ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ ಧರ್ಮವೆಂದೇ ಪರಿಗಣಿಸಲಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.…..ಮುಂದೆ ಓದಿ….
ದೆಹಲಿಯಲ್ಲಿ ಅವರು ಸ್ವಾಮಿ ವಿಜಯಾನಂದ ಅವರು ರಚಿಸಿರುವ ‘’ ದ ಹಿಂದೂ ಮ್ಯಾನಿಫ್ಯಾಸ್ಟೋ ‘’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಭಾರತವು ಎಂದಿಗೂ ಅನ್ಯ ಧರ್ಮೀಯರನ್ನು ಅಗೌರವಿಸುವುದಾಗಲಿ, ಹಾನಿಯುಂಟು ಮಾಡುವುದಾಗಲಿ ಮಾಡಿಲ್ಲ. ಆದರೆ, ಯಾರಿಂದಲಾದರೂ ಸಮಾಜಕ್ಕೆ ಅಥವಾ ಧರ್ಮಕ್ಕೆ ಚ್ಯುತಿಯುಂಟಾದಲ್ಲಿ ಅವರನ್ನು ಶಿಕ್ಷಿಸುವುದು ತಪ್ಪೆನಿಸುವುದಿಲ್ಲ. ಭಗವದ್ಗೀತೆಯಲ್ಲೂ ಶ್ರೀ ಕೃಷ್ಣ ಪರಮಾತ್ಮ ಇದನ್ನೆ ಉಲ್ಲೇಖಿಸಿದ್ದಾನೆ. ಅರ್ಜುನ ಯುದ್ಧ ಮಾಡಿದ್ದು, ಬಂಧು ಬಾಂಧವರನ್ನೇ ಹತ್ಯೆ ಮಾಡಿದ್ದು ಸಹ ಧರ್ಮವೇ ಆಗುತ್ತದೆ ಎಂದು ಭಗವಂತ ಉಲ್ಲೇಖಿಸಿದ್ದಾನೆ. ಭಾರತ ಅಂಹಿಸಾ ಮಾರ್ಗದಲ್ಲಿ ಸಾಗುತ್ತಿದ್ದು, ಧರ್ಮ ರಕ್ಷಣೆಗೆ ಆದ್ಯತೆ ನೀಡುತ್ತಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.