ಬಜೆ ಸಸ್ಯ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಅಧಿಕ ನೀರನ್ನು ಹೀರಿಕೊಳ್ಳುವ ಈ ಸಸ್ಯ ಭದ್ರವಾಗಿ ಬೇರೂರುತ್ತದೆ. ಜೊತೆಗೆ, ಮನೆ ಮದ್ದಾಗಿ ಬಳಸುವ ಈ ಗಿಡ ಬಜೆ ಬೇರು ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಔಷಧವಾಗಿ ಇದನ್ನು ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಖಾರ. ಆದರೆ, ಇದರಿಂದ ಹೊರಹೊಮ್ಮುವ ಸುವಾಸನೆ ಬಹಳ ಪರಿಮಳ. ಬಜೆ.. ಈ ಬೇರು ಬಹಳ ಹಿಂದಿನಿಂದಲೂ ಔಷಧಿಯಾಗಿ ಬಳಕೆಯಾಗುತ್ತಿದೆ.
- ಚಿಕ್ಕಮಕ್ಕಳಿಗೆ 1ಗುಂಜಿ ಪ್ರಮಾಣದ ಬೇರನ್ನು ಎದೆಹಾಲಲ್ಲಿ ತೇಯ್ದು ನೆಕ್ಕಿಸಿದರೆ ಮಾತು ಸ್ಪಷ್ಟವಾಗಿ ಬರುವುದು.
- ಬಜೆಯನ್ನು ತೆಯ್ದು ಕಾಲು ಚಮಚದಷ್ಟು ಗಂಧ ಮಾಡಿ ಜೇನಿನೊಡನೆ ಸೇವಿಸಿದರೆ ಶೀತ ಕಫ ಕರಗುವುದು.
- ಬಜೆಯ ಬೇರನ್ನು ತೇಯ್ದು ತಲೆಗೆ ಲೇಪಿಸಿದರೆ ತಲೆನೋವು ಕಡಿಮೆಯಾಗುವುದು.ಸಂಧಿವಾತದ ನೋವುಗಳಿಗೆ ಲೇಪಿಸುವುದರಿಂದ ನೋವು ಕಡಿಮೆಯಾಗುವುದು.
- ಚಿಕ್ಕಮಕ್ಕಳಿಗೆ ಹೊಟ್ಟೆಯುಬ್ಬರ ಬೇದಿ ಕಾಣಿಸಿದಾಗ ಬಜೆ ತೇಯ್ದು ಹರಳೆಣ್ಣೆ ಬೆರೆಸಿ ಹೊಟ್ಟೆಯ ಮೇಲೆ ಹೊಕ್ಕಳಿನ ಸುತ್ತ ಲೇಪಿಸಬೇಕು.
- ಬಜೆ ತೇಯ್ದು ಬೆಣ್ಣೆ/ತುಪ್ಪದಲ್ಲಿ ಬೆರೆಸಿ ಮಕ್ಕಳಿಗೆ ನೆಕ್ಕಿಸಿದರೆ ಬುದ್ಧಿಶಕ್ತಿ,ಜ್ಞಾಪಕಶಕ್ತಿ ಹೆಚ್ಚುವುದು ರೋಗನಿರೋಧಕ ಶಕ್ತಿ ಹೆಚ್ಚುವುದು(ಅಲ್ಪಪ್ರಮಾಣದಲ್ಲಿ)
- ಬಜೆಯ ಸೇವನೆಯಿಂದ ಜಂತುಹುಳು ನಿವಾರಣೆಯಾಗುವುದು.
- ಮಕ್ಕಳಿಗೆ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿದರೆ ಚೂರು ಬಜೆ ತೇಯ್ದು ನೆಕ್ಕಿಸಿದರೆ ಜ್ವರ ಕಡಿಮೆಯಾಗುವುದು.
- ಬಜೆಯ ಕಷಾಯ ಸೇವಿಸಿದರೆ ಮೂತ್ರಕೋಶದ ಕಲ್ಲು ಕರಗುವುದು.ಮೂತ್ರಬಂಧ ಸರಿಯಾಗುವುದು.
- ಬಜೆಯ ಗಂಧ ಸೇವಿಸಿದರೆ ಕಂಠಶುದ್ಧಿಯಾಗುವುದು, ಉಗ್ಗು ನಿವಾರಣೆಯಾಗುವುದು,ಮೂಲವ್ಯಾಧಿ ಗುಣವಾಗುವುದು.(ಹಸುವಿನ ಹಾಲಲ್ಲಿ ತೇಯ್ದು ಜೇನಿನೊಡನೆ ಬೆರೆಸಿ ಸೇವಿಸಬೇಕು)
- ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣವನ್ನು ಪ್ರತಿದಿನ 10 ಗ್ರಾಂನಷ್ಟು ಬೆಳಗ್ಗೆ ಜೇನಿನೊಡನೆ ಸೇವಿಸುವುದರಿಂದ ಮೂರ್ಛೆರೋಗ ಗುಣವಾಗುವುದು.(೧ತಿಂಗಳು)
- ಪಾರ್ಶ್ವವಾಯು ಪೀಡಿತರಿಗೆ ಬಜೆ ಅರೆದು ಲೇಪಿಸಿದರೆ ಗುಣವಾಗುವುದು.
- ಬಾಯಿಯ ದುರ್ಗಂಧ ಹೋಗಲು ಚೂರು ಬಜೆಬೇರನ್ನು ಅಗಿಯಬೇಕು.
- ಇದು ವಾಂತಿ ನಿವಾರಕ, ಜಠರಸಮಸ್ಯೆ, ಹೊಟ್ಟೆನೋವು, ನರದೌರ್ಬಲ್ಯ, ಶ್ವಾಸನಾಳದ ಸೋಂಕು, ಆಮಶಂಕೆ, ಹಾವು ವಿಷಜಂತುಗಳ ಕಡಿತ ಮುಂತಾದವುಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ.
- ಮಹಿಳೆ ಪ್ರೆಗ್ನೆಂಟ್ ಆಗಿದ್ದು ತಿಳಿದ ಕೂಡಲೆ ಬಜೆಯ ಗಿಡ ವಿರುವ ಬೇರಿನಲ್ಲಿ ಬಂಗಾರದ ಸರಿಗೆ ತೂರಿಸಿ ಗುರುತು ಮಾಡಿಕೊಂಡು ಬೆಳೆಯಲು ಬಿಡಬೇಕು ಮಗುವಿನ ಜನನದ ನಂತರ ಗುರುತು ಮಾಡಿದ ಬೇರನ್ನು ಕಿತ್ತರೆ ಬಂಗಾರದ ಸರಿಗೆ ಬಜೆಯಲ್ಲಿ ಲೀನವಾಗಿ ಕರಗಿರುತ್ತದೆ.ಇದನ್ನು ಮಗುವಿಗೆ ಉಪಯೋಗ ಮಾಡಿದರೆ ಸ್ವರ್ಣ ಪ್ರಾಶನ ಪ್ರತ್ಯೇಕ ವಾಗಿ ಮಾಡುವ ಅಗತ್ಯ ಇರುವುದಿಲ್ಲ. ಇದು ತುಂಬಾ ಉಪಯುಕ್ತ ವಾದ ಔಷಧಿ.
- ವಿಶೇಷ ಸೂಚನೆ ಬಜೆ ಅತಿಯಾದರೆ ಪಿತ್ತ ಹೆಚ್ಚಾಗುತ್ತದೆ.ಲೈಂಗಿಕ ಸಾಮರ್ಥ್ಯ ಕುಗ್ಗುತ್ತದೆ.
ಬರಹ :
ಸುಮನಾ ಮಳಲಗದ್ದೆ, ಪಾರಂಪರಿಕ ವೈದ್ಯರು
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel