಉಳಿವಿಗೆ ಅಧಿಸೂಚನೆ : ಕೇರಳದ 9,993 ಚದರ ಕಿ.ಮೀ ಪಶ್ಚಿಮಘಟ್ಟ ಪ್ರದೇಶ, ಕರ್ನಾಟಕ, ಗೋವಾ ಪಶ್ಚಿಮ ಘಟ್ಟ ಪ್ರದೇಶಗಳು, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ಪಶ್ಚಿಮಘಟ್ಟಗಳು ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳು ಪರಿಸರ ಸೂಕ್ಷ್ಮ ಪ್ರದೇಶ ಅಂತ ಕೇಂದ್ರ ಸರ್ಕಾರ ಗುರುತಿಸಿದೆ. ಒಟ್ಟು 56 ಸಾವಿರದ 825 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಅಂತ ಕರಡು ಅಧಿಸೂಚನೆ ಹೊರಡಿಸಿದೆ ಕೇಂದ್ರ ಸರ್ಕಾರ, ಮುಂದಿನ 60 ದಿನದಲ್ಲಿ ತಕರಾರು-ಸಲಹೆಗಳಿದ್ದರೆ ನೀಡಲು ಸೂಚನೆ ಕೊಡಲು ಸಮಯ ಕೊಟ್ಟಿದೆ.

ಪಶ್ಚಿಮಘಟ್ಟಗಳನ್ನ ಪರಿಸರ ಸೂಕ್ಷ್ಮ ಪ್ರದೇಶ ಅಂತ ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಸಂಪೂರ್ಣ ನಿಷೇಧವಾಗಲಿದೆ. ಅದಕ್ಕೂ ಮೊದಲು ಈಗ ಗಣಿಗಾರಿಕೆ ನಡೆಸ್ತಿರೋರ ಗುತ್ತಿಗೆ ಅವಧಿ ಮುಗಿದರೂ ಆ ಕ್ಷಣವೇ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಉಷ್ಣ ವಿದ್ಯುತ್‌ ಸ್ಥಾವರ, ಕೈಗಾರಿಕೆ ಸ್ಥಾಪಿಸುವಂತಿಲ್ಲ. ಅಕ್ರಮ ರೆಸಾರ್ಟ್‌, ಹೋಂ ಸ್ಟೇಗಳಿದ್ರೂ ತೆರವಾಗಬೇಕು. ಅಧಿಸೂಚನೆ ಹೊರಡಿಸಿದ 5 ವರ್ಷಗಳಲ್ಲಿ ಈ ಆದೇಶ ಸಂಪೂರ್ಣವಾಗಿ ಜಾರಿ ಆಗಲೇಬೇಕು ಅನ್ನುತ್ತೆ ಕಾನೂನು.

ಅಕ್ರಮ ಕಟ್ಟಡಗಳ ತೆರವಿಗೆ ಅರಣ್ಯ ಸಚಿವರ ಸೂಚನೆ: ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಟ್ಟಗುಡ್ಡಗಳೇ ಕುಸಿದು ಬೀಳ್ತಿವೆ. ಉತ್ತರ ಕನ್ನಡದ ಶಿರೂರಲ್ಲಿ ಗುಡ್ಡ ಕುಸಿದ 10 ಜನ ಶವವಾದರೂ, ಹಾಸನ ಧರ್ಮಸ್ಥಳ ಮಾರ್ಗದ ಶಿರಾಡಿಘಾಟ್‌‌‌ನಲ್ಲಿ ಗುಡ್ಡ ಕುಸಿದು 4 ದಿನ ರಸ್ತೆಯೇ ಬಂದ್‌ ಆಯಿತು. ಚಾರ್ಮಾಡಿಘಾಟ್‌‌ನಲ್ಲಿ ಬೆಟ್ಟಗುಡ್ಡಗಳೇ ಕುಸಿದು 2 ದಿನ ವಾಹನಗಳ ಸಂಚಾರವೇ ನಿಂತೋಗಿತ್ತು. ಪಶ್ಚಿಮ ಘಟ್ಟಗಳಲ್ಲಿ ರಣಮಳೆ ಹೊಡೆತಕ್ಕೆ 2 ವಾರದಲ್ಲಿ ಆದ ಸಾಲು ಸಾಲು ದುರಂತಗಳು ಅಷ್ಟಿಷ್ಟಲ್ಲ. ಈಗ ವಯನಾಡು ದುರಂತ ರಾಜ್ಯ ಸರ್ಕಾರವನ್ನ ಎಚ್ಚರಿಸಿದೆ. ಅದಕ್ಕೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪಶ್ಚಿಮಘಟ್ಟಗಳಲ್ಲಿರುವ ಅಕ್ರಮ ರೆಸಾರ್ಟ್‌ಗಳು, ಅರಣ್ಯ ಒತ್ತುವರಿ ತೆರವಿಗೆ ಮೌಖಿಕ ಆದೇಶ ಕೊಟ್ಟಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಣ್ಣಿಲ್ಲದೇ ಅವಕಾಡೊ ಬೆಳೆ..! ಜೇನು ಸೇರಿಸಿದ ಕೃಷಿ ಈಗ ಹೊಸ ಟ್ರೆಂಡ್
February 11, 2026
7:29 AM
by: ದ ರೂರಲ್ ಮಿರರ್.ಕಾಂ
ರೇಷ್ಮೆ ಗೂಡಿಗೆ 800 ರೂ.ವರೆಗೆ ಬೆಲೆ | ಚಾಮರಾಜನಗರದಲ್ಲಿ ರೈತರಿಗೆ ಲಾಭದಾಯಕ ಹಾದಿ
February 11, 2026
7:11 AM
by: ದ ರೂರಲ್ ಮಿರರ್.ಕಾಂ
ಸ್ಥಳೀಯ ಚುನಾವಣೆಗಳಲ್ಲಿ ಇವಿಎಂಗೆ ಬ್ರೇಕ್ | ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಸಚಿವ ಸಂಪುಟ ಹಸಿರು ನಿಶಾನೆ
February 11, 2026
7:04 AM
by: ಮಿರರ್‌ ಡೆಸ್ಕ್
ಕೇಂದ್ರವು ಕೇರಳದ ರಬ್ಬರ್ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ – ಆರೋಪ
February 11, 2026
7:01 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror