ಖುಷಿ–ನೆಮ್ಮದಿ : ಆಧುನಿಕ ಜೀವನದಲ್ಲಿ ಶಾಸ್ತ್ರೋಕ್ತ ಪ್ರಾಮುಖ್ಯತೆ

November 9, 2025
12:01 PM

ಮಾನವ ಜೀವನದ ಮೂಲ ಗುರಿಯೇನು ಎಂಬ ಪ್ರಶ್ನೆ ದಶಕಗಳಿಂದ ತತ್ವಶಾಸ್ತ್ರ, ಧರ್ಮಶಾಸ್ತ್ರ, ಆಧ್ಯಾತ್ಮ ಹಾಗೂ ಸಾಹಿತ್ಯದ ಪ್ರಮುಖ ಚಿಂತನೆಯಾಗಿದೆ. ಒಬ್ಬನು ಆರ್ಥಿಕ ಸಂಪತ್ತಿನಲ್ಲಿ ಖುಷಿ ಹುಡುಕುತ್ತಾನೆ, ಮತ್ತೊಬ್ಬನು ಜ್ಞಾನದಲ್ಲಿ ನೆಮ್ಮದಿ ಕಾಣುತ್ತಾನೆ; ಇನ್ನೊಬ್ಬನು ಸಂಸಾರದಲ್ಲಿ, ಮತ್ತೊಬ್ಬನು ಮನರಂಜನೆಯಲ್ಲಿ. ಆದರೆ ಇವುಗಳ ಪೈಕಿ ಯಾವುದು ಶಾಶ್ವತ? ಯಾವುದು ನಿಜವಾದ ತೃಪ್ತಿಯನ್ನು ಕೊಡುತ್ತದೆ? ಈ ಪ್ರಶ್ನೆಗೆ ವೇದ, ಉಪನಿಷತ್, ಪುರಾಣ ಮತ್ತು ಭಗವದ್ಗೀತೆಯ ನಿದರ್ಶನಗಳ ಮೂಲಕ ವಿಮರ್ಶಾತ್ಮಕ ಉತ್ತರವನ್ನು ಹೇಳಿವೆ..

Advertisement
Advertisement

ಖುಷಿ ಮತ್ತು ನೆಮ್ಮದಿಯ ವ್ಯಾಖ್ಯಾನ :

ಖುಷಿ (ಆನಂದ, ಹರ್ಷ): ಕ್ಷಣಿಕ. ಅದು ಬಾಹ್ಯ ವಸ್ತು, ಸಾಧನೆ, ಘಟನೆಗಳಿಂದ ಉಂಟಾಗುವ ತಾತ್ಕಾಲಿಕ ಮನೋಭಾವ.

ನೆಮ್ಮದಿ (ಶಾಂತಿ, ): ಶಾಶ್ವತ. ಅದು ಆತ್ಮಸಾಕ್ಷಾತ್ಕಾರ, ಸಮಚಿತ್ತತೆ, ಮತ್ತು ಬಾಹ್ಯ–ಆಂತರಿಕ ಸಮತೋಲನದಿಂದ ದೊರೆಯುವ ಶಾಂತಿ.

ಉಪನಿಷತ್ತಿನಲ್ಲಿ: “शान्तो दान्त उपरति तितिक्षुः समाधाना भवति” (ಬ್ರಹ್ಮೋಪನಿಷತ್) –“ಶಾಂತೋ ದಾಂತ ಉಪರತಿ ತಿತಿಕ್ಷುಃ ಸಮಾಧಾನಾ ಭವತಿ” ಎಂಬುದಾಗಿ ಹೇಳಿದೆ . ಯಾವನು ಮನಸ್ಸನ್ನು ಶಾಂತಗೊಳಿಸಿಕೊಂಡಿದ್ದಾನೋ, ಇಂದ್ರಿಯಗಳನ್ನು ಜಯಿಸಿದ್ದಾನೋ, ಬಾಹ್ಯ ವಸ್ತುಗಳ ಆಸಕ್ತಿಯಿಂದ ಮುಕ್ತನಾಗಿದ್ದಾನೋ, ತಾಳ್ಮೆಯಿಂದಿರುವವನು, ಆತ್ಮದಲ್ಲಿ ಏಕಾಗ್ರತೆಯಿಂದ ಸ್ಥಿತನಾಗಿದ್ದಾನೋ – ಅವನೇ ನಿಜವಾದ ನೆಮ್ಮದಿಯನ್ನು ಪಡೆಯುತ್ತಾನೆ.”

ಆರ್ಥಿಕ ಸಂಪಾದನೆ ಮತ್ತು ಖುಷಿ

ಋಗ್ವೇದ ಹೇಳುತ್ತದೆ – “अन्नं वै प्राणिनां प्राणः” –  “ಅನ್ನಂ ವೈ ಪ್ರಾಣಿನಾಂ ಪ್ರಾಣಃ” ಅಂದರೆ ಅನ್ನ  (ಆರ್ಥಿಕ ಸಂಪತ್ತು ಸೇರಿ) ಪ್ರಾಣಿಗಳಿಗೆ ಜೀವ. ಬದುಕಲು ಸಂಪತ್ತು ಅಗತ್ಯ. ಆದರೆ ಅದರಲ್ಲಿ ಮಾತ್ರ ಖುಷಿ ಸೀಮಿತವಾಗುತ್ತದೆ.

ಈಗ ಪುರಾಣದ ಉದಾಹರಣೆ ತೆಗೆದುಕೊಂಡರೆ  ಕುಬೇರನ  ಬಳಿ ಅಪಾರ ಸಂಪತ್ತು ಇತ್ತು. ಆದರೂ ಅವನು ಲಕ್ಷ್ಮೀದೇವಿಯ ಅನುಗ್ರಹವನ್ನು ನಿರಂತರವಾಗಿ ಬಯಸುತ್ತಲೇ ಇರುತ್ತಿದ್ದನು . ಅತಂದರೆ  ಹಣ–ಸಂಪತ್ತು ನೆಮ್ಮದಿಗೆ ಕಾರಣವಾಗಲಿಲ್ಲ ಎಂಬುದು ಸ್ಪಷ್ಟ.

ಆದರಿಂದ ಜ್ಞಾನ ಸಂಪಾದನೆ ಮತ್ತು ನೆಮ್ಮದಿ ಯಾ ಬಗ್ಗೆ ಗಮನಹರಿಸಿದರೆ ಉಪನಿಷತ್ ವಾಕ್ಯ ಹೀಗೆ ಹೇಳುತ್ತದೆ . “विद्यया अमृतमश्नुते”  –“ವಿದ್ಯಯಾ ಅಮೃತಮಶ್ನುತೇ”- ಜ್ಞಾನದಿಂದ ಅಮೃತತ್ವ.

ಆದರೆ ಕೇವಲ ಬಾಹ್ಯ ಜ್ಞಾನ (ಶಾಸ್ತ್ರಪಾಠ, ವಿದ್ಯಾಭ್ಯಾಸ) ಅಹಂಕಾರಕ್ಕೆ ಕಾರಣವಾದರೆ, ಅದು ದುಃಖವನ್ನೇ ತರುತ್ತದೆ.ಆತ್ಮಜ್ಞಾನ ಮಾತ್ರ ನೆಮ್ಮದಿಯ ಮೂಲ ಎಂಬುದಾಗಿ .ಇದಕ್ಕೆ ನಾವು ಉದಾಹರಣೆಯಾಗಿ ಜನಕನ ಕಥೆಯನ್ನು ತೆಗೆದುಕೊಂಡಾಗ ಜನಕ ಮಹಾರಾಜನು ತತ್ತ್ವಜ್ಞಾನದಿಂದ ಪ್ರಸಿದ್ಧ. ಅಪಾರ ಸಂಪತ್ತು ಇದ್ದರೂ ಅವನು  ಯಾವಾಗಲೂ ಸ್ಥಿತಪ್ರಜ್ಞ. ಯಾಜ್ಞವಲ್ಕ್ಯರ ಉಪದೇಶದಿಂದ ಅವನು “ಆತ್ಮಜ್ಞಾನವೇ ಪರಮ ಸುಖ” ಎಂಬುದನ್ನು ಅರಿತುಕೊಂಡ.

ಸಂಸಾರ, ಮಕ್ಕಳು ಮತ್ತು ಮದುವೆ  ಎಂಬುದು  ಖುಷಿ–ದುಃಖದ ದ್ವಂದ್ವ.ಧರ್ಮಶಾಸ್ತ್ರ ಹೇಳುತ್ತದೆ – “गृहस्थाश्रमः सर्वाश्रमाणां मूलम्” –“ಗೃಹಸ್ಥಾಶ್ರಮಃ ಸರ್ವಾಶ್ರಮಾಣಾಂ ಮೂಲಮ್”. ಎಲ್ಲಾ ಆಶ್ರಮಗಳಲ್ಲಿ ಗೃಹಸ್ಥಾಶ್ರಮವೇ ಮೂಲ.ಅರ್ಥಾತ್ – ಬ್ರಹ್ಮಚರ್ಯ, ವಾನಪ್ರಸ್ಥ, ಸನ್ಯಾಸ – ಇವುಗಳೆಲ್ಲವೂ ಗೃಹಸ್ಥಾಶ್ರಮದ ಮೇಲೆ ಅವಲಂಬಿತ. ಏಕೆಂದರೆ ಗೃಹಸ್ಥನೊಬ್ಬನೇ ಧರ್ಮಾನುಸಾರ ಯಜ್ಞ, ದಾನ, ಅತಿಥಿ ಸೇವೆ, ವೃತ್ತಿ ಮೂಲಕ ಇತರ ಆಶ್ರಮಗಳನ್ನು ಪೋಷಿಸುತ್ತಾನೆ. ಆದರೆ ಕುಟುಂಬವು ನೆಲೆ ಮತ್ತು ಭದ್ರತೆಯನ್ನು ಕೊಟ್ಟರೂ, ನಿರೀಕ್ಷೆಗಳು, ಬಂಧನಗಳು, ಅಹಂಕಾರದಿಂದ ನೆಮ್ಮದಿ ತಪ್ಪಬಹುದು.

ಮಹಾಭಾರತದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಧೃತರಾಷ್ಟ್ರನಿಗೆ ನೂರು ಮಕ್ಕಳು ಇದ್ದರು. ಅವನು ಮಕ್ಕಳ ಪ್ರೀತಿಯಲ್ಲಿ ಬಂಧಿಯಾಗಿ, ಧರ್ಮ ಮಾರ್ಗವನ್ನು ಅನುಸರಿಸಲು ವಿಫಲರಾದ. ಇದರಿಂದ ಅವನಿಗೂ ಮಕ್ಕಳಿಗೂ ಖುಷಿ–ನೆಮ್ಮದಿ ಯಾವತ್ತೂ ಸಿಗಲಿಲ್ಲ.

ಮನರಂಜನೆ ಎಂಬುದು  ಕ್ಷಣಿಕ ಆನಂದ.ಮನರಂಜನೆ ಜೀವನಕ್ಕೆ ಸಡಗರ ನೀಡುತ್ತದೆ, ಆದರೆ ಅದು ನಿಜವಾದ ನೆಮ್ಮದಿಯ ಮೂಲವಲ್ಲ. ಉಪನಿಷತ್ತಿನಲ್ಲಿ ಹೇಳುವಂತೆ  “यदन्यत् सुखं लोके सर्वं तदन्यतया ध्रुवम्” “ಯದನ್ಯತ್ ಸುಖಂ ಲೋಕೇ ಸರ್ವಂ ತದನ್ಯತಯಾ ಧ್ರುವಮ್”“ಈ ಲೋಕದಲ್ಲಿರುವ ಇತರ ಎಲ್ಲ ಸುಖವೂ ಅಶಾಶ್ವತ.”

ಇಂದ್ರಿಯ–ವಿಷಯಗಳಿಂದ ಬರುವ ಎಲ್ಲಾ ಆನಂದ ಕ್ಷಣಿಕ; ಶಾಶ್ವತವಾದ ಸುಖವು ಆತ್ಮಜ್ಞಾನದಿಂದ ಮಾತ್ರ ಸಾಧ್ಯ.ಲೋಕದಲ್ಲಿರುವ ಎಲ್ಲಾ ಸುಖವೂ ಅಶಾಶ್ವತ.

ಆದ್ದರಿಂದ ಶಾಸ್ತ್ರೋಕ್ತ ನಿಷ್ಕರ್ಷೆ ಯೇ ನೆಮ್ಮದಿಯ ಮಾರ್ಗ

ಭಗವದ್ಗೀತೆಯಲ್ಲಿ (5.12):“युक्तः कर्मफलं त्यक्त्वा शान्तिमाप्नोति नैष्ठिकीम्”   “ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್”  “ಯೋಗಯುಕ್ತನಾದವನು ತನ್ನ ಕರ್ಮಫಲವನ್ನು ತ್ಯಜಿಸಿ ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ.”

ಅಂದರೆ, ತನ್ನ ಕರ್ಮವನ್ನು ಫಲಾಸಕ್ತಿಯಿಲ್ಲದೆ ಮಾಡುವವನು (ಕರ್ಮಯೋಗಿ) ನಿಜವಾದ ನೆಮ್ಮದಿ–ಶಾಂತಿಯನುಭವವನ್ನು ಪಡೆಯುತ್ತಾನೆ.ಅರ್ಥಾತ್ – ಫಲಾಸಕ್ತಿಯನ್ನು ಬಿಟ್ಟು, ಸಮಚಿತ್ತದಿಂದ ಕರ್ತವ್ಯ ಮಾಡುವವನು ಶಾಶ್ವತ ಶಾಂತಿಯನ್ನು ಪಡೆಯುತ್ತಾನೆ.

ಒಟ್ಟಿನಲ್ಲಿ ಖುಷಿ (ಆನಂದ) ಕ್ಷಣಿಕ, ಬಾಹ್ಯ ಮೂಲಗಳಿಂದ ಬರುತ್ತದೆ.

ನೆಮ್ಮದಿ (ಶಾಂತಿ) ಶಾಶ್ವತ, ಆತ್ಮಸಾಕ್ಷಾತ್ಕಾರದಿಂದ ಬರುತ್ತದೆ.

ಆರ್ಥಿಕ ಸಂಪತ್ತು, ಜ್ಞಾನ, ಸಂಸಾರ, ಮನರಂಜನೆ – ಇವುಗಳಲ್ಲಿ ಯಾವುದೂ ಶಾಶ್ವತ ನೆಮ್ಮದಿಯ ಮೂಲವಲ್ಲ; ಆದರೆ ಅವು ಸಾಧನ ಮಾತ್ರ.

ನಿಜಾರ್ಥದಲ್ಲಿ ನೆಮ್ಮದಿಗೆ ಮಾರ್ಗ ವೆಂದರೆ ಸಮಚಿತ್ತತೆ, ಅಹಂಕಾರ ನಿವೃತ್ತಿ, ಫಲಾಸಕ್ತಿ ತ್ಯಾಗ, ಆತ್ಮಜ್ಞಾನ ಮತ್ತು ಧರ್ಮ–ನೈತಿಕ ಬದುಕು.

ಜೀವನದಲ್ಲಿ ಸಂಪತ್ತು, ಟೆಕ್ನಾಲಜಿ, ಸ್ಪರ್ಧೆ – ಇವೆಲ್ಲವೂ ಜೀವನ ಸುಲಭ ಮಾಡಲು ಸಾಧನ, ಆದರೆ ಅವನ್ನು ಖುಷಿಯ ಗುರಿ ಎಂದು ಭ್ರಮಿಸಿದರೆ ನಿರಾಶೆ ತಪ್ಪದು.

ಸಂಪತ್ತನ್ನು ಬಳಸಿ ಸಮಾಜ ಸೇವೆ ಮಾಡಿದರೆ ನಿಜವಾದ ತೃಪ್ತಿ.ತಂತ್ರಜ್ಞಾನವನ್ನು ಅಳವಡಿಸಿಕೊಂಡರೂ ಅದರಲ್ಲಿ ಸಿಲುಕಿಕೊಳ್ಳದೆ ಆತ್ಮಶಾಂತಿ ಕಾಪಾಡಿದರೆ ನೆಮ್ಮದಿ.ಸ್ಪರ್ಧೆಯಲ್ಲಿ ಪಾಲ್ಗೊಂಡರೂ ಇತರರ ಮೇಲೆ ದ್ವೇಷ–ಅಸೂಯೆ ಇಟ್ಟರೆ ಅಶಾಂತಿ; ಆದರೆ ಸಮಾನತೆಯ ಮನೋಭಾವ ಇಟ್ಟರೆ ಖುಷಿ. ” ಖುಷಿ ಜೀವನದ ಬಾಹ್ಯ ಉಡುಗೊರೆ; ನೆಮ್ಮದಿ ಆತ್ಮಜ್ಞಾನದ ಆಂತರಿಕ ಸಂಪತ್ತು. “

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ
January 29, 2026
9:31 PM
by: ಮಹೇಶ್ ಪುಚ್ಚಪ್ಪಾಡಿ
ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror