ಚಳಿಗಾಲದಲ್ಲಿ ನಾವು ತುಸು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಏಕೆಂದರೆ ಈ ವಾತಾವರಣದ ಬದಲಾವಣೆಯಿಂದಲೇ ಆರೋಗ್ಯ ಹೆಚ್ಚು ಕೆಡುವುದು. ಆದುದರಿಂದ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿದರೆ ಒಳಿತು. ಆಹಾರ ಕ್ರಮದಲ್ಲಿ ಮಾಡುವ ತಪ್ಪುಗಳು ನಮ್ಮ ರೋಗನಿರೋಧಕ ಶಕ್ತಿ ಕುಂದಿಸಿ, ಶೀತ, ಕೆಮ್ಮು ಮತ್ತು ಜೀರ್ಣ ಕ್ರೀಯೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಯಾವರೀತಿ ಆಹಾರ ಕ್ರಮಗಳು ಇರಬೇಕು:
- ಬಿಸಿಬಿಸಿ ಆಹಾರ ಸೇವನೆ: ತಣ್ಣನೆಯ ಆಹಾರ ಅಥವಾ ಫ್ರೀಡ್ಜ್ ನಿಂದ ನೇರವಾಗಿ ತೆಗೆದ ಆಹಾರವನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಇದರಿಂದ ಜೀರ್ಣಶಕ್ತಿ ಕುಗ್ಗುತ್ತದೆ, ಹೊಟ್ಟೆ ಉಬ್ಬರ, ಅಜೀರ್ಣ, ಗ್ಯಾಸು ಸಮಸ್ಯೆಗಳು ಹೆಚ್ಚಾಗುತ್ತದೆ, ದೇಹದ ಉಷ್ಣತೆಯ ಸಮತೋಲನ ಹದಗೆಡುತ್ತದೆ. ಆದುದರಿಂದ ಯಾವಾಗಲೂ ಬಿಸಿಬಿಸಿಯಾದ ಮತ್ತು ಅಂದೇ ತಯಾರಿಸಿದ ತಾಜಾ ಆಹಾರ ಸೇವಿಸಿ.
- ಆರೋಗ್ಯಕರ ಕೊಬ್ಬಿನಂಶ ನಿರ್ಲಕ್ಷ: ದೇಹದ ಗಾತ್ರದಲ್ಲಿ ಬದಲಾವಣೆಯಾಗಬಹುದು ಎಂದು ಅನೇಕರು ತುಪ್ಪ ಅಥವಾ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಆದರೆ ಚಳಿಗಾಲದಲ್ಲಿ ನೈಸರ್ಗಿಕವಾಗಿ ಒಣ ಋತುವಾಗಿರುವುದರಿಂದ ದೇಹಕ್ಕೆ ಸಾಕಷ್ಟು ಸ್ನಿಗ್ಥತೆ ಅಗತ್ಯ. ಕೊಬ್ಬಿನಂಶ ಬಿಟ್ಟರೆ ಚರ್ಮ ಒಣಗುವುದು, ಕೀಲು ನೋವು ಮತ್ತು ಮಲಬದ್ಧತೆ ಸಮಸ್ಯೆಗಳು ಉಂಟಾಗಬಹುದು.
- ಪೋಷಣೆ ನೀಡುವ ಆಹಾರ: ಹಸಿ ಸಲಾಡ್ ಗಳಂತಹ ಒಣ ಪದಾರ್ಥಗಳನ್ನು ಚಳಿಗಾಲದಲ್ಲಿ ಅತಿಯಾಗಿ ಸೇವಿಸುವುದು ತಪ್ಪು. ಇದರಿಂದ ವಾತ ದೋಷ ಹೆಚ್ಚಿಸುತ್ತದೆ. ಒಣ ಆಹಾರ ವಾತ ಹೆಚ್ಚಿಸಿ ದೇಹದಲ್ಲಿ ಬಿಗಿತ, ನೋವು ಹಾಗೂ ಜೀರ್ಣ ಸಮಸ್ಯೆ ತಂದೊಡ್ಡುತ್ತವೆ. ಆದುದರಿಂದ ಒಣ ಆಹಾರದ ಜೊತೆಗೆ ತುಪ್ಪ, ಮೊಸರು ಅಥವಾ ರಸಂನಂತಹ ದ್ರವ ಪದಾರ್ಥ ಬಳಸಿ.
- ಚಳಿಗಾಲದಲ್ಲಿ ಸರಿಯಾದ ಆಹಾರದಿಂದ ಈ ಋತುವಿನಲ್ಲಿ ಸಿಗುವ ಶಕ್ತಿ, ಪೋಷಣ್ ಮತ್ತು ಸ್ಥಿರತೆಯನ್ನು ಪಡೆಯಲು ಸಾಧ್ಯ. ವಾತಾವರಣಕ್ಕೆ ತಕ್ಕಂತೆ ಆಹಾರ ಬದಲಾವಣೆ ಉತ್ತಮ. ಹೀಗಿದ್ದ ಪಕ್ಷದಲ್ಲಿ ಸರಿಯಾದ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

