ವಿಶೇಷ ಗಿಡಮೂಲಿಕೆ ಔಷಧಿಗಳನ್ನು ಸಂರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದ ಅರಣ್ಯ ಇಲಾಖೆ

June 24, 2024
12:29 PM

ಹಸಿರಿನಲ್ಲಿ ಉಸಿರಿದೆ ಅಂತ ಬಲ್ಲವರು ಬಹಳ ಹಿಂದೆಯೇ ಹೇಳಿದ್ದಾರೆ. ನಮ್ಮ ಆರೋಗ್ಯ ಸಮಸ್ಯೆಗಳಿಗೆ(Health problem) ಪ್ರಕೃತಿಯಲ್ಲೇ(Nature) ಔಷಧಿ(Medicine) ಇದೆ ಎನ್ನುವುದು ಕೂಡ ಇದರ ಒಳಾರ್ಥವಾಗಿದೆ. ಏನಾದರೂ ಹೆಚ್ಚು ಕಮ್ಮಿಯಾಗಿ ರೋಗ ರುಜಿನ ಬಂದರೂ ಅದಕ್ಕೆ ತಕ್ಕುದಾದ ನಾಟಿ ಔಷಧಿಗಳು ಇರುತ್ತಿದ್ದವು. ಈ ಔಷಧಿಗಳ ಪೈಕಿ ಶುಂಠಿ, ಕಾಳು ಮೆಣಸು, ಜೀರಿಗೆ, ಜಾಯಿಕಾಯಿ, ತುಳಸಿ, ಪುದೀನ, ಬೇವು, ಹೀಗೆ ನುರಾರು ಬಗೆಯ ಔಷಧೀಯ ಸಸ್ಯಗಳು(Medicinal Plant) ಸೇರಿವೆ. ಆದರೆ ಕಾಲ ಕ್ರಮೇಣ ಈ ಸಸ್ಯಗಳು ಅವನತಿಯ ಹಾದಿ ಹಿಡದವು. ಆಧುನಿಕ ವೈದ್ಯ ಪದ್ಧತಿ ನಮ್ಮ ಪಾರಂಪರಿಕ ಔಷಧ ಶಾಸ್ತ್ರವನ್ನ ನಗಣ್ಯವಾಗುವಂತೆ ಮಾಡಿದೆ. ಹಾಗಾಗಿ ನಮ್ಮ ಪಶ್ಚಿಮ ಘಟ್ಟದಲ್ಲಿರುವ(Western Ghats) ವಿಶೇಷ ಗಿಡಮೂಲಿಕೆ ಔಷಧಿಗಳನ್ನ ಪತ್ತೆಹಚ್ಚುವ ಸಂರಕ್ಷಿಸುವ(Saving) ಪ್ರಯತ್ನಕ್ಕೆ ಅರಣ್ಯ ಇಲಾಖೆ(Forest Department) ಮುಂದಾಗಿದೆ.

Advertisement
Advertisement

ಪಶ್ಚಿಮಘಟ್ಟ, ಕರಾವಳಿ, ಬಯಲು ಸೀಮೆಯ ವಿವಿಧ ಔಷಧಿಗಳು ಕಣ್ಮರೆಯಾಗುತ್ತಿವೆ. ಆಸ್ಪತ್ರೆಗಳೇ ಇಲ್ಲದ ದಿನಗಳಲ್ಲಿ ಈ ಔಷಧೀಯ ಸಸ್ಯಗಳೇ ಮಾನವನ ಆರೋಗ್ಯ ಕಾಪಾಡುತ್ತಿದ್ದವು. ಹಾಗಾಗಿ ಈ ಔಷಧೀಯ ಸಸ್ಯಗಳನ್ನು ಗುರುತಿಸುವಂತಹ, ಸಂರಕ್ಷಿಸುವಂತಹ ಮಹತ್ವದ ಕಾರ್ಯಕ್ಕೆ ಅರಣ್ಯ ಇಲಾಖೆ ಮತ್ತು ಔಷಧಿ ಪ್ರಾಧಿಕಾರ ಕೈ ಹಾಕಿದೆ.

ಕೊಡಗಿನವರಾದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಈ ನಿಟ್ಟಿನಲ್ಲಿ ವಿಶೇಷ ಆಸಕ್ತಿವಹಿಸಿದ್ದಾರೆ. ಪಶ್ಚಿಮ ಘಟ್ಟ, ಕರಾವಳಿ ಮತ್ತು ಬಯಲು ಸೀಮೆಯ ವಿಶೇಷ ಔಷಧೀಯ ಸಸ್ಯಗಳನ್ನು ಗುರುತಿಸಿ ಅವುಗಳನ್ನು ಬೆಳೆಸುವ ಸಂರಕ್ಷಿಸುವ ಮತ್ತು ಔಷಧೀಯ ಉದ್ದೇಶಕ್ಕೆ ಪೂರೈಸುವ ಯೋಜನೆಗೆ ಕೈ ಹಾಕಿದ್ದಾರೆ. ಈಗಾಗಲೇ ಜಿಲ್ಲೆಗಳಲ್ಲಿ ಔಷಧೀಯ ಸಸ್ಯಗಳ ಕುರಿತು ಅರಿವು ಮೂಡಿಸುವ ಸಭೆ, ವಿಚಾರ ಸಂಕಿರಣಗಳನ್ನ ಆಯೋಜಿಸುತ್ತಿದ್ದಾರೆ.

ನಾಟಿ ಔಷಧಿ ಮತ್ತು ಔಷಧೀಯ ಸಸ್ಯಗಳ ಕುರಿತು ಮಾಹಿತಿ ಸಂಗ್ರಹಿಸುವುದು ಮತ್ತು ಸಂರಕ್ಷಿಸುವುದು ಅಷ್ಟು ಸುಲಭವಾಗಿಲ್ಲ. ಯಾಕಂದರೆ ನಾಟಿ ಔಷಧಿಗಳ ಗುಟ್ಟು ಬಿಟ್ಟು ಕೊಡಲು ನಾಟಿ ವಯದ್ಯರೇ ಸಿದ್ಧರಿರುವುದಿಲ್ಲ. ಅದು ಅಲ್ಲದೆ ಬಹಳಷ್ಟು ನಾಟಿ ವೈದ್ಯರು ಇಂದು ಜೀವಂತವಾಗಿಲ್ಲ. ಹಾಗಾಗಿ ಬಹಳಷ್ಟು ನಾಟಿ ಔಷಧಿಗಳು ಕೂಡ ಜನರ ಸಂಪರ್ಕ ಕಲೆದುಕೊಂಡಿದೆ. ಈ ಎಲ್ಲಾ ಸವಾಲುಗಳನ್ನ ಮೆಟ್ಟಿನಿಂತು ಜೀವವೈದ್ಯ ಮಂಡಳಿ ತನ್ನ ಪ್ರಯತ್ನದಲ್ಲಿ ಯಶಸ್ಸಾಗಲಿ ಎಂದು ಎಲ್ಲರು ಹಾರೈಸುತ್ತಿದ್ದಾರೆ.

ಗೋಪಾಲ್ ಸೋಮಯ್ಯ

ವಾಟ್ಸಪ್‌ ಮೂಲಕ ಬರೆದ ಬರಹವಾಗಿದೆ.

Advertisement

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 24-06-2025 | ಬದಲಾಯ್ತು ಹವಾಮಾನ ಲಕ್ಷಣಗಳು | ಜೂ.28 ವರೆಗೂ ಉತ್ತಮ ಮಳೆ ನಿರೀಕ್ಷೆ |
June 24, 2025
11:51 AM
by: ಸಾಯಿಶೇಖರ್ ಕರಿಕಳ
ದಾಖಲೆ ಧಾರಣೆಯತ್ತ ಕೊಬ್ಬರಿ | ತಿಪಟೂರಿನಲ್ಲಿ ಕ್ವಿಂಟಾಲ್‌ ಗೆ ಗರಿಷ್ಠ ದರ 26,167 ರೂಪಾಯಿಗೆ ಮಾರಾಟ
June 24, 2025
11:32 AM
by: ದ ರೂರಲ್ ಮಿರರ್.ಕಾಂ
ಒಬ್ಬರಿಂದೊಬ್ಬರು ಕಾಲೆಳೆದುಕೊಂಡರೆ ಹೇಗೆ..?
June 24, 2025
10:56 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಜಿಲ್ಲೆಯ ಅಲ್ಲಲ್ಲಿ ಇಂದು ಜೋರಾದ ಗಾಳಿ ಮಳೆ
June 24, 2025
10:45 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror