Advertisement
MIRROR FOCUS

ವಯನಾಡು ದುರಂತದ ಬೆನ್ನಿಗೇ 6 ರಾಜ್ಯಗಳ ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ

Share

ಹಲವು ವರ್ಷಗಳಿಂದ ಪಶ್ಚಿಮ ಘಟ್ಟವನ್ನು  ಆಧುನಿಕರಣದಿಂದ ಅಥವಾ ಮಾನವ ಹಸ್ತಕ್ಷೇಪದಿಂದ ಉಳಿಸಿ ಎಂಬ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಬಂದ ಯಾವುದೇ ಸರ್ಕಾರಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಇದೀಗ ಮೇಲಿಂದ ಮೇಲೆ ರಣ ಭೀಕರ ದುರಂತಗಳು ನಡೆದ ಮೇಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.

Advertisement
Advertisement
Advertisement

ಕೇರಳ (Kerala), ಕರ್ನಾಟಕ (Karnataka) ಸೇರಿ ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳನ್ನ  ಸೂಕ್ಷ್ಮ ಪ್ರದೇಶ (Eco Zone) ಅಂತ ಘೋಷಿಸಿದ್ದು ಕರಡು ಅಧಿಸೂಚನೆಯನ್ನೂ ಹೊರಡಿಸಿದೆ. ಕರ್ನಾಟಕದ ಘಟ್ಟಪ್ರದೇಶಗಳಲ್ಲಿರೋ ಅಕ್ರಮ ಹೋಂ ಸ್ಟೇ, ರೆಸಾರ್ಟ್‌ಗಳ ತೆರವಿಗೂ ಸರ್ಕಾರ ಮುಂದಾಗಿದೆ. ಈ ಮಧ್ಯೆ ಉತ್ತರಭಾರತದಲ್ಲೂ ಪರ್ವತಶ್ರೇಣಿಗಳು ಬಾಯ್ಬಿಡೋಕೆ ಶುರು ಮಾಡಿವೆ.

Advertisement

ಪಶ್ಚಿಮಘಟ್ಟ ಉಳಿವಿಗೆ ಅಧಿಸೂಚನೆ : ಕೇರಳದ 9,993 ಚದರ ಕಿ.ಮೀ ಪಶ್ಚಿಮಘಟ್ಟ ಪ್ರದೇಶ, ಕರ್ನಾಟಕ, ಗೋವಾ ಪಶ್ಚಿಮ ಘಟ್ಟ ಪ್ರದೇಶಗಳು, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ ಪಶ್ಚಿಮಘಟ್ಟಗಳು ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳು ಪರಿಸರ ಸೂಕ್ಷ್ಮ ಪ್ರದೇಶ ಅಂತ ಕೇಂದ್ರ ಸರ್ಕಾರ ಗುರುತಿಸಿದೆ. ಒಟ್ಟು 56 ಸಾವಿರದ 825 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಅಂತ ಕರಡು ಅಧಿಸೂಚನೆ ಹೊರಡಿಸಿದೆ ಕೇಂದ್ರ ಸರ್ಕಾರ, ಮುಂದಿನ 60 ದಿನದಲ್ಲಿ ತಕರಾರು-ಸಲಹೆಗಳಿದ್ದರೆ ನೀಡಲು ಸೂಚನೆ ಕೊಡಲು ಸಮಯ ಕೊಟ್ಟಿದೆ.

ಪಶ್ಚಿಮಘಟ್ಟಗಳನ್ನ ಪರಿಸರ ಸೂಕ್ಷ್ಮ ಪ್ರದೇಶ ಅಂತ ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಸಂಪೂರ್ಣ ನಿಷೇಧವಾಗಲಿದೆ. ಅದಕ್ಕೂ ಮೊದಲು ಈಗ ಗಣಿಗಾರಿಕೆ ನಡೆಸ್ತಿರೋರ ಗುತ್ತಿಗೆ ಅವಧಿ ಮುಗಿದರೂ ಆ ಕ್ಷಣವೇ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಉಷ್ಣ ವಿದ್ಯುತ್‌ ಸ್ಥಾವರ, ಕೈಗಾರಿಕೆ ಸ್ಥಾಪಿಸುವಂತಿಲ್ಲ. ಅಕ್ರಮ ರೆಸಾರ್ಟ್‌, ಹೋಂ ಸ್ಟೇಗಳಿದ್ರೂ ತೆರವಾಗಬೇಕು. ಅಧಿಸೂಚನೆ ಹೊರಡಿಸಿದ 5 ವರ್ಷಗಳಲ್ಲಿ ಈ ಆದೇಶ ಸಂಪೂರ್ಣವಾಗಿ ಜಾರಿ ಆಗಲೇಬೇಕು ಅನ್ನುತ್ತೆ ಕಾನೂನು.

ಅಕ್ರಮ ಕಟ್ಟಡಗಳ ತೆರವಿಗೆ ಅರಣ್ಯ ಸಚಿವರ ಸೂಚನೆ: ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಟ್ಟಗುಡ್ಡಗಳೇ ಕುಸಿದು ಬೀಳ್ತಿವೆ. ಉತ್ತರ ಕನ್ನಡದ ಶಿರೂರಲ್ಲಿ ಗುಡ್ಡ ಕುಸಿದ 10 ಜನ ಶವವಾದರೂ, ಹಾಸನ ಧರ್ಮಸ್ಥಳ ಮಾರ್ಗದ ಶಿರಾಡಿಘಾಟ್‌‌‌ನಲ್ಲಿ ಗುಡ್ಡ ಕುಸಿದು 4 ದಿನ ರಸ್ತೆಯೇ ಬಂದ್‌ ಆಯಿತು. ಚಾರ್ಮಾಡಿಘಾಟ್‌‌ನಲ್ಲಿ ಬೆಟ್ಟಗುಡ್ಡಗಳೇ ಕುಸಿದು 2 ದಿನ ವಾಹನಗಳ ಸಂಚಾರವೇ ನಿಂತೋಗಿತ್ತು. ಪಶ್ಚಿಮ ಘಟ್ಟಗಳಲ್ಲಿ ರಣಮಳೆ ಹೊಡೆತಕ್ಕೆ 2 ವಾರದಲ್ಲಿ ಆದ ಸಾಲು ಸಾಲು ದುರಂತಗಳು ಅಷ್ಟಿಷ್ಟಲ್ಲ. ಈಗ ವಯನಾಡು ದುರಂತ ರಾಜ್ಯ ಸರ್ಕಾರವನ್ನ ಎಚ್ಚರಿಸಿದೆ. ಅದಕ್ಕೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪಶ್ಚಿಮಘಟ್ಟಗಳಲ್ಲಿರುವ ಅಕ್ರಮ ರೆಸಾರ್ಟ್‌ಗಳು, ಅರಣ್ಯ ಒತ್ತುವರಿ ತೆರವಿಗೆ ಮೌಖಿಕ ಆದೇಶ ಕೊಟ್ಟಿದ್ದಾರೆ.

Advertisement
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಚಿಕ್ಕಮಗಳೂರು | ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ದಾಳಿ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು, ತುಡುಕೂರು ಗ್ರಾಮಗಳ ಕಾಫಿ ತೋಟಗಳಲ್ಲಿ ಸುಮಾರು 20 ಕಾಡಾನೆಗಳ…

49 mins ago

ಶಿವಮೊಗ್ಗದಲ್ಲಿ ನಿರ್ಮಲ ತುಂಗಾಭದ್ರಾ ಅಭಿಯಾನ

ನಿರ್ಮಲ ತುಂಗಾಭದ್ರಾ ಅಭಿಯಾನ- ಬೃಹತ್ ಜಲಜಾಗೃತಿ ಪಾದಯಾತ್ರೆಯ ಭಾಗವಾಗಿ ಶಿವಮೊಗ್ಗ ನಗರದಲ್ಲಿ ತುಂಗಾ…

2 hours ago

ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಅಭಿಯಾನ | ಬಿಗಿ ಭದ್ರತೆ – 1700 ಪೊಲೀಸ್ ಸಿಬ್ಬಂದಿ ನಿಯೋಜನೆ

 ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಮಾಲೆ ಅಭಿಯಾನ ನಡೆಯಲಿದ್ದು, ರಾಜ್ಯದ ವಿವಿಧೆಡೆಯಿಂದ ಭಕ್ತರು ದತ್ತಪೀಠಕ್ಕೆ ಆಗಮಿಸುತ್ತಿದ್ದು, …

11 hours ago

ಹವಾಮಾನ ವರದಿ | 09-11-2024 | ಕೆಲವು ಕಡೆ ತುಂತುರು ಮಳೆ | ನ.13 ರಿಂದ 18ರ ತನಕ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ |

ಬಂಗಾಳಕೊಲ್ಲಿಯ ತಿರುಗುವಿಕೆಯು ನವೆಂಬರ್ 12 ಅಥವಾ 13ರಂದು ಶಿಥಿಲಗೊಳ್ಳುವ ಸಾಧ್ಯತೆಗಳಿದ್ದು, ಬಳಿಕ ಹಿಂಗಾರು…

21 hours ago

ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆ | ಯಾದಗಿರಿ ಜಿಲ್ಲೆಯಲ್ಲಿ ಯಶಸ್ವಿ ಅನುಷ್ಠಾನ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಯಾದಗಿರಿ…

1 day ago