ಇಂದಿನಿಂದ ವಿಧಾನಸಭೆ ಬಜೆಟ್ ಅಧಿವೇಶನ #BudgetSession ಆರಂಭಗೊಳ್ಳಲಿದೆ. ಹಣಕಾಸು ಸಚಿವರೂ ಆದ ಸಿಎಂ ಸಿದ್ದರಾಮಯ್ಯ #Siddaramaiah ಹೊಸ ಸರ್ಕಾರದ ಮೊದಲ ಪರಿಪೂರ್ಣ ಬಜೆಟ್ ಮಂಡಿಸಲಿದ್ದಾರೆ. ವಿಪಕ್ಷಗಳೂ ಸರ್ಕಾರವನ್ನು ಕಟ್ಟಿಹಾಕಲು ಅಸ್ತ್ರ ತಯಾರು ಮಾಡಿಕೊಂಡಿವೆ. ಹೊಸ ಸರ್ಕಾರದ ಮೊದಲ ಸಂಪೂರ್ಣ ಅಧಿವೇಶನ ಇಂದಿನಿಂದ ಶುರುವಾಗುತ್ತಿದೆ. ಬರೀ ಅಧಿವೇಶನ ಅಲ್ಲ, ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಹೊಸ ಸರ್ಕಾರದ ಮೊದಲ ಪರಿಪೂರ್ಣ ಬಜೆಟ್ ಮಂಡಿಸಲಿದ್ದಾರೆ.
16ನೇ ವಿಧಾನಸಭೆಯ ಮೊದಲ ಅಧಿವೇಶನ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಮೊಟ್ಟ ಮೊದಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಭಾಷಣ ಮಾಡುತ್ತಾರೆ. ಆಮೇಲೆ ನೂತನ ಶಾಸಕರಿಗೆ ಅಭಿನಂದನೆ, ಅಗಲಿದ ಗಣ್ಯರಿಗೆ ಸಂತಾಪ ಸೂಚನೆ. ಆಮೇಲೆ ಸಣ್ಣಪುಟ್ಟ ಚರ್ಚೆ ಮುಗಿಸಿ ಕಲಾಪ ಅಂತ್ಯವಾಗಲಿದೆ.
ಇಂದಿನಿಂದ ಜುಲೈ 14ರವರೆಗೆ ಕಲಾಪ ನಡೆಯಲಿದ್ದು, 2 ದಿನ ರಜೆ, 8 ದಿನ ಅಧಿವೇಶನ ನಡೆಯಲಿದೆ. ಸಿದ್ದರಾಮಯ್ಯ ಸರ್ಕಾರವನ್ನ ಕಟ್ಟಿಹಾಕುವ ಗಂಡುಗಲಿ ಯಾರು ಎಂದು ಇನ್ನೂ ನಿರ್ಧಾರ ಆಗಿಲ್ಲ. ಸರ್ಕಾರವನ್ನ ಕಟ್ಟಿ ಹಾಕಲು ಜೆಡಿಎಸ್, ಬಿಜೆಪಿ ಕೂಡ ಸರ್ವಸನ್ನದ್ಧವಾಗುತ್ತಿದೆ. ಜೆಡಿಎಸ್ ಅಂತೂ ಒಂದು ಹೆಜ್ಜೆ ಮುಂದಿಟ್ಟಿದ್ದು ಬೆಂಗಳೂರಿನ ಜೆ.ಪಿ ಭವನದಲ್ಲಿ ಶಾಸಕರ ಜೊತೆ ಸಭೆಯನ್ನೂ ನಡೆಸಿದ್ದಾರೆ.
ಇತ್ತ, ಸಿದ್ದರಾಮಯ್ಯ ಜುಲೈ 7ಕ್ಕೆ ಅಂದರೆ ಶುಕ್ರವಾರ ಬಜೆಟ್ ಮಂಡಿಸುತ್ತಾರೆ. ಆದರೆ ಬಜೆಟ್ ಲೆಕ್ಕಾಚಾರ ಅಷ್ಟು ಸುಲಭವಲ್ಲ. ಏಕೆಂದರೆ ಸಿದ್ದು ಸರ್ಕಾರಕ್ಕೆ ಸವಾಲುಗಳು ಸಾಕಷ್ಟಿವೆ. 16ನೇ ವಿಧಾನಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಮಂಡಿಸ್ತಿರುವ 14ನೇ ಬಜೆಟ್ ಇದಾಗಿದ್ದು, ಮೊದಲು ಕೊಟ್ಟಿರುವ ಐದು ಗ್ಯಾರಂಟಿಗಳನ್ನ ಅನುಷ್ಠಾನಕ್ಕೆ ತರ್ಬೇಕಾದ ಅನಿವಾರ್ಯತೆ ಇದೆ.
ಎಂತ ಮಾರ್ರೇ.... ಈ ಮನುಷ್ಯರಿಗೆ ಒಂದು ಸೊಲ್ಪ ಹೊತ್ತು ಕರೆಂಟ್ ಹೊದ್ರೆ ಕೂಡ್ಲೆ…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ, ಪುತ್ತೂರು,ಚೆಂಬು ಪ್ರದೇಶದ ಕೆಲವು ಕಡೆ 100…
ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟಮಾಡುವವರು ಮತ್ತು ಕೃತಕ ಅಭಾವ ಸೃಷ್ಟಿಸುವವರ…
ರೈತರು ಉತ್ತಮ ಇಳುವರಿ ಪಡೆಯಲು ಡಿಎಪಿ ಗೊಬ್ಬರಕ್ಕೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಲು…
‘ಏಕಲವ್ಯ’ – ಈ ಪದವು ಸಾಧನೆಯ ಐಕಾನ್. ಪರ್ಯಾಯ ಪದ. ಸಾಧನೆಗೆ ಜಾತಿ,…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490