ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಕಳೆದ 12 ವಾರಗಳಿಂದ ನಿರಂತರವಾಗಿ ಪ್ರತೀ ಗುರುವಾರ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಗುತ್ತಿಗಾರು ಗ್ರಾಪಂ ಹಾಗೂ ಸಂಜೀವಿನಿ ಓಕ್ಕೂಟ ಮತ್ತು ಗುತ್ತಿಗಾರು ವರ್ತಕ ಸಂಘ ಹಾಗೂ ಇತರ ಸಂಘಸಂಸ್ಥೆಗಳ ಸಹಕಾರದಿಂದ ನಿರಂತರವಾಗಿ ಪ್ರತೀ ಗುರುವಾರ ಸ್ಚಚ್ಛತಾ ಜಾಗೃತಿ. ಅಭಿಯಾನ ನಡೆಯುತ್ತಿದೆ. ಇದೀಗ ವಾರ್ಡ್ ಮಟ್ಟದವರೆಗೂ ಈ ಅಭಿಯಾನ ವಿಸ್ತರಣೆ ಮಾಡಲಾಗಿದೆ. ಈ ನಡುವೆ ಶುಕ್ರವಾರ ನಾಲ್ಕೂರು ವಾರ್ಡ್‌ನ ಎಲ್ಲರೂ ಒಂದಾಗಿ ಸ್ವಚ್ಛತಾ ಅಭಿಯಾನ ನಡೆಸಿದರು. ಇದೀಗ ಈ ಸ್ವಚ್ಛತಾ ಕಾರ್ಯವು ರಾಜ್ಯದ ಗಮನ ಸೆಳೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಲ್ಕೂರು ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ. #SwachhataHiSeva #SwachhBharat @ZP_DaksnKannada @rdwsd_gok @SwachSurvekshan pic.twitter.com/CDD3PPyd0B
— theruralmirror (@ruralmirror) September 23, 2023
ಗುತ್ತಿಗಾರು ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ಉದ್ದೇಶದಿಂದ ಚಟುವಟಿಕೆಗೆ ಇಳಿದ ಸಂಘಸಂಸ್ಥೆಗಳು ಗ್ರಾಪಂ ಸಹಕಾರದೊಂದಿಗೆ ಸ್ವಚ್ಛ ಗುತ್ತಿಗಾರು ಟಾಸ್ಕ್ ಫೋರ್ಸ್ ರಚನೆ ಮಾಡಿ ಸ್ವಚ್ಛ ಗುತ್ತಿಗಾರು ಅಭಿಯಾನದ ಮೂಲಕ ಗುತ್ತಿಗಾರು ಪೇಟೆಯಲ್ಲಿ ಕಳೆದ 12 ವಾರಗಳಿಂದ ಸ್ವಚ್ಛತಾ ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ನಿರಂತರವಾಗಿ ನಡೆದ ಸ್ವಚ್ಛತಾ ಅಭಿಯಾನದ ಜಾಗೃತಿಯ ಮುಂದಿನ ಭಾಗವಾಗಿ ವಾರ್ಡ್ ಮಟ್ಟದಲ್ಲೂ ಸ್ವಚ್ಛತಾ ಜಾಗೃತಿ ನಡೆಸಲಾಗುತ್ತಿದೆ.
ಇದೀಗ ವಾರ್ಡ್ ಮಟ್ಟದಲ್ಲಿ ನಡೆದ ಸ್ವಚ್ಛತಾ ಅಭಿಯಾನವು ರಾಜ್ಯಮಟ್ಟದ ಗಮನ ಸೆಳೆದಿದೆ. ಎಲ್ಲಾ ವಾರ್ಡ್ ಗಳಲ್ಲೂ ಸ್ವಚ್ಛತೆಯನ್ನು ನಡೆಸುವ ಮೂಲಕ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡು ದೇಶದಲ್ಲಿ ನಡೆಯುತ್ತಿರುವ ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಗ್ರಾಮೀಣ ಮಟ್ಟದಲ್ಲೂ ಯಶಸ್ವಿಯಾಗಿ ನಡೆಸುತ್ತಿರುವುದು ಗಮನ ಸೆಳೆದಿದೆ.
#SwachhBharat Campaign and good work going on in Guthigar, Sullia.@SwachSurvekshan @rdwsd_gok @ZP_DaksnKannada pic.twitter.com/xAyD8nKvgQ
— theruralmirror (@ruralmirror) September 23, 2023