ಶಸ್ತ್ರಚಿಕಿತ್ಸೆಗೆ ಬಂದ ವೈದ್ಯರು ಆಸ್ಪತ್ರೆಯಿಂದ ಹೊರ ನಡೆದದ್ದು ಏಕೆ…? |

November 7, 2023
1:39 PM

ಜಗತ್ತಿನಲ್ಲಿ ಎಂಥೆಂಥಾ ಜನರಿರುತ್ತಾರೆ ನೋಡಿ. ಆದರೆ ಮಾನವೀಯತೆಯನ್ನೇ ಮರೆತು ಇರ್ತಾರಲ್ಲಾ ಅನ್ನೋದು ಬೇಸರದ ಸಂಗತಿ. ವೈದ್ಯೋ ನಾರಾಯಣ ಹರಿ ಅಂತಾರೆ. ಎಂಥದ್ದೇ ಸಂದರ್ಭ ಬಂದರೂ ವೈದ್ಯರಿಗೆ ಅವರನ್ನು ನಂಬಿ ಬಂದ ರೋಗಿಗಳು(Patient) ಮುಖ್ಯ. ಅದೆಷ್ಟೋ ವೈದ್ಯರು(Doctor) ತಮ್ಮ ಸಂಕಷ್ಟದ ಪರಿಸ್ಥಿತಿಯಲ್ಲೂ ರೋಗಿಗಳಿಗೆ ಚಿಕಿತ್ಸೆ(Treatment) ನೀಡಿದ ಉದಾಹರಣೆ ಇದೆ. ಆದ್ರೆ ಇಲ್ಲೊಬ್ಬ ವೈದ್ಯ ಮಹಾಶಯರು ಚಹಾ(Tea) ನೀಡಿಲ್ಲ ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆಯನ್ನೇ(Surgery) ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಈ ಘಟನೆ ನಾಗ್ಪುರದಲ್ಲಿ ನಡೆದಿದೆ.

Advertisement
Advertisement

ಘಟನೆ ಏನು? ಕುಟುಂಬ ಯೋಜನೆಯಲ್ಲಿ(Family Planning) ಶಸ್ತ್ರ ಚಿಕಿತ್ಸೆಗೆಂದು ಮಹಿಳೆ ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದ್ದಾರೆ, ಮಹಿಳೆ ಪ್ರಜ್ಞೆತಪ್ಪಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಚಹಾ ಹಾಗೂ ಬಿಸ್ಕತ್ತು ಸಿಗಲಿಲ್ಲ ಎನ್ನುವ ಕಾರಣಕ್ಕೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನು ಮಾಡುವುದಿಲ್ಲ ಎಂದು ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ವೈದ್ಯರ ಈ ನಡವಳಿಕೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ಸೌಲಭ್ಯಗಳ ಕೊರತೆ ಇದೆ ಈ ನಡುವೆ ವೈದ್ಯರು ಸೂಕ್ಷ್ಮತೆ ಇಲ್ಲದೆ ನಡೆದುಕೊಂಡಿರುವುದರ ಬಗ್ಗೆ ಬೇಸರ ಹೊರಹಾಕಿದ್ದಾರೆ.

Advertisement
ನವೆಂಬರ್ 3 ರಂದು ಮೌಡಾ ತಾಲೂಕಿನ ಖಾತ್​ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಘಟನೆ ನಡೆದಿದೆ. ವೈದ್ಯರ ಹೆಸರು ಭಾಲವಿ. ಒಟ್ಟು ನಾಲ್ಕು ಮಹಿಳೆಯರಿಗೆ ಆ ಸಂದರ್ಭದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಲಾಗಿತ್ತು. ಚಹಾ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡು ಆಸ್ಪತ್ರೆಯಿಂದ ಹೊರನಡೆದಿದ್ದ ವೈದ್ಯರು ಆಸ್ಪತ್ರೆಗೆ ವಾಪಸಾಗಿಲ್ಲ. ಮಹಿಳೆಯರ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ವೈದ್ಯರು ಮತ್ತೊಬ್ಬ ವೈದ್ಯರನ್ನು ಕರೆಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ನನಗೆ ಮಧುಮೇಹವಿದೆ, ಸಮಯಕ್ಕೆ ಸರಿಯಾಗಿ ಚಹಾ, ಬಿಸ್ಕತ್ತು ಬೇಕಾಗುತ್ತದೆ. ಇದರಿಂದ ನಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವು ಕಡಿಮೆಯಾಗುತ್ತದೆ, ಹಾಗಾಗಿ ಆಸ್ಪತ್ರೆಯಿಂದ ಹೊರನಡೆಯಬೇಕಾಯಿತು ಎಂದು ಡಾಕ್ಟರ್ ತಿಳಿಸಿದ್ದಾರೆ.

ಈ ಮಹಿಳೆಯರ ಸಂಬಂಧಿಕರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗೊಂದಲ ಸೃಷ್ಟಿಸಿದರು. ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಜಯ್ ದಾವ್ಲೆ ವಿಚಾರಣೆಗೆ ಮೌಖಿಕ ಆದೇಶ ನೀಡಿದ್ದಾರೆ. ಇದಕ್ಕಾಗಿ ಮೂವರು ಸದಸ್ಯರ ಸಮಿತಿ ರಚಿಸಲಾಗಿದ್ದು, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿದೆ. ಗುರುವಾರ ವರದಿ ಬರುವ ನಿರೀಕ್ಷೆ ಇದೆ.

The woman had come to the hospital for a family planning surgery. The doctor gave them an anesthetic injection, the woman fell unconscious. Because they did not get tea and biscuits before the surgery, the doctor left the hospital saying that they would not do the surgery. The villagers have expressed their outrage at this behavior of the doctor.

– ಅಂತರ್ಜಾಲ ಮಾಹಿತಿ

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು – ಈ ಬಾರಿ ಆನೆಗಳ ಸಂಖ್ಯೆ ಏರಲಿದೆಯಾ..?
May 16, 2024
2:00 PM
by: The Rural Mirror ಸುದ್ದಿಜಾಲ
Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |
May 16, 2024
1:58 PM
by: ಸಾಯಿಶೇಖರ್ ಕರಿಕಳ
ಮಳೆ ಸುರಿಯುತ್ತಿದ್ದಂತೆ ರಾಜ್ಯದಲ್ಲಿ ಡೆಂಘೀ ಭೀತಿ : ಮುಂಜಾಗ್ರತಾ ಕ್ರಮಕ್ಕೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ
May 15, 2024
11:31 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯ ಆಸ್ತಿ ಎಷ್ಟು ಗೊತ್ತಾ..? ಅವರಿಗೆ ಜಮೀನಿಲ್ಲ, ಕಾರಿಲ್ಲ, ಸ್ವಂತ ಮನೆಯೂ ಇಲ್ಲ : ಬರೀ 3.02ಕೋಟಿ ಚರಾಸ್ತಿ
May 15, 2024
11:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror