ಕಾಲುವೆಗಳಿಗೆ ಹರಿದ ಕಾವೇರಿ ನೀರು | ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರ

September 9, 2023
5:45 PM
ಪ್ರಾಧಿಕಾರದ ಆದೇಶದ ಪ್ರಕಾರ ಸೆಪ್ಟೆಂಬರ್ 11 ರವರೆಗೂ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಡ್ಯಾಂ ಕೆಳ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ ನಾಲ್ಕು ದಿನ ಮೊದಲೇ ಅಂದರೆ ಇಂದಿನಿಂದಲೇ ತಮಿಳುನಾಡಿಗೆ ನೀರು ಹರಿಸುವುದನ್ನು ಬಂದ್ ಮಾಡಿದೆ.

ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಂದಿನಂತೆ ಈ ಬಾರಿ ಮಳೆಯಾಗಿಲ್ಲ. ಹಾಗಾಗಿ ಕೆಆರ್‌ಎಸ್‌ ಡ್ಯಾಂ ಭರ್ತಿಯಾಗಿಲ್ಲ. ಇದರಿಂದ ಮಂಡ್ಯ ಹಾಗೂ ಹಳೇ ಮೈಸೂರು ಭಾಗ, ಬೆಂಗಳೂರು ಜನತೆ ಪರದಾಡುವಂತಾಗಿದೆ. ಆದರೆ ತಮಿಳುನಾಡು ಮಾತ್ರ ಇದಾವುದನ್ನು ತಲೆಕೆಡಿಸಿಕೊಳ್ಳದೆ, ತನ್ನ ಪಾಲಿನ ನೀರನ್ನು ಕೊಡುವಂತೆ ಪೀಡಿಸುತ್ತಿದೆ. ತೆಗೆದುಕೊಂಡಿದೆ ಕೂಡ. ಆದರೆ ಕೆಆರ್‌ಎಸ್‍ನಲ್ಲಿ ಗಣನೀಯ ಪ್ರಮಾಣದಲ್ಲಿ ನೀರುಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಹರಿಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ.

Advertisement

ಪ್ರಾಧಿಕಾರದ ಆದೇಶದ ಪ್ರಕಾರ ಸೆಪ್ಟೆಂಬರ್ 11 ರವರೆಗೂ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಡ್ಯಾಂ ಕೆಳ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ ನಾಲ್ಕು ದಿನ ಮೊದಲೇ ಅಂದರೆ ಇಂದಿನಿಂದಲೇ ತಮಿಳುನಾಡಿಗೆ ನೀರು ಹರಿಸುವುದನ್ನು ಬಂದ್ ಮಾಡಿದೆ. ಇಂದು ತಮಿಳುನಾಡಿಗೆ ನೀರು ಹರಿಸುವ ಬದಲು ರೈತರ ಬೆಳೆಗಳಿಗಾಗಿ ಕಾಲುವೆಗಳಿಗೆ ನೀರು ಹರಿಸಿದೆ. ಕಳೆದ 11 ದಿನದಲ್ಲಿ ತಮಿಳುನಾಡಿಗೆ 62 ಸಾವಿರ ಕ್ಯೂಸೆಕ್ ನೀರು ಹರಿದಿದೆ.

ಪ್ರಾಧಿಕಾರದ ಲೆಕ್ಕದ ಪ್ರಕಾರ ಸೆಪ್ಟೆಂಬರ್ 11ರೊಳಗೆ 75 ಸಾವಿರ ಕ್ಯೂಸೆಕ್ ನೀರು ಹರಿಯಬೇಕು. ಸದ್ಯ ನದಿಯಲ್ಲಿ ಹರಿಯುತ್ತಿರುವ ನೀರು 13 ಸಾವಿರ ಕ್ಯೂಸೆಕ್‍ನಷ್ಟಿದೆ. ಇದು ತಲುಪುವ ಹೊತ್ತಿಗೆ ಲೆಕ್ಕ ಸರಿ ಹೋಗುತ್ತದೆ ಎನ್ನಲಾಗಿದೆ. ಪ್ರಸ್ತುತ ಕೆಆರ್‌ಎಸ್‍ನಲ್ಲಿ 21 ಟಿಎಂಸಿ ನೀರಿದೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ
August 3, 2025
12:10 PM
by: ದ ರೂರಲ್ ಮಿರರ್.ಕಾಂ
ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌
August 3, 2025
9:00 AM
by: ದ ರೂರಲ್ ಮಿರರ್.ಕಾಂ
ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು
August 3, 2025
8:00 AM
by: ನಾ.ಕಾರಂತ ಪೆರಾಜೆ
ಪ್ರೇಮ ವಿಚಾರದಲ್ಲಿ ಈ ರಾಶಿಯವರಿಗೆ ಭಾವನಾತ್ಮಕ ಏರಿಳಿತ
August 3, 2025
8:00 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group