ಮತ್ತೆ ಮತ್ತೆ ಅಡಿಕೆ ಕಳ್ಳಸಾಗಾಣಿಕೆ…! | ಮುಂದ್ರಾ ಬಂದರಿನಲ್ಲಿ 27.81 ಮೆಟ್ರಿಕ್ ಟನ್ ಅಡಿಕೆ ವಶ |

February 29, 2024
10:11 PM
ಅಕ್ರಮವಾಗಿ ಅಡಿಕೆ ಸಾಗಾಟ ಪ್ರಕರಣವನ್ನು ಕಸ್ಟಮ್ಸ್‌ ಇಲಾಖೆ ಮುಂದ್ರಾ ಬಂದರಿನಲ್ಲಿ ಪತ್ತೆ ಮಾಡಿದ್ದು, ಅಡಿಕೆಯನ್ನು ವಶಕ್ಕೆ ಪಡೆದುಕೊಂಡಿದೆ.

ಗುಜರಾತ್‌ ನ ಮುಂದ್ರಾ ಬಂದರಿನ ಮೂಲಕ ಅಕ್ರಮವಾಗಿ ಅಡಿಕೆ ಕಳ್ಳಸಾಗಾಣಿಕೆ ಮಾಡುವ ಪ್ರಯತ್ನಕ್ಕೆ ಮತ್ತೆ ತಡೆಯಾಗಿದೆ. ಕಸ್ಟಮ್ಸ್‌ ಅಧಿಕಾರಿಗಳು ಸುಮಾರು 1.15 ಕೋಟಿ ರೂಪಾಯಿ ಮೌಲ್ಯದ ಸುಮಾರು 27.81 ಮೆಟ್ರಿಕ್‌ ಟನ್‌ ಅಡಿಕೆಯನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಳದ ಮಾದರಿಯ ವಸ್ತುವನ್ನು ಆಮದು ಎಂದು ನಮೂದಿಸಿ ಅಡಿಕೆ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು.

Advertisement

ಆಮದು ಸರಕನ್ನು ಸುಳ್ಳು ಮಾಹಿತಿಯಾಗಿ ನಮೂದು ಮಾಡಲಾಗಿತ್ತು.ಡಮಾರ್  ಎಂದು ಹೇಳಿಕೊಂಡು  ಇಂಡೋನೇಷ್ಯಾದಿಂದ ರಾಳ ಮಾದರಿಯ ಅಪರೂಪದ ವಸ್ತುವಿನ ಹೆಸರನ್ನು ನಮೂದಿಸಿ ಆಮದು ಮಾಡಲಾಗುತ್ತಿತ್ತು. ಇದು ಅಪರೂಪದ ವಸ್ತುವಾಗಿದ್ದು ಭಾರತಕ್ಕೆ ನಿಯಮಿತವಾಗಿ ಆಮದು ಮಾಡಿಕೊಳ್ಳುವುದಿಲ್ಲ. ಹೀಗಾಗಿ ಇಂಡೋನೇಷ್ಯಾದಿಂದ ಕಂಟೈನರ್‌ಗಳಲ್ಲಿ  ಮುಂದ್ರಾ ಬಂದರಿಗೆ ಬಂದಿರುವ ವಸ್ತುಗಳಲ್ಲಿ ಅಡಿಕೆ ಇರುವ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 27.81 ಮೆ.ಟನ್ ಅಡಿಕೆ ಪತ್ತೆಯಾಗಿದೆ.

ಅಡಿಕೆ ಆಮದು ಸುಂಕ ಶೇ.110 ಇರುವುದರಿಂದ ವಿದೇಶಿ ಅಡಿಕೆಯನು ಆಮದು ಮಾಡಲು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಇದುವರೆಗೆ ಡ್ರೈ ಪ್ರುಟ್‌ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆ ಮಾಡುತ್ತಿದ್ದರೆ ಈಗ ರಾಳದ ಮಾದರಿಯನ್ನು ಉಲ್ಲೇಖಿಸಲಾಗಿದೆ. ಈ  ಆರ್ಥಿಕ ವರ್ಷದಲ್ಲಿ, ಅಕ್ರಮ ಆಮದನ್ನು ತಡೆಯುವ ನಿರಂತರ ಪ್ರಯತ್ನಗಳ ಪರಿಣಾಮವಾಗಿ ರೂ.10.38 ಕೋಟಿ ಸುಂಕದ ಮೌಲ್ಯವನ್ನು ಹೊಂದಿರುವ 172.39 ಮೆಟ್ರಿಕ್‌ ಟನ್‌ಗಳಷ್ಟು ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಇಲಾಖೆ ಪ್ರಕಟಣೆ ತಿಳಿಸಿದೆ.

At Mundra Port, Customs Department seized 27.81 metric tonnes of arecanut. The consignment goods were misrepresented, and an investigation is ongoing.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಆಮದು | ಮಿಜೋರಾಂ ಅಡಿಕೆ ಬೆಳೆಗಾರರಿಗೆ ಸವಾಲು
April 10, 2025
9:58 AM
by: The Rural Mirror ಸುದ್ದಿಜಾಲ
ಉತ್ತರ ಭಾರತದಲ್ಲಿ ಆವರಿಸಿದ ಬಿಸಿಗಾಳಿ | 27 ಹವಾಮಾನ ಕೇಂದ್ರಗಳಲ್ಲಿ 43 ಡಿಗ್ರಿಗಿಂತ ಹೆಚ್ಚಿನ ತಾಪಮಾನ |
April 10, 2025
8:13 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group