ಬೆಳೆದ ಬೆಳೆಗಳಿಗೇ ನೀರಿಲ್ಲ…! | ಕಾವೇರಿ ತಟದಲ್ಲಿ ರೈತರ ಪರಿಸ್ಥಿತಿ….| ಕೆಲವು ಕಡೆ ದೇವರ ಮೊರೆ |

October 31, 2023
6:50 PM
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಬೆಳೆದು ನಿಂತಿರುವ ಪೈರುಗಳು ಒಣಗಲು ಆರಂಭವಾಗಿದೆ.

ಈ ಬಾರಿ ಮಳೆ ಕೈಕೊಟ್ಟಿತು, ಕಾವೇರಿ ಸೇರಿದಂತೆ ಜೀವನದಿಗಳೂ ಈಗಲೇ ಬತ್ತುವ ಸೂಚನೆ ನೀಡಿದೆ. ಇದೆಲ್ಲದರ ನಡುವೆ ತಮಿಳುನಾಡು ನೀರು ಕೇಳುತ್ತಿದೆ. ಈಗ ನಮ್ಮ ನೆಲದ ರೈತರು ಬೆಳೆ ಬೆಳೆದು ನೀರಿಲ್ಲದೆ ಪರದಾಟ ನಡೆಸುತ್ತಿದ್ದಾರೆ. ಬೆಳೆ ನೀರಿಲ್ಲದೆ ಒಣಗುತ್ತಿದೆ…!.

Advertisement

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಬೆಳೆದು ನಿಂತಿರುವ ಪೈರುಗಳು ಒಣಗಲು ಆರಂಭವಾಗಿದೆ. ಬೆಳೆದು ನಿಂತಿರುವ ಭತ್ತ, ಕಬ್ಬು ಬೆಳೆಗೆ ನವೆಂಬರ್ ಅಂತ್ಯದವರೆಗೆ ನೀರಿನ ಅವಶ್ಯಕತೆ ಇದೆ. ಈಗಲೇ ನೀರಿನ ಕೊರತೆ ಕಂಡುಬಂದು  ಒಣಗಲಾರಂಭಿಸಿದೆ. ಭತ್ತಕ್ಕಿಂತಲೂ ಕಬ್ಬಿಗೆ ಹೆಚ್ಚು ನೀರಿನ ಅವಶ್ಯಕತೆ ಇದೆ. ನೀರಿಲ್ಲದಿರುವುದರಿಂದ ಬೆಳೆಗಳಿಗೆ ನೀರು ಸಿಗುವ ಸಾಧ್ಯತೆಗಳ ಕ್ಷೀಣಿಸಿವೆ ಈಗಿನ ಪರಿಸ್ಥಿತಿಯಲ್ಲಿ ಬೆಳೆ ನಷ್ಟವಾಗುವುದು ಖಚಿತವಾಗಿದೆ. ಇದುವರೆಗೂ ಪರ್ಯಾಯ ನೀರಿನ ಸೌಲಭ್ಯ ಪಡೆಯಲಾಗದೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಟ ನಡೆಸುತ್ತಿದ್ದಾರೆ.1 ಬೆಳೆಗಳ ಉಳಿವಿಗೆ 10 ರಿಂದ 13 ಟಿಎಂಸಿ ನೀರು ಬೇಕು 11,59,607 ಹೆಕ್ಟೇರ್ ಪ್ರದೇಶದಲ್ಲಿರುವ ಬೆಳೆಗೆ ಈಗ ನೀರಿನ ಆವಶ್ಯಕತೆ ಇದೆ . ಈ ನಡುವೆಯೇ ತಮಿಳುನಾಡಿನ ನೀರು ಬಿಡಬೇಕಾದ ಸ್ಥಿತಿ ಬಂದಿದೆ.

ಈಗಿರುವ ಪರಿಸ್ಥಿತಿಯಲ್ಲಿ ಬೆಳೆಗಳಿಗೆ ನೀರು ಕೊಡುವುದಕ್ಕೆ ಸರ್ಕಾರದಿಂದ ಸಾಧ್ಯವೇ ಇಲ್ಲ. ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಬೇಕಾದರೆ 21 ಟಿಎಂಸಿಯಷ್ಟು ನೀರಿನ ಅವಶ್ಯಕತೆ ಇದೆ ಸರ್ಕಾರವು ಕಾವೇರಿ ನೀರನ್ನು ಹರಿಯಬಿಟ್ಟು  ಕುಳಿತಿದೆ. ರೈತರು ಸಂಕಷ್ಟದ ಉರಿಯಲ್ಲಿ ಬೇಯುತ್ತಿದ್ದಾರೆ ಎಂದು ರೈತ ಮುಖಂಡ  ಕೆ.ಎಸ್.ನಂಜುಂಡೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಗಡಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ರಾಗಿ ಬೆಳೆ ಒಣಗುತ್ತಿದ್ದು, ಮಳೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ಕೈಗೆ ಬಂದ ಬೆಳೆ ನಾಶವಾಗುವ ಸ್ಥಿತಿಯಲ್ಲಿದೆ. ಮಳೆರಾಯ ಕೃಪೆ ತೋರಿದರೆ ಮಾತ್ರ ಬೆಳೆ ಕೈಗೆಟುಕಲಿದೆ ಎಂದು ರೈತರು ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.ಕೂಡಲೇ ಸರ್ಕಾರವು ರಾಗಿಗೆ ಬೆಂಬಲ ಬೆಲೆ ಘೋಷಣೆ ಮತ್ತು ಒಂದು ಎಕರೆಗೆ 2 ಲಕ್ಷ ಬೆಳೆ ವಿಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಒಂದೆಡೆ ಮಳೆ-ಇನ್ನೊಂದೆಡೆ ಹೀಟ್‌ವೇವ್‌ | ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
April 6, 2025
11:00 AM
by: ದ ರೂರಲ್ ಮಿರರ್.ಕಾಂ
ಮ್ಯಾನ್ಮಾರ್‌ನ ಭೂಕಂಪ | ಭಾರತೀಯ ಸೇನಾ ಆಸ್ಪತ್ರೆಯಲ್ಲಿ 700 ಕ್ಕೂ ಅಧಿಕ ರೋಗಿಗಳಿಗೆ ಚಿಕಿತ್ಸೆ
April 6, 2025
10:00 AM
by: ದ ರೂರಲ್ ಮಿರರ್.ಕಾಂ
ಮಾನವ-ಆನೆ ಸಂಘರ್ಷ ತಡೆಗೆ ಕ್ರಮ | 200 ಕೋ. ರೂ. ವೆಚ್ಚದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ
April 6, 2025
9:00 AM
by: The Rural Mirror ಸುದ್ದಿಜಾಲ
ಬೃಹಸ್ಪತಿ ಅಂದರೆ ಜ್ಞಾನವಂತ
April 6, 2025
8:00 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group