ಮಲೆ ಮಹದೇಶ್ವರಬೆಟ್ಟ(Male Mahadeshwara Hill) ವ್ಯಾಪ್ತಿಯ ಪಡಸಲನತ್ತ, ದೊಡ್ಡಾಣೆ ಗ್ರಾಮಗಳಲ್ಲಿ ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಕ ರಾ ರೈತ ಸಂಘದ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ‘ದೊಡ್ಡರಾಗಿ ಬೆಳೆಗಾರರ ಸಶಕ್ತೀಕರಣ'(Empowerment of large millet growers) ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿ ವಿಜ್ಞಾನಿ(Agricultural scientist) ಡಾ.ಮಂಜುನಾಥ ಮಾತನಾಡಿದರು. ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ರೈತರು(Farmer) ನಿಜಕ್ಕೂ ಆದರ್ಶಪ್ರಾಯರು. ಮಣ್ಣಿನಲ್ಲಿ ದೇವರನ್ನು ಕಾಣುವ ಇವರನ್ನು ನಾವು ಬಹುವಾಗಿ ಪ್ರೀತಿಸಬೇಕು.
ಆದರೆ, ಇಲ್ಲಿನ ರೈತರು ಆರು ತಿಂಗಳು ಕಾದು, ಉತ್ತು-ಬಿತ್ತಿ-ಬೆಳೆದ ಅದ್ಭುತ ರುಚಿಯನ್ನು ಹೊಂದಿರುವ ವಿಶೇಷ ತಳಿಯ ‘ದೊಡ್ಡರಾಗಿ’ ಯನ್ನು ನೆರೆಯ ತಮಿಳುನಾಡಿನವರಿಗೆ ಕೇವಲ ₹1200~₹1800 ಗಳಿಗೆ ಮಾರುತ್ತಿದ್ದಾರೆ. ಇದು ಒಕ್ಕೂಟ ಸರ್ಕಾರದ ಕನಿಷ್ಠ ಬೆಂಬಲ ಬೆಲೆಗಿಂತ ಬಹಳ ಕಡಿಮೆಯಾಗಿದೆ. ಇಂತಹ ಶೋಚನೀಯ ಸ್ಥಿತಿಯಲ್ಲಿ ಕೃಷಿಯನ್ನು ಮುಂದುವರೆಸುವುದು ಬಹಳ ಕಷ್ಟ. ಇದರಿಂದ ಇಲ್ಲಿನ ಜನರಿಗೆ ಕೃಷಿಯ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ. ಅವರು ಬೇರೆಡೆಗೆ ಗುಳೆಹೋಗುವ ಸಂಭವ ಹೆಚ್ಚಾಗುತ್ತದೆ. ಇಲ್ಲಿನ ರೈತರು ಪಾರಂಪಾರಿಕ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಿದ್ದು, ಅವರು ಇದರಲ್ಲಿ ಸೋತರೆ ಅದು ಅವರ ಸೋಲಲ್ಲ, ಬದಲಿಗೆ ಒಟ್ಟಾರೆ ನಮ್ಮ ಜಿಲ್ಲೆಯ ಸೋಲಾಗುತ್ತದೆ ಎಂದರು.
ಬೆಟ್ಟದ ಜೀವಾಳ : ಇದು ಕೇವಲ ರೈತರ ಬದುಕು ಮತ್ತವರು ಬೆಳೆದ ರಾಗಿ ಮಾತ್ರವಲ್ಲ, ಅದು ನಮ್ಮ ಜಿಲ್ಲೆಯ ಅಸ್ತಿತ್ವ, ಅಸ್ಮಿತೆ. ಆ ರಾಗಿ ಮತ್ತದನ್ನು ಬೆಳೆಯುವ ಜನತೆಗೆ ಅವರದ್ದೆ ಆದ ಒಂದು ಸೊಗಡಿದೆ, ಹಿರಿಮೆಯಿದೆ. ಭೌಗೋಳಿಕವಾಗಿ ಅದಕ್ಕೆ ಅದರದ್ದೇ ಆದ ಸಾಂಸ್ಕೃತಿಕ ಇತಿಹಾಸವಿದೆ, ಜಾನಪದ ಹಿನ್ನೆಲೆ ಇದೆ. ಸಮಾಜ್ಯೋಧಾರ್ಮಿಕ ವ್ಯವಸ್ಥೆಯಿದೆ. ಇದನ್ನು ನಾವು ಕಳೆದುಕೊಂಡರೆ, ಮತ್ತೆ ಮರುಕಳಿಸಲಾರದ ಸ್ಥಿತಿಗೆ ತಲುಪಬಹುದು.
ಇಂದಿನ ವಾಯುಗುಣ ಬದಲಾವಣೆ ಒಗ್ಗಿಕೊಂಡು ಇಷ್ಟೆಲ್ಲಾ ಕಷ್ಟದ ನಡುವೆಯು ನಮ್ಮ ರೈತರು ಇಲ್ಲಿನ ಕಾಡಿನಲ್ಲಿಯೇ ನೆಲೆಸಿ ಕೃಷಿ ಮಾಡುತ್ತಿರುವುದೇ ಒಂದು ಸಂತೋಷದ ಸಂಗತಿ. ಅಂತಹ ಸಂದರ್ಭದಲ್ಲಿ ನಾವು-ನೀವೆಲ್ಲರೂ ಅವರಿಗೆ ಕೈ ಜೋಡಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾವು ಅವರಿಗೆ ನ್ಯಾಯಯುತ ಬೆಲೆಯಲ್ಲಿ ಅವರು ಬೆಳೆದ ಸುಮಾರು ನೂರು ಕ್ವಿಂಟಾಲ್ ಗಳಷ್ಟು ರಾಗಿಯನ್ನು ಮತ್ತು ಇತರೆ ದವಸ-ಧಾನ್ಯಗಳನ್ನು ಕೊಂಡು, ನಮ್ಮ ಕೈಲಾದಷ್ಟು ಪ್ರೋತ್ಸಾಹ ನೀಡುವ ಮೂಲಕ ಅವರಿಗೆ ಬೆಂಬಲ ನೀಡಿದ್ದೇವೆ. ಇನ್ನೂ ಮುಂದೆ ನಮ್ಮ ಸರ್ಕಾರ, ಪಂಚಾಯತಿಗಳು ಇದನ್ನು ಮುಂದುವರೆಸಬೇಕೆಂದು ತಿಳಿಸಿದರು.
ಕ.ರಾ.ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ ಮಾತನಾಡಿ, ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಮಧ್ಯ ಪ್ರವೇಶಿಸಿ, ಇಲ್ಲಿನ ಜನರಿಂದ ನ್ಯಾಯವಾದ ಬೆಲೆಯಲ್ಲಿ ರಾಗಿಯನ್ನು ಖರೀದಿ ಮಾಡಬೇಕು. ಅದು ಅವರ ಸ್ಥಳದಲ್ಲಿಯೇ ಖರೀದಿಸಲು ಮುಂದಾಗಬೇಕು. ಅವರಿಗೆ ಅತಿ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ತುರ್ತಾಗಿ ಮಾಡಬೇಕು ಎಂದರು. ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಪ್ರಕ್ರಿಯೆ ನಡೆಸಬೇಕು. ಸಂಘ-ಸಂಸ್ಥೆಗಳು ಇದಕ್ಕೆ ನೆರವು ನೀಡುವ ಮೂಲಕ ಅವರನ್ನು ಬೆಂಬಲಿಸಬೇಕು. ಸರ್ಕಾರದಿಂದ ಎಂ ಎಸ್ ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಕೊಂಡುಕೊಳ್ಳುವಂತೆ ನೋಡಿಕೊಳ್ಳಬೇಕು. ಇದಕ್ಕೆ ಕೃಷಿ ಇಲಾಖೆ ನೆರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಜೆ ಎಸ್ ಬಿ ಪ್ರತಿಷ್ಠಾನದ ಶಶಿಕುಮಾರ್ ಮಾತನಾಡಿ, ಇಲ್ಲಿನ ಜನ, ಬೆಟ್ಟ-ಗುಡ್ಡ, ಕಾಡು, ರಾಗಿ, ಸೋಗಡು, ಸಂಸ್ಕೃತಿ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದ್ದು, ಅದನ್ನು ಚಾಮರಾಜನಗರ ಜಿಲ್ಲೆಯ ಪರಂಪರೆ ಎಂದು ಪರಿಗಣಿಸಲಾಗಿದೆ. ಇದನ್ನು ಒಂದು ಬೆಳೆ ಎಂದು ಪರಿಗಣಿಸದೆ, ಅವರ ಕೃಷಿ ಜ್ಞಾನ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ನೋಡಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು. ಅವರು ಗುಳೆ ಹೋಗುವುದನ್ನು ತಪ್ಪಿಸಿ, ಅತ್ಮಗೌರವದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಂಡು ಬಾಳುವುದಕ್ಕೆ ಸಹಕಾರ ನೀಡಬೇಕೆಂದು, ಅದನ್ನು ನಮ್ಮ ಕರ್ತವ್ಯವೆಂದು ಭಾವಿಸಿ ಸಹಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಹಾಡಿಯ ಜನರು, ಶಾಲೆಯ ಶಿಕ್ಷಕರು, ಸ್ಥಳೀಯ ಮುಖಂಡರು, ಜನ ಪ್ರತಿನಿಧಿಗಳು, ಮಹದೇವ, ಚಿಕ್ಕರಾಜು, ಮಾದೇಶ, ಪ್ರಸಾದ, ಬೊಮ್ಮ, ಮಾದಪ್ಪ, ಮಹದೇವಪ್ರಸಾದ, ಸ್ವಾಮಿ, ಜೋಬೀಸ್ ಜೋಸೆಫ್, ಐಸಾಕ್, ಬಿಜು, ಮುರುಗೇಶ, ಜಗದೀಶ, ಚಂದ್ರು, ಕುಮಾರ, ಮಹದೇವು, ಮುಂತಾದವರಿದ್ದರು.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…