ಅಡಿಕೆ ಧಾರಣೆ ಏರಿಕೆಗೆ ಕಾರಣವೇನು..? | ಕಳ್ಳಸಾಗಾಣಿಕೆಯಾಗುತ್ತಿದ್ದ ಅಡಿಕೆಗೆ ಕಡಿವಾಣ ಹೇಗಾಯ್ತು..? |

March 15, 2024
2:41 PM
ಅಡಿಕೆ ಮಾರುಕಟ್ಟೆ ಏರಿಕೆಗೆ ಅಕ್ರಮವಾಗಿ ಅಡಿಕೆ ಆಮದಾಗುವುದಕ್ಕೆ ಕಡಿವಾಣವಾಗುವುದು ಕೂಡಾ ಕಾರಣವಾಗುತ್ತದೆ

 ಅಸ್ಸಾಂ, ಮೇಘಾಲಯ ಸೇರಿದಂತೆ ಈಶಾನ್ಯ ರಾಜ್ಯಗಳಿಂದ ಕಳೆದ ಕೆಲವು ಸಮಯಗಳಿಂದ ಕಳ್ಳದಾರಿಯ ಮೂಲಕ ಸಾಗಾಟವಾಗುತ್ತಿದ್ದ ಅಡಿಕೆಗೆ ಬಹುತೇಕ ಕಡಿವಾಣ ಬಿದ್ದಿದೆ ಎಂದು ಮೇಘಾಲಯದ ಸಾಮಾಜಿಕ ಸಂಘಟನೆಗಳು ಹೇಳಿವೆ.  ಕಳೆದ ಕೆಲವು ದಿನಗಳಿಂದ ಕಳ್ಳಸಾಗಾಣಿಕೆಯ ಮೂಲಕ ಬರುತ್ತಿದ್ದ ಅಡಿಕೆಗೆ ಕಡಿವಾಣ ಹಾಕಲಾಗಿದೆ. ಇದೀಗ ಅಡಿಕೆ ಧಾರಣೆಯೂ ಏರಿಕೆ ಕಾಣುತ್ತಿದೆ.

Advertisement
Advertisement
Advertisement

ಬಾಂಗ್ಲಾದೇಶದಿಂದ ವಿವಿಧ ಗಡಿಗಳ ಮೂಲಕ ಅಕ್ರಮವಾಗಿ ಬರ್ಮಾ ಅಡಿಕೆ ಸಾಗಾಟವನ್ನು ತಡೆಯಲು ಮೇಘಾಲಯದ  ವಿವಿಧ ಸಂಘಟನೆಗಳ ಪ್ರಯತ್ನದ ನಂತರ ಮೇಘಾಲಯ, ಅಸ್ಸಾಂ ಪ್ರದೇಶದಲ್ಲೂ ಅಡಿಕೆ ವಹಿವಾಟು ಸುಧಾರಣೆ ಕಂಡಿದೆ.  ಮೂಲಗಳ ಪ್ರಕಾರ ಅಕ್ರಮ ವ್ಯಾಪಾರವನ್ನು ಈಗ ನಿಲ್ಲಿಸಲಾಗಿದೆ, ಇದು ಮಾರುಕಟ್ಟೆಗಳು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳಲು ಕಾರಣವಾಯಿತು ಎಂದು ಮೇಘಾಲಯದ ವರದಿ ತಿಳಿಸಿದೆ. ಬರ್ಮಾ ಅಡಿಕೆ ಅಕ್ರಮ ಸಾಗಾಟದ ಕಾರಣದಿಂದ ಅಲ್ಲಿನ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದಕ್ಕಾಗಿ ಅಡಿಕೆ ಸಾಗಾಟ ತಡೆಗೆ ಹೋರಾಟ ನಡೆಯುತ್ತಿತ್ತು. ಕಳೆದ ಒಂದು ವಾರದಿಂದ ಯಾವುದೇ ಅಕ್ರಮ ಅಡಿಕೆ ಸಾಗಾಟದ  ವಾಹನಗಳು ಬರುತ್ತಿಲ್ಲ ಎಂದು ವರದಿ ಮಾಡಿದೆ.

Advertisement

ಅಡಿಕೆ ಅಕ್ರಮ ಸಾಗಾಟ ಹಾಗೂ ಈ ವಹಿವಾಟು ನಿಜಕ್ಕೂ ಕಳವಳಕಾರಿಯಾಗಿದೆ. ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲದ ಹಿಂದೆ ಇರುವವರನ್ನು ಸರ್ಕಾರವು ಪತ್ತೆ ಮಾಡಬೇಕಿತ್ತು ಹಾಗೂ ಸಾರ್ವಜನಿಕವಾಗಿ ಈ ವಿವರ ಬಹಿರಂಗಪಡಿಸಬೇಕಿತ್ತು. ಆದರೆ ಈ ಬಗ್ಗೆ ಇದುವರೆಗೂ ಏಕೆ ಯಾವುದೇ ಕ್ರಮಗಳು ಆಗಿಲ್ಲ ಎಂದು ಸಾಮಾಜಿಕ ಸಂಘಟನೆಗಳು ಪ್ರಶ್ನಿಸಿವೆ.

ಅಡಿಕೆ ಕಳ್ಳಸಾಗಾಣಿಕೆಯ ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಬೇಕು, ತನಿಖೆ ಏನಾಯಿತು ಎಂದು ಬಹಿರಂಗಗೊಳಿಸಬೇಕು ಹಾಗೂ  ಜನರಲ್ಲಿ ವಿಶ್ವಾಸ ಮೂಡಿಸಬೇಕು, ಎಂದು ಸಾಮಾಜಿಕ ಕಾರ್ಯಕರ್ತರು ಮೇಘಾಲಯದಲ್ಲಿ ಒತ್ತಾಯಿಸಿದ್ದಾರೆ.

Advertisement

Source : Meghalaya Media

As per sources,  Arecanut  smugglers from Meghalaya, Assam and Bangladesh, the illegal trade has now stopped, leading to markets recovering ever so slightly.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ| 21-11-2024 | ಮಳೆಯ ಸಾಧ್ಯತೆ ಕಡಿಮೆ | ನ.26 ಸುಮಾರಿಗೆ ಚಂಡಮಾರುತ ಸಾಧ್ಯತೆ |
November 21, 2024
2:52 PM
by: ಸಾಯಿಶೇಖರ್ ಕರಿಕಳ
ದ ಕ ಜಿಲ್ಲಾ ಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ
November 20, 2024
8:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-11-2024 | ರಾಜ್ಯದಲ್ಲಿ ಒಣಹವೆ | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ |
November 20, 2024
5:38 PM
by: ಸಾಯಿಶೇಖರ್ ಕರಿಕಳ
ರಾಜ್ಯದ ಕೈಗಾರಿಕೆಗಳಲ್ಲಿ ಹಸಿರು ತಂತ್ರಜ್ಞಾನ ಅಳವಡಿಸಲು ಆದ್ಯತೆ | ಮುಖ್ಯಮಂತ್ರಿ ಸಿದ್ದರಾಮಯ್ಯ
November 20, 2024
5:05 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror